ದೇವನಹಳ್ಳಿ: ದಾಖಲೆ ಇದ್ದರೂ ಸುಖಾಸುಮ್ಮನೆ ಲಾರಿ ಚಾಲಕನ ಮೇಲೆ ಪೊಲೀಸರು ದರ್ಪ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊರವಲಯದ ರಾಣಿಕ್ರಾಸ್ ಬಳಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪೊಲೀಸರ ವಿರುದ್ಧ ಲಾರಿ ಮಾಲೀಕರು, ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಅನಗತ್ಯ ಕಿರುಕುಳ ನೀಡುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪ್ರಕರಣವೇನು?
ಚಿಕ್ಕಬಳ್ಳಾಪುರದಿಂದ ಬೆಂಗಳೂರಿನತ್ತ ಗ್ರಾನೈಟ್ ಕಲ್ಲು ತುಂಬಿಕೊಂಡು ಲಾರಿ ಬರುತ್ತಿತ್ತು. ಈ ವೇಳೆ ಲಾರಿಯನ್ನು ಸೈಡಿಗೆ ಹಾಕಿಸಿ ವಿಜಯಪುರ ಪೊಲೀಸರಿಂದ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಎಲ್ಲಾ ದಾಖಲೆಗಳನ್ನ ನೀಡಿದರೂ ಕೂಡ ಲಾರಿ ಕಳಿಸದೆ ದರ್ಪ ನಡೆಸಿದ್ದಾರೆ ಮತ್ತು ಪೊಲೀಸರ ವಿರುದ್ದ ಪ್ರಶ್ನಿಸಿದಕ್ಕೆ ಚಾಲಕ, ಲಾರಿ ಮಾಲೀಕನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದೌರ್ಜನ್ಯವೆಸಗಿದ ಪೊಲೀಸರ ವಿರುದ್ದ ಚಾಲಕರು, ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
ಉಪಚುನಾವಣೆ ನಡೆಯುತ್ತಿರುವಲ್ಲಿ ಪ್ರಚಾರಕ್ಕೆ ಹೋಗುವ ಬದಲು ಗುಬ್ಬಿಯಲ್ಲಿ ರೋಡ್ ಶೋ ನಡೆಸಿದರು ಕುಮಾರಸ್ವಾಮಿ!
Published On - 10:54 am, Tue, 26 October 21