AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿಗೆ ಹೃದಯ ಶಸ್ತ್ರ ಚಿಕಿತ್ಸೆ: ತಂದೆ ಆರೋಗ್ಯದ ಬಗ್ಗೆ ಪುತ್ರ ನಿಖಿಲ್​ ಹೇಳಿದ್ದಿಷ್ಟು

ಕಳೆದ ಮೂರು ದಿನಗಳ ಹಿಂದೆಯೇ ಹೆಚ್​ಡಿ ಕುಮಾರಸ್ವಾಮಿ ಅವರು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಾಜಿ ಸಿಎಂ ಕುಮಾರಸ್ವಾಮಿಗೆ 3ನೇ ಬಾರಿ​​​ ಹೃದಯ ಶಸ್ತ್ರಚಿಕಿತ್ಸೆ ನೆರವೇರಿತು. ಇನ್ನು ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಹಿನ್ನೆಲೆ ಶಾಸಕರಾದ ಸಮೃದ್ಧಿ ಮಂಜು, ಹರೀಶ್ ಗೌಡ, ಸ್ವರೂಪ್ ಸೇರಿದಂತೆ JDS ನಾಯಕರು ಚೆನ್ನೈಗೆ ಆಗಮಿಸಿದ್ದಾರೆ.

ಕುಮಾರಸ್ವಾಮಿಗೆ ಹೃದಯ ಶಸ್ತ್ರ ಚಿಕಿತ್ಸೆ: ತಂದೆ ಆರೋಗ್ಯದ ಬಗ್ಗೆ ಪುತ್ರ ನಿಖಿಲ್​ ಹೇಳಿದ್ದಿಷ್ಟು
ನಿಖಿಲ್​ ಕುಮಾರಸ್ವಾಮಿ
Sunil MH
| Updated By: ಕಿರಣ್ ಹನುಮಂತ್​ ಮಾದಾರ್|

Updated on: Mar 21, 2024 | 4:35 PM

Share

ಬೆಂಗಳೂರು, ಮಾ.21: ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ (Heart Operation) ಯಶಸ್ವಿಯಾಗಿದ್ದು, ಈ ಕುರಿತು ಪುತ್ರ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಂದೆಯ ಆರೋಗ್ಯದ ಕುರಿತು ಹಂಚಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಇಂದು(ಮಾ.21) ಅತ್ಯಂತ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆಯಿತು ಎಂದಿದ್ದಾರೆ.

ಇನ್ನು ಅಭಿಮಾನಿಗಳು, ಹಿತೈಷಿಗಳು, ಜಾತ್ಯತೀತ ಜನತಾದಳ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ರಾಜ್ಯದ ಸಮಸ್ತ ಜನತೆಯ ಹಾರೈಕೆ ಹಾಗೂ ಆ ಭಗವಂತನ ದಯೆಯಿಂದ ತಂದೆಯವರು ಆರೋಗ್ಯವಾಗಿದ್ದಾರೆ. ತಂದೆಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಹರಸಿದ ಪ್ರತಿಯೊಬ್ಬರಿಗೂ ನಮ್ಮ ಕುಟುಂಬದ ಪರವಾಗಿ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೃದಯಶಸ್ತ್ರಚಿಕಿತ್ಸೆ ಯಶಸ್ವಿ, ಚೆನ್ನೈನತ್ತ ಜೆಡಿಎಸ್ ನಾಯಕರು

ನಿಖಿಲ್​ ಕುಮಾರಸ್ವಾಮಿ ಟ್ವೀಟ್​

3ನೇ ಬಾರಿ​​​ ಹೃದಯ ಶಸ್ತ್ರಚಿಕಿತ್ಸೆ

ಕಳೆದ ಮೂರು ದಿನಗಳ ಹಿಂದೆಯೇ ಹೆಚ್​ಡಿ ಕುಮಾರಸ್ವಾಮಿ ಅವರು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಾಜಿ ಸಿಎಂ ಕುಮಾರಸ್ವಾಮಿಗೆ 3ನೇ ಬಾರಿ​​​ ಹೃದಯ ಶಸ್ತ್ರಚಿಕಿತ್ಸೆ ನೆರವೇರಿತು. ಇನ್ನು ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಹಿನ್ನೆಲೆ ಶಾಸಕರಾದ ಸಮೃದ್ಧಿ ಮಂಜು, ಹರೀಶ್ ಗೌಡ, ಸ್ವರೂಪ್ ಸೇರಿದಂತೆ JDS ನಾಯಕರು ಚೆನ್ನೈಗೆ ಆಗಮಿಸಿದ್ದಾರೆ. ಜೊತೆಗೆ ಮತ್ತೊಂದೆಡೆ ರಾಮನಗರ, ಮಂಡ್ಯ, ಹಾಸನ, ಮೃಸೂರು ಸೇರಿದಂತೆ ರಾಜ್ಯಾದ್ಯಂತ ಹೆಚ್​ಡಿ ಕುಮಾರಸ್ವಾಮಿ ಅಭಿಮಾನಿಗಳು, ಬೆಂಬಲಿಗರು ಪ್ರಾರ್ಥನೆ ಸಲ್ಲಿಸಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ