AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jindal Steel And Power Limited: ಜಿಂದಾಲ್​ ಸ್ಟೀಲ್​ನಿಂದ ಸೆಪ್ಟೆಂಬರ್ ಕೊನೆ​ ತ್ರೈಮಾಸಿಕಕ್ಕೆ ಸಾರ್ವಕಾಲಿಕ ದಾಖಲೆ ಮಾರಾಟ

ಜಿಂದಾಲ್ ಸ್ಟೀಲ್ ಅಂಡ್ ಪವರ್ ಕಂಪೆನಿಯಿಂದ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸಾರ್ವಕಾಲಿಕ ದಾಖಲೆಯ ಉಕ್ಕಿನ ಮಾರಾಟ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Jindal Steel And Power Limited: ಜಿಂದಾಲ್​ ಸ್ಟೀಲ್​ನಿಂದ ಸೆಪ್ಟೆಂಬರ್ ಕೊನೆ​ ತ್ರೈಮಾಸಿಕಕ್ಕೆ ಸಾರ್ವಕಾಲಿಕ ದಾಖಲೆ ಮಾರಾಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 05, 2021 | 12:21 PM

Share

ಜಿಂದಾಲ್ ಸ್ಟೀಲ್ ಅಂಡ್ ಪವರ್​ ಲಿಮಿಟೆಡ್​ ಈವರೆಗಿನ (ಸಾರ್ವಕಾಲಿಕ) ಅತ್ಯಧಿಕ ಉಕ್ಕಿನ ಮಾರಾಟವನ್ನು ಪ್ರಸಕ್ತ ವರ್ಷದ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲಿಸಿದೆ ಎಂದು ಕಂಪೆನಿಯು ಮಂಗಳವಾರ ಹೇಳಿದೆ. ಜೆಎಸ್​ಪಿಎಲ್​ನ ಉಕ್ಕಿನ ಮಾರಾಟ ಪ್ರಮಾಣವು ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕಕ್ಕೆ ಶೇ 32ರಷ್ಟು ಹೆಚ್ಚಳವಾಗಿದ್ದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದಲ್ಲಿ ಶೇ 10ರಷ್ಟು ಜಾಸ್ತಿಯಾಗಿ, 2.13 ಮಿಲಿಯನ್​ ಟನ್ಸ್​ ಆಗಿದೆ. FY22ರ Q2ನಲ್ಲಿ ಮೊದಲ ಬಾರಿಗೆ ಮೂರು ತಿಂಗಳ ಅವಧಿಯಲ್ಲಿ 20 ಲಕ್ಷ ಟನ್​ಗಳ ಉಕ್ಕಿನ ಮಾರಾಟವನ್ನು ದಾಟಿದೆ. ಇನ್ನು ರಫ್ತು ಪ್ರಮಾಣ ಕೂಡ ಮಾರಾಟಕ್ಕೆ ಉತ್ತೇಜನ ನೀಡಿದೆ. ಒಟ್ಟಾರೆ ಮಾರಾಟದಲ್ಲಿ ಶೇ 40ಕ್ಕೂ ಹೆಚ್ಚು FY22ರ Q2ನಲ್ಲಿ ರಫ್ತಾಗಿದೆ (FY22ರ Q1ರಲ್ಲಿ ಶೇ 34 ಮತ್ತು FY21ರ Q2ನಲ್ಲಿ ಶೇ 38ರಷ್ಟು ರಫ್ತು ಪ್ರಮಾಣ ಇತ್ತು).

ಜೆಎಸ್​ಪಿಎಲ್​ನ ಸಾಮರ್ಥ್ಯ ನಿಂತಿರುವುದು ಅದರ ಬದ್ಧತೆಯುಳ್ಳ ತಂಡದ ಮೇಲೆ. ಎಲ್ಲ ಸವಾಲು, ತೊಂದರೆಗಳನ್ನು ಮೀರಿ ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿದ್ದೇವೆ. ಜೆಎಸ್​ಪಿಎಲ್​ ಬಳಿ ಈಗ ಉತ್ತಮ ಕಚ್ಚಾ ವಸ್ತುಗಳ ಭದ್ರತೆ ಇದ್ದು, ಇದರಿಂದ ಮಹತ್ತರವಾದ ಮೌಲ್ಯವು ಕಂಪೆನಿಗೆ ಸೇರ್ಪಡೆ ಆಗುತ್ತದೆ. ನಮ್ಮ ಆಸ್ಟ್ರೇಲಿಯನ್ ಕೋಕಿಂಗ್ ಕಲ್ಲಿದ್ದಲು (ಬ್ಲಾಸ್ಟ್​ ಫರ್ನೇಸ್​ನಲ್ಲಿ ಬಳಸುವಂಥದ್ದು) ಗಣಿಯೊಂದರ ಪೈಕಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಮತ್ತು ಮೊದಲ ರವಾನೆಯನ್ನು ನವೆಂಬರ್​ 21ಕ್ಕೆ ನಿರೀಕ್ಷೆ ಮಾಡುತ್ತಿದ್ದೇವೆ, ಎಂದು ಜೆಎಸ್​ಪಿಎಲ್​ ಕಾರ್ಯ ನಿರ್ವಾಹಕ ನಿರ್ದೇಶಕ ವಿ.ಆರ್​.ಶರ್ಮಾ ಹೇಳಿದ್ದು, ಇದರಿಂದ ಕೋಕಿಂಗ್ ಕಲ್ಲಿದ್ದಲು ಅವಲಂಬನೆ ಪ್ರಮುಖವಾಗಿ ಕಡಿಮೆ ಆಗುತ್ತದೆ ಎಂದಿದ್ದಾರೆ.

ಒಡಿಶಾ ಸರ್ಕಾವು ಕಾಸಿಯಾ (ಒಡಿಶಾ) ಕಬ್ಬಿಣದ ಅದಿರು ಗಣಿಗೆ ಜೆಎಸ್​ಪಿಎಲ್​ ಅನ್ನು ಆದ್ಯತೆಯ ಬಿಡ್ಡರ್​ ಆಗಿ ಪರಿಗಣಿಸಿದೆ. ಇದರಿಂದಾಗಿ ಕಚ್ಚಾ ವಸ್ತುಗಳ ಭದ್ರತೆ ಮತ್ತಷ್ಟು ವಿಸ್ತರಣೆ ಆದಂತೆ ಆಗುತ್ತದೆ. FY22ರ Q2ನಲ್ಲಿ ಉಕ್ಕಿನ ಉತ್ಪಾದನೆ 1.93 ಮಿಲಿಯನ್ ಟನ್​ಗೆ ಹೆಚ್ಚಳವಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 5ರಷ್ಟು ಬೆಳವಣಿಗೆ ದಾಖಲಿಸಿದೆ. ಮಾರಾಟ ಪ್ರಮಾಣ ಹೆಚ್ಚಾದಷ್ಟೂ ದಾಸ್ತಾನಿನ ಮಟ್ಟವು ಕಡಿಮೆ ಆಗುತ್ತಾ ಬರುತ್ತಿದೆ. ಸತತ ಮೂರನೇ ತಿಂಗಳಾದ ಸೆಪ್ಟೆಂಬರ್​ನಲ್ಲೂ ಮಾರಾಟವು ಉತ್ಪಾದನೆಗಿಂತ ಹೆಚ್ಚಾಗಿದೆ. ಈ ವರದಿ ಮಾಡುವ ಹೊತ್ತಿಗೆ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಷೇರಿನ ಬೆಲೆ 419.75 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.

ಇದನ್ನೂ ಓದಿ: Coal India: ಕೋಲ್ ಇಂಡಿಯಾ ಷೇರು ಶೇ 12ರಷ್ಟು ಏರಿಕೆ: ಮಿಡ್​ಕ್ಯಾಪ್​ನ ಟಾಪ್ 50 ಕಂಪನಿಗಳಲ್ಲಿ ಸ್ಥಾನ ಪಡೆದ ಸರ್ಕಾರಿ ಉದ್ಯಮ

Published On - 12:19 pm, Tue, 5 October 21

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ