ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಉದ್ಯಮಿ ಮನೆ ಮೇಲೆ ಐಟಿ ದಾಳಿ

ಇತ್ತೀಚೆಗೆ ಉದ್ಯಮಿ ವೆಂಕಟ್ ರಾಜು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟ್ ರಾಜು ಎಂಬುವವರ ಮನೆ ಮೇಲೆ ಇಂದು(ಏ16) ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 6 ಕಾರುಗಳಲ್ಲಿ ಬಂದಿರುವ 20 ಐಟಿ ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ನಡೆದಿದೆ.

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಉದ್ಯಮಿ ಮನೆ ಮೇಲೆ ಐಟಿ ದಾಳಿ
ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 16, 2024 | 4:51 PM

ಬೆಂಗಳೂರು, ಗ್ರಾಮಾಂತರ (ಏಪ್ರಿಲ್ 16): ಜಿಲ್ಲೆಯ ನೆಲಮಂಗಲದಲ್ಲಿ(Nelamangala) ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇತ್ತೀಚೆಗೆ ಉದ್ಯಮಿ ವೆಂಕಟ್ ರಾಜು ಕಾಂಗ್ರೆಸ್ ಪಕ್ಷದಲ್ಲಿ(Congress Party) ಗುರುತಿಸಿಕೊಂಡಿದ್ದರು. ಇಂದು (ಏ.16) 6 ಕಾರುಗಳಲ್ಲಿ ಬಂದಿರುವ 20 ಐಟಿ ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ನಡೆದಿದೆ.

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 75 ಲಕ್ಷ ಹಣ ಸೀಜ್​​

ಹಾವೇರಿ: ಕಾರಿನಲ್ಲಿ ಸಮರ್ಪಕ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 75 ಲಕ್ಷ ರೂ. ಹಣವನ್ನು​​ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ಚೆಕ್​ಪೋಸ್ಟ್​ನಲ್ಲಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. KA-68 -2370 ಸಿಪ್ಟ್ ಡಿಸೈಯರ್ ವಾಹನದಲ್ಲಿ ಅಕ್ರಮ ಹಣ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಣ ಜಪ್ತಿ ಮಾಡಿದ್ದು, ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕ್ರಷರ್ ಮಾಲೀಕನ ಮನೆ ಮೇಲೆ ಐಟಿ ದಾಳಿ: 1 ಕೋಟಿ ರೂ. ನಗದು, 800 ಗ್ರಾಂ ಚಿನ್ನಾಭರಣ ವಶಕ್ಕೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ