ಸಚಿವ ಈಶ್ವರ್ ಖಂಡ್ರೆ ಸಹೋದರ ಅಧ್ಯಕ್ಷತೆಯ ಬೀದರ್ ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿ
IT Raids On Bidar DCC Bank: ಬೀದರ್ ಡಿಸಿಸಿ ಬ್ಯಾಂಕ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಬ್ಯಾಂಕ್ನ ಅಕೌಂಟ್ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸಹೋದರ ಅಮರ ಖಂಡ್ರೆ ಅವರು ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿದ್ದಾರೆ.
ಬೀದರ್, (ಏಪ್ರಿಲ್ 12): ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರ ಸಹೋದರ ಅಧ್ಯಕ್ಷರಾಗಿರುವ ಬೀದರ್ ಡಿಸಿಸಿ ಬ್ಯಾಂಕ್(Bidar DCC Bank) ಮೇಲೆ ಐಟಿ ಅಧಿಕಾರಿಗಳು ದಾಳಿ ( Income tax raids) ಮಾಡಿದ್ದಾರೆ. ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ರೈತರಿಗೆ ಲೋನ್ ಕೊಡುತ್ತಿದ್ದಾರೆಂಬ ಆರೋಪದ ಮೇಲೆ ದಾಳಿಯಾಗಿದೆ. ಬೀದರ್ ನಗರದ ಹೈದ್ರಾಬಾದ್ ರಸ್ತೆಯಲ್ಲಿರು ಡಿಸಿಸಿ ಬ್ಯಾಂಕ್ ಮೇಲೆ 15ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಬ್ಯಾಂಕ್ ಅಕೌಂಟ್ ಪರಿಶೀಲನೆ ನಡೆಸಿದ್ದಾರೆ.
ತೆಲಂಗಾಣ, ಯಾದಗಿರಿ ಕಲಬುರಗಿಯಿಂದ ಬಂದಿರುವ ಐಡಿ ಅಧಿಕಾರಿಗಳು ಬ್ಯಾಂಕ್ನ ಅಕೌಂಟ್ಸ್ಗಳನ್ನು ಪರಿಶೀನಲೆ ಮಾಡುತ್ತಿದ್ದಾರೆ. ಇನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಸಹೋದರ ಅಮರ ಖಂಡ್ರೆ ಬೀದರ್ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಮೊಬೈಲ್ಗಳನ್ನು ಆಫ್ ಮಾಡಿಸಿ ಕೂಲಂಕುಶವಾಗಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.