ಬೆಂಗಳೂರು ಗ್ರಾಮಾಂತರ, ಮೇ.16: ಹಣವಿಲ್ಲದಿದ್ದರೂ ಹೊಸಕೋಟೆ(Hoskote) ನಗರದ ಖಾಸಗಿ ಆಸ್ವತ್ರೆ ವೈದ್ಯರು(Doctors) ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗುವಿಗೆ ಚಿಕಿತ್ಸೆ ಜೊತೆಗೆ ಶಸ್ತ್ರ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಹೌದು, ಮುಳಬಾಗಿಲು ಮೂಲದ ಮೂರು ವರ್ಷದ ಸ್ನೇಹ, ಆಟವಾಡುವ ವೇಳೆ ಕುಸಿದು ಬಿದ್ದು ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಬಳಿಕ ಮಗುವಿನ ಜೀವ ಉಳಿಸಲು ಅಂಗವಿಕಲ ತಂದೆ ಪರದಾಟ ನಡೆಸಿದ್ದರು.
ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗುವನ್ನು ಕೋಲಾರ ಹಾಗೂ ಬೆಂಗಳೂರಿನ ಪ್ರತಿಷ್ಟಿತ ಆಸ್ವತ್ರೆಗಳಿಗೆ ಕರಡದುಕೊಂಡು ಹೋದರೂ ಹಣಕಟ್ಟದ ಕಾರಣ ಆಡ್ಮಿಷನ್ ಮಾಡಿಕೊಂಡಿಲ್ಲ. ನಂತರ ಆ್ಯಂಬುಲೆನ್ಸ್ನಲ್ಲಿ ಮಗುವನ್ನ ಹಾಕಿಕೊಂಡು ಅಂಗವಿಕಲ ತಂದೆ ಬಾಬು ಮತ್ತು ತಾಯಿ ಲಾವಣ್ಯ ಪರದಾಡುತ್ತಿದ್ದರು. ಈ ಕುರಿತು ವೈದ್ಯ ಸುಪ್ರಿತ್ ಎಂಬುವವರಿಗೆ ಟಿವಿನೈನ್ ತಂಡ ವಿಷಯ ತಿಳಿಸಿತ್ತು.
ಇನ್ನು ವಿಷಯ ತಿಳಿಯುತ್ತಿದ್ದಂತೆ ಅಂಗವಿಕಲ ತಂದೆ ಗೋಳಾಟ ನೋಡಲಾರದೆ ಹಣವಿಲ್ಲದಿದ್ದರೂ ಕೂಡಲೇ ಆಸ್ವತ್ರೆಗೆ ದಾಖಲಿಸಿಕೊಂಡು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ ಕಾರಣ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಇದೀಗ ಮಗು ಚೇತರಿಕೆ ಕಂಡಿದ್ದು, ಮಗುವಿನ ಪೋಷಕರು ಭಾವುಕನಾಗಿ ಧನ್ಯವಾದ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ