ನೆಲಮಂಗಲ: ಹೆಚ್​ಐವಿ ಸೋಂಕಿತನ ಮೇಲೆ ಸಲಿಂಗ ಕಾಮಿಯಿಂದ ಅತ್ಯಾಚಾರ, ಮನೆ ದರೋಡೆ

| Updated By: ವಿವೇಕ ಬಿರಾದಾರ

Updated on: Jul 01, 2024 | 2:31 PM

ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ಹೆಚ್​ಐವಿ ಸೋಂಕಿತನ ಮೇಲೆ ಸಲಿಂಗ ಕಾಮಿ ಅತ್ಯಾಚಾರ ಎಸಗಿ, ಬಳಿಕ ಆತನ ಮನೆಯಲ್ಲಿದ್ದ ನಗದು, ಚಿನ್ನಭರಣ ದೋಚಿ ಪರಾರಿಯಾಗಿದ್ದಾನೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ಹೆಚ್​ಐವಿ ಸೋಂಕಿತನ ಮೇಲೆ ಸಲಿಂಗ ಕಾಮಿಯಿಂದ ಅತ್ಯಾಚಾರ, ಮನೆ ದರೋಡೆ
ಮಾದನಾಯಕನಹಳ್ಳಿ ಪೊಲೀಸ್ ಠಾಣೆ
Follow us on

ನೆಲಮಂಗಲ, ಜುಲೈ 01: ಹೆಚ್​ಐವಿ (HIV) ಸೋಂಕಿತನ ಮೇಲೆ ಸಲಿಂಗ ಕಾಮಿ ಅತ್ಯಾಚಾರ ಎಸಗಿ, ಬಳಿಕ ಆತನ ಮನೆಯಲ್ಲಿದ್ದ ನಗದು, ಚಿನ್ನಭರಣ ದೋಚಿರುವ ಘಟನೆ ಬೆಂಗಳೂರು ಉತ್ತರ (Bengaluru North) ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ. 56 ವರ್ಷದ ಹೆಚ್​ಐವಿ ಸೋಂಕಿತ ವ್ಯಕ್ತಿ ನೆಟ್ ವರ್ಕ್ ಪಾಸಿಟಿವ್ ಪೀಪಲ್ ಎಂಬ ಹೆಸರಿನ ಎನ್​ಜಿಒನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಶ್ಯಾಮ್ ಪಾಟೀಲ್ ಎಂಬ ವ್ಯಕ್ತಿ ತನಗೆ ಟಿಬಿ ಕಾಯಿಲೆ ಇದೆ ಎಂದು ಹೆಚ್​ಐವಿ ಸೋಂಕಿತ ವ್ಯಕ್ತಿಗೆ ಪರಿಚಯನಾಗಿದ್ದನು.

ಇತ್ತೀಚಿಗೆ ಹೆಚ್​ಐವಿ ಸೋಂಕಿತನ ಹೆಂಡತಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ಈ ವಿಚಾರ ತಿಳಿದು ಸಲಿಂಗಿ ಕಾಮಿ ಶ್ಯಾಮ್ ಪಾಟೀಲ್ ಹೆಚ್​ಐವಿ ಸೋಂಕಿತನ ಮನೆಗೆ ಬಂದಿದ್ದಾನೆ. ಬಳಿಕ ಜ್ಯೂಸ್​ನಲ್ಲಿ ನಿದ್ರೆ ಮಾತ್ರೆ ಹಾಕಿ ಹೆಚ್​ಐವಿ ಸೋಂಕಿತನಿಗೆ ನೀಡಿದ್ದಾನೆ. ಅಲ್ಲದೆ, ಹೆಚ್​ಐವಿ ಸೋಂಕಿತ ವ್ಯಕ್ತಿಯ ಮುಖಕ್ಕೆ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೆ.

ಬಳಿಕ ಶ್ಯಾಮ್​ ಪಾಟೀಲ್​ ಆತನ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮನೆಯ ಬೀರುವಿನಲ್ಲಿದ್ದ 88ಗ್ರಾಂ ಚಿನ್ನಭರಣ, 20 ಸಾವಿರ ನಗದು ಮೊಬೈಲ್ ದೋಚಿ ಸಲಿಂಗ ಕಾಮಿ ಶ್ಯಾಮ್​ ಪಾಟೀಲ್​ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷ

ಬೆಳಗ್ಗೆ ಎಚ್ಚರಗೊಂಡಾಗ ಹೆಚ್​ಐವಿ ಸೋಂಕಿತನಿಗೆ ತನ್ನ ಮೇಲೆ ಆದ ದೌರ್ಜನ್ಯ ಮತ್ತು ಮನೆಯಲ್ಲಿದ್ದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದು ಅರಿವಾಗಿದೆ. ಬಳಿಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಶ್ಯಾಮ್​ ಪಾಟೀಲ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 20 ಕ್ವಿಂಟಾಲ್​ ಪಡಿತರ ಅಕ್ಕಿ ಜಪ್ತಿ

ಕೊಪ್ಪಳ: ಅಕ್ರಮವಾಗಿ ಸಾಗಿಸುತ್ತಿದ್ದ 20 ಕ್ವಿಂಟಾಲ್​ ಪಡಿತರ ಅಕ್ಕಿಯನ್ನು ಕುಕನೂರು ತಾಲೂಕಿನ ತಳಕಲ್ ಗ್ರಾಮದ ಬಳಿ ಜಪ್ತಿ ಮಾಡಲಾಗಿದೆ. ಆಹಾರ ಇಲಾಖೆ ಮತ್ತು ಪೋಲಿಸರ ಜಂಟಿ ಕಾರ್ಯಾಚರಣೆ ನಡೆಸಿದ್ದು, ಗದಗದಿಂದ ಸಿಂಧನೂರಿಗೆ ಲಾರಿಯಲ್ಲಿ ಸಾಗಿಸುತ್ತಿದ್ದಾಗ ದಾಳಿ ಮಾಡಿ ಜಪ್ತಿ ಮಾಡಲಾಗಿದೆ. ಗಂಗಾವತಿ ತಾಲೂಕಿನ ಸಿದ್ದಣ್ಣ, ಗೋಪಾಲ್, ಅನಿಲ, ಚಾಲಕ ಶಕೀರ ಅಹ್ಮದ ಸೇರಿ 9 ಜನರ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Mon, 1 July 24