ಆಂಧ್ರ ವಿದ್ಯಾರ್ಥಿಗಳು, ಆರ್ಸಿಬಿ ಕಪ್ ಗೆಲ್ಲಲ್ಲ ವಿಕೇಟ್ಗಳು ಹೋಗುತ್ತಿವೆ ಅಂತ ಕಾಮೆಂಟ್ ಮಾಡಿ ಅಪಹಾಸ್ಯ ಮಾಡಿದ್ದರು. ಹೀಗಾಗಿ ಇಬ್ಬರ ನಡುವೆ ಕಿರಿಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಮಾತಿನ ಚಕಮಕಿ ಜೋರಾಗಿತ್ತು. ನಂತರ ಅದೇ ವಿಚಾರವಾಗಿ ಕಾಲೇಜು ಬಳಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದರು. ಇದೇ ವಿಚಾರವಾಗಿ ವಿದ್ಯಾರ್ಥಿಗಳು, ಪೋಷಕರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಜೊತೆಗೆ ಆಂಧ್ರ ವಿದ್ಯಾರ್ಥಿಗಳ ಪರವಾಗಿ ಕಾಲೇಜು ಆಡಳಿತ ಮಂಡಳಿಯಿದೆ ಅಂತ ಆಕ್ರೋಶ ಹೊರ ಹಾಕಿದ್ರು.
ಈ ಗಲಾಟೆ ನಡುವೆ ತಡರಾತ್ರಿ ಯುವತಿ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. 6ನೇ ಮಹಡಿಯಿಂದ ಹಾರಿ ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉಗಾಂಡ ಮೂಲದ ಹಸೀನಾ(24) ಮೃತ ದುರ್ದೈವಿ. ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಾವನ್ನಪಿದ ಹಿನ್ನೆಲೆ ಎರಡು ಕಡೆಯ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ ದ್ವಂಸ ಮಾಡಿದ್ದಾರೆ.
ಕಾಲೇಜಿಗೆ ರಜೆ ಘೋಷಿಸಿದ ಆಡಳಿತ ಮಂಡಳಿ:
ಘಟನೆ ಹಿನ್ನೆಲೆ ಗೀತಂ ವಿವಿಯ ಕಾಲೇಜಿಗೆ ಆಡಳಿತ ಮಂಡಳಿ ರಜೆ ಘೋಷಿಸಿದೆ. ಗೀತಂ ವಿಶ್ವವಿದ್ಯಾಲಯದ ಇಂದಿನ ಎಲ್ಲಾ ಪರೀಕ್ಷೆಗಳು ರದ್ದಾಗಿವೆ. ಸಿಬ್ಬಂದಿ ತರಗತಿಗೆ ಬಂದಿದ್ದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ.