AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವೇಗೌಡ ರಾಷ್ಟ್ರೀಯ ಅಧ್ಯಕ್ಷ, ಹೆಚ್‌ಡಿಕೆ ಹೆಂಡ್ತಿ ನಾಯಕಿ, ರೇವಣ್ಣ ಮಗ ನಾಯಕ, ರೇವಣ್ಣ ಹೆಂಡತಿ ನಾಯಕಿ: ಹರಿಹಾಯ್ದ ಸಿದ್ದರಾಮಯ್ಯ

HD Kumaraswamy family politics: ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡ್ತಿದ್ದಾರೆಂಬ ಆರೋಪದ ಬಗ್ಗೆ ಟಿವಿ 9 ಜೊತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಟುಂಬ ರಾಜಕಾರಣ ಮಾಡುವ ಅವರು ಯಾರು? ಅವರು ಇನ್ನೊಬ್ಬರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದಿದ್ದಾರೆ.

ದೇವೇಗೌಡ ರಾಷ್ಟ್ರೀಯ ಅಧ್ಯಕ್ಷ, ಹೆಚ್‌ಡಿಕೆ ಹೆಂಡ್ತಿ ನಾಯಕಿ, ರೇವಣ್ಣ ಮಗ ನಾಯಕ, ರೇವಣ್ಣ ಹೆಂಡತಿ ನಾಯಕಿ: ಹರಿಹಾಯ್ದ ಸಿದ್ದರಾಮಯ್ಯ
ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ
TV9 Web
| Updated By: ಸಾಧು ಶ್ರೀನಾಥ್​|

Updated on:Oct 26, 2021 | 10:35 AM

Share

ಬೆಂಗಳೂರು: ರಾಜ್ಯದಲ್ಲಿ ಎರಡು ಅಸೆಂಬ್ಲಿ ಉಪಚುನಾವಣೆಗಳು ನಡೆಯಲಿದ್ದು, ರಾಜಕೀಯ ನಾಯಕರ ಮಾತಿನ ವರಸೆ ಪಕ್ಕಾ ಲೋಕಲ್​ ಆಗಿಬಿಟ್ಟಿದೆ ಎಂದು ಮತದಾರರು ಸ್ಥಳೀಯವಾಗಿ ಅರಳಿಕಟ್ಟೆ ಮೇಲೆ ಕುಳಿತು ಚಿಂತನೆ ನಡೆಸುತ್ತಿದ್ದಾರೆ. ಜಾತಿ ಹುಟ್ಟುಹಾಕಿದ್ದು ಮನುವಾದಿಗಳು. ಮನುವಾದಿಗಳು ಅಂದ್ರೆ ಬಿಜೆಪಿಯವರು. ಅವರು ನಮಗೆ ಪಾಠ ಹೇಳಿಕೊಡ್ತಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮುಂದುವರಿದು ತಮ್ಮ ಪ್ರತಿ ವಾದ ಮಂಡಿಸಿರುವ ಅವರು ಚತುರ್ವರ್ಣ ಶ್ರೇಣಿ ವ್ಯವಸ್ಥೆಯನ್ನು ಹುಟ್ಟುಹಾಕಿದ್ದು ಯಾರು? ಅದನ್ನು ಪ್ರತಿಪಾದನೆ ವಮಾಡುತ್ತಿರುವವರು ಯಾರು? ಎಂದು ಕೆಂಡ ಕಾರಿದ್ದಾರೆ.

ಈ ಮಧ್ಯೆ, ರಾಜ್ಯದಲ್ಲಿ ಅಸೆಂಬ್ಲಿ ಬೈಎಲೆಕ್ಷನ್​ ಘೋಷಣೆಯಾಗಿದ್ದೇ ಹಾವು ಮುಂಗುಸಿಯಂತಾಗಿರುವ ಹೆಚ್​ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಜಟಾಪಟಿ ಮುಂದುವರಿದಿದೆ. ತಮ್ಮ ಪುತ್ರನನ್ನು ಶಾಸಕ ಮಾಡಿರುವ ಸಿದ್ದರಾಮಯ್ಯದು ಕುಟುಂಬ ರಾಜಕಾರಣ ಅಲ್ಲವೇ ಎಂದು ಕುಮಾರಸ್ವಾಮಿ ಕೇಳಿದ್ದೇ ತಡ ಸಿದ್ದರಾಮಯ್ಯ ಫುಲ್​ ಫ್ಲೋನಲ್ಲಿ ಕುಮಾರಸ್ವಾಮಿ ಮನೆಯ ಕುಟುಂಬ ರಾಜಕಾರಣದ ಜಾತಕವನ್ನೇ ತೆರೆದಿಟ್ಟಿದ್ದಾರೆ.

ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡ್ತಿದ್ದಾರೆಂಬ ಆರೋಪದ ಬಗ್ಗೆ ಟಿವಿ 9 ಜೊತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಟುಂಬ ರಾಜಕಾರಣ ಮಾಡುವ ಅವರು ಯಾರು? ಅವರು ಇನ್ನೊಬ್ಬರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ! ಅವರ ಮನೆಯಲ್ಲಿ ಎಲ್ಲರೂ ರಾಜಕೀಯ ಮಾಡುವವರೇ. ಹೆಚ್‌ಡಿ ದೇವೇಗೌಡ ರಾಷ್ಟ್ರೀಯ ಅಧ್ಯಕ್ಷ, ಹೆಚ್‌ಡಿಕೆ ನಾಯಕ, ರೇವಣ್ಣ ಲೀಡರ್, ಹೆಚ್‌ಡಿಕೆ ಹೆಂಡ್ತಿ ನಾಯಕಿ, ರೇವಣ್ಣ ಮಗ ನಾಯಕ, ರೇವಣ್ಣ ಹೆಂಡತಿ ನಾಯಕಿ ಎಂದು ಹರಿಹಾಯ್ದಿರುವ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ನಾಯಕರು ಯಾರು? ಇಲ್ಲಿಯ ಅಧ್ಯಕ್ಷರು ಯಾರು? ಜೆಡಿಎಸ್‌ನಲ್ಲಿ ರಾಷ್ಟ್ರೀಯ ಅಧ್ಯಕ್ಷರು ಯಾರು? ರಾಜ್ಯದಲ್ಲಿ ಅಧ್ಯಕ್ಷರು ಯಾರು? ಕುಮಾರಸ್ವಾಮಿ ಪಕ್ಷದಲ್ಲೇ ಇರಲಿಲ್ಲವಲ್ಲ. ಅವರು ಹೇಗೆ ಪಕ್ಷ ಸಂಘಟನೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Also Read: ನಾನು ಬಸ್ ಮಾಲೀಕ, ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸ್ತಿರಲಿಲ್ಲ; ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ

ByElection MLA Zameer Press meet | ಬೈಎಲೆಕ್ಷನ್​ನಲ್ಲಿ ಶಾಸಕ ಜಮೀರ್ ಅಹ್ಮದ್ ಸುದ್ದಿಗೋಷ್ಠಿ | TV9 Kannada

(clp leader Siddaramaiah lambasts jds leader hd kumaraswamy family politics)

Published On - 10:09 am, Tue, 26 October 21