AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು, ಯಡಿಯೂರಪ್ಪ ಜತೆ ಸೇರಿ ಒಳಸಂಚು ಮಾಡಿದ್ರು; ಹೆಚ್​ಡಿ ಕುಮಾರಸ್ವಾಮಿ ಆರೋಪ

ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಇದ್ಯಾವ ಜಾತ್ಯತೀತತೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜಾರ್ಜ್, ಭೈರತಿ ಬಸವರಾಜ್ ಮಧ್ಯೆ ಗಲಾಟೆಯಾಗಿತ್ತು.

ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು, ಯಡಿಯೂರಪ್ಪ ಜತೆ ಸೇರಿ ಒಳಸಂಚು ಮಾಡಿದ್ರು; ಹೆಚ್​ಡಿ ಕುಮಾರಸ್ವಾಮಿ ಆರೋಪ
ಹೆಚ್.ಡಿ. ಕುಮಾರಸ್ವಾಮಿ
TV9 Web
| Updated By: sandhya thejappa|

Updated on:Oct 26, 2021 | 12:14 PM

Share

ವಿಜಯಪುರ: 2008ರಿಂದ 2013ರಲ್ಲಿ ಉಪಚುನಾವಣೆಗಳು ನಡೆದವು. ಆಗ ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ (Siddaramaiah) ಪಾತ್ರ ದೊಡ್ಡದು. ಯಡಿಯೂರಪ್ಪ ಜತೆ ಸೇರಿಕೊಂಡು ಒಳಸಂಚು ಮಾಡಿದ್ರು ಅಂತ ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಆರೋಪ ಮಾಡಿದ್ದಾರೆ. ನಾನು ಸೂಟ್ಕೇಸ್ ಪಡೆದಿದ್ದೇನೆಂದು ಆರೋಪಿಸಿದ್ದಾರೆ. ಯಾರೋ ಒಬ್ಬರನ್ನು ಮುಂದೆ ಬಿಟ್ಟು ಆರೋಪಿಸುತ್ತಿದ್ದಾರೆ. ಇವರು ಒಳಸಂಚು ಮಾಡಿಕೊಂಡು ಎಷ್ಟು ಸೂಟ್ಕೇಸ್ ಪಡೆದಿದ್ದಾರೆ ಅಂತ ಪ್ರಶ್ನಿಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಇದ್ಯಾವ ಜಾತ್ಯತೀತತೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜಾರ್ಜ್, ಭೈರತಿ ಬಸವರಾಜ್ ಮಧ್ಯೆ ಗಲಾಟೆಯಾಗಿತ್ತು. ಯಾವುದೋ ಒಂದು ಖಾತೆ ವಿಚಾರವಾಗಿ ಗಲಾಟೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರಿಕೊಂಡರು. ಆಗ ರಮೇಶ್ ಜಾರಕಿಹೊಳಿ ಇವರ ವಿರುದ್ಧ ಸಿಡಿದೆದ್ದಿದ್ದರು. ಯಾಕೆ ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಿಲ್ಲ ಎಂದು ಸಿಂದಗಿಯಲ್ಲಿ ಹೇಳಿಕೆ ನೀಡಿದರು.

ಅವತ್ತೇ ಕಣ್ಣೀರು ಹಾಕಿದ್ದೆ ಮೈತ್ರಿ ಸರ್ಕಾರದ ವೇಳೆ ನಾನು ಅಮೆರಿಕಕ್ಕೆ ಹೋಗಿದ್ದೆ. ಆಗ ನನಗೆ ಯಾರೂ ಕೂಡ ಕರೆ ಮಾಡಿರಲಿಲ್ಲ. ನಾನೇ ಸ್ವತಃ ಡಾ ಜಿ ಪರಮೇಶ್ವರ್​ಗೆ ಕರೆ ಮಾಡಿದ್ದೆ. ಆಗ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದರು. 2023ರ ಚುನಾವಣೆಯಲ್ಲಿ ಅವರನ್ನು ಯಾರೂ ಗುರುತಿಸಲ್ಲ. ಅವರು ದುರಹಂಕಾರದಿಂದಲೇ ಅವರು ಹೋಗುತ್ತಾರೆ. ಸಿದ್ದರಾಮಯ್ಯರನ್ನು ಯಾರೂ ಲೆಕ್ಕಕ್ಕೇ ಇಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸೋಲುತ್ತಿದ್ದರು. ನನ್ನದು ಭಾವನಾತ್ಮಕ ಹೃದಯ, ಕಟುಕ ಹೃದಯವಲ್ಲ. ಜನರ ಕಷ್ಟ ನೋಡಿದಾಗ ನನ್ನ ಕಣ್ಣಿನಲ್ಲಿ ನೀರು ಬರುತ್ತದೆ. ನಾನು ರಾಜಕೀಯಕ್ಕೆ ಬಂದೇ ಇರಲಿಲ್ಲ. ಆ ಸಮಯದಲ್ಲಿ ಒಬ್ಬ ಹುಡುಕ ತನ್ನ ಕಷ್ಟ ಹೇಳಿಕೊಳ್ತಿದ್ದ. ಆ ಸಮಯದಲ್ಲಿ ಅವನಲ್ಲಿ ನನ್ನ ಮಗನನ್ನು ನೋಡಿದ್ದೆ. ಆಗಲೇ ನಾನು ಕಣ್ಣೀರು ಹಾಕಿದ್ದೆ ಅಂತ ಕುಮಾರಸ್ವಾಮಿ ನುಡಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಲಂಬಾಣಿ ಸಮುದಾಯದವರು ಗುಳೆ ಹೋಗುತ್ತಿದ್ದಾರೆ. ಲಂಬಾಣಿ ಸಮುದಾಯಕ್ಕೆ ಪ್ರಾಧಿಕಾರ ಕೊಟ್ಟಿದ್ದೀನಿ ಅಂತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 19 ಜನ ಮೃತಪಟ್ಟಿದ್ದರು. ಮೃತಪಟ್ಟ 19 ಜನರ ಕುಟುಂಬಕ್ಕೆ ಏನಾದ್ರೂ ಕೊಟ್ಟಿದ್ರಾ? ಅಂತ ಪ್ರಶ್ನಿಸಿದ ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಜಾತ್ಯತೀತ ನಾಯಕರಲ್ವಾ? ಮತ್ತೇಕೆ ಅವರು ಎಲ್ಲ ಸಮುದಾಯದವರ ಸಭೆ ಮಾಡ್ತಿದ್ದಾರೆ? ಪ್ರತ್ಯೇಕ ಸಭೆ ಮಾಡುವ ಅವಶ್ಯಕತೆ ಏನಿತ್ತು ಎಂದು ಕೇಳಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಬೇರೆ ಯಾವ ನಾಯಕರೂ ಇರಲಿಲ್ಲವಾ? ವರುಣಾದಲ್ಲಿ ತಮ್ಮ ಪುತ್ರನನ್ನು ಏಕೆ ಸ್ಪರ್ಧೆಗೆ ಇಳಿಸಿದ್ರು? ಇದು ಕುಟುಂಬ ರಾಜಕಾರಣವಲ್ಲವೇ ಎಂದು ಕುಮಾರಸ್ವಾಮಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.

ನಾನು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೆ. ಮೈತ್ರಿ ಮಾಡಿಕೊಳ್ಳುವುದಕ್ಕೂ ಕಾರಣ ಸಿದ್ದರಾಮಯ್ಯನವರು. ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಅಹಿಂದ ಮಾಡಿದರು. ಹೀಗಾಗಿ ನಾನು ಜೆಡಿಎಸ್ ಉಳಿಸಲು ಮೈತ್ರಿ ಮಾಡಿಕೊಂಡಿದ್ದೆ. ನನ್ನನ್ನು ಸಿಎಂ ಮಾಡುವುದಾಗಿ ಬಿಜೆಪಿಯವರೇ ದುಂಬಾಲು ಬಿದ್ದಿದ್ದರು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

ದೇವೇಗೌಡ ರಾಷ್ಟ್ರೀಯ ಅಧ್ಯಕ್ಷ, ಹೆಚ್‌ಡಿಕೆ ಹೆಂಡ್ತಿ ನಾಯಕಿ, ರೇವಣ್ಣ ಮಗ ನಾಯಕ, ರೇವಣ್ಣ ಹೆಂಡತಿ ನಾಯಕಿ: ಹರಿಹಾಯ್ದ ಸಿದ್ದರಾಮಯ್ಯ

ಬೈಎಲೆಕ್ಷನ್ ಬಂದ್ರೆ ಮಾತ್ರ ಅಲ್ಪಸಂಖ್ಯಾತರು ನೆನಪಾಗ್ತಾರೆ; ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ

Published On - 11:38 am, Tue, 26 October 21