ಜಿಂದಾಲ್‌ ಸಿಟಿಯಲ್ಲಿ ಮತ್ತೊಂದು ಅವಗಢ: 17ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

| Updated By: preethi shettigar

Updated on: Oct 29, 2021 | 9:11 AM

ಮೆಟಲ್ ವಿಂಡೋಸ್ ಅಳವಡಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರ್ಮಿಕರ ಸುರಕ್ಷತೆ ಕ್ರಮ ಅನುಸರಿದೆ ನಿರ್ಲಕ್ಷ್ಯ ವಹಿಸಿದ್ದರಿಂದ ಜಿಂದಾಲ್ ಸಿಟಿ ಕಂಪನಿಯ ಮೇಲ್ವಿಚಾರಕ ರಾಹುಲ್ ಹಾಗೂ ಗುತ್ತಿಗೆದಾರನ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಂದಾಲ್‌ ಸಿಟಿಯಲ್ಲಿ ಮತ್ತೊಂದು ಅವಗಢ: 17ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು
ಮಾದನಾಯಕನಹಳ್ಳಿ ಠಾಣೆ
Follow us on

ಬೆಂಗಳೂರು: 17ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಗ್ರಾಮದ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ನಜೀಮುದ್ದೀನ್(44) ಮೃತ ದುರ್ದೈವಿ. ಜಿಂದಾಲ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೊಂದು ಅವಗಢ ಸಂಭವಿಸಿದ್ದು, ಪ್ರತಿಷ್ಟಿತ ಪ್ರೆಸ್ಟೀಜ್ ಜಿಂದಾಲ್ ಸಿಟಿ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮೆಟಲ್ ವಿಂಡೋಸ್ ಅಳವಡಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರ್ಮಿಕರ ಸುರಕ್ಷತೆ ಕ್ರಮ ಅನುಸರಿದೆ ನಿರ್ಲಕ್ಷ್ಯ ವಹಿಸಿದ್ದರಿಂದ ಜಿಂದಾಲ್ ಸಿಟಿ ಕಂಪನಿಯ ಮೇಲ್ವಿಚಾರಕ ರಾಹುಲ್ ಹಾಗೂ ಗುತ್ತಿಗೆದಾರನ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. IPC1860-U/S 287.304(A)ರೀತ್ಯಾ ದಾಖಲಿಸಲಾಗಿದೆ.

ಮಾರ್ಚ್22 ರಂದು 6ನೇ ಮಹಡಿಯಿಂದ ಬಿದ್ದು ಕಾರ್ಮಿಕ ಬಾಲೇಂದ್ರ(30) ಮೃತ ಪಟ್ಟಿದ್ದರು. ಈ ಬೆನ್ನಲ್ಲೇ ಜಿಂದಾಲ್‌ ಸಿಟಿಯಲ್ಲಿ ಮತ್ತೊಂದು ಅವಗಢ ಸಂಭವಿಸಿದೆ.

ಇದನ್ನೂ ಓದಿ:
ಆಗುಂಬೆ: ಆಕಸ್ಮಿಕ ಬೆಂಕಿಯಿಂದ ರಸ್ತೆಯಲ್ಲೇ ಧಗಧಗಿಸಿದ ಕಾರು; ತಪ್ಪಿತು ಭಾರೀ ಅವಗಢ

Jindal Steel And Power Limited: ಜಿಂದಾಲ್​ ಸ್ಟೀಲ್​ನಿಂದ ಸೆಪ್ಟೆಂಬರ್ ಕೊನೆ​ ತ್ರೈಮಾಸಿಕಕ್ಕೆ ಸಾರ್ವಕಾಲಿಕ ದಾಖಲೆ ಮಾರಾಟ