ಹೆಚ್​ಡಿ ಕುಮಾರಸ್ವಾಮಿ ಆಡಿಯೋ ಕ್ಲಿಪ್ ನನ್ನ ಹತ್ತಿರ ಇದೆ; ಶಾಸಕ ಜಮೀರ್

ಕುಮಾರಸ್ವಾಮಿ ಕೇವಲ ಅಲ್ಪಸಂಖ್ಯಾತರನ್ನು ಮುಗಿಸ್ತಿಲ್ಲ. ಒಕ್ಕಲಿಗರನ್ನು ಕೂಡ ಮುಗಿಸುತ್ತಿದ್ದಾರೆ. ನಾಯಕರು ಬೆಳೆಯುವುದನ್ನ ಕುಮಾರಸ್ವಾಮಿ ಸಹಿಸಲ್ಲ ಅಂತ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಆರೋಪಿಸಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಆಡಿಯೋ ಕ್ಲಿಪ್ ನನ್ನ ಹತ್ತಿರ ಇದೆ; ಶಾಸಕ ಜಮೀರ್
ಶಾಸಕ ಜಮೀರ್ ಅಹ್ಮದ್


ಹುಬ್ಬಳ್ಳಿ: ಬೈಎಲೆಕ್ಷನ್ ಬಂದರೆ ಮಾತ್ರ ಅಲ್ಪಸಂಖ್ಯಾತರು ನೆನಪಾಗ್ತಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ನೆನಪಾಗಲ್ಲ ಅಂತ ಕಾಂಗ್ರೆಸ್ ಶಾಸಕ ಜಮೀರ್ (Zameer Ahmed) ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (Zameer Ahmed) ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ನನಗೋಸ್ಕರ ಕಚೇರಿಯಲ್ಲಿ ಕುಳಿತಿದ್ದರು. ಗಂಟೆಗಟ್ಟಲೇ ನನ್ನ ಜೊತೆಯಲ್ಲೇ ಕುಳಿತುಕೊಳ್ಳುತ್ತಿದ್ದರು. ನಾನು ಲೆಕ್ಕ ನೋಡಿಕೊಳ್ಳಬೇಕು ನೀವು ಹೋಗಿ ಎನ್ನುತ್ತಿದ್ದೆ. ಇಲ್ಲಾ ನಿಮ್ಮ ಜತೆ ಇರಬೇಕೆಂದು ಇರುತ್ತಿದ್ದರು. ಈ ಮಾತು ನಾನು ಹೇಳಬೇಕಾದರೆ ಮನಸಿಗೆ ನೋವಾಗುತ್ತೆ. ಕುಮಾರಸ್ವಾಮಿ ನನಗೆ ಸ್ನೇಹಿತರಾಗಿದ್ದರು. ಅವರು ಈಗ ನನ್ನ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಹೀಗಾಗಿ ಎಲ್ಲ ವಿಚಾರಗಳನ್ನು ಹೇಳಬೇಕಾಗುತ್ತಿದೆ. ಚುನಾವಣೆ ಸಮಯದಲ್ಲಿ ಅವರಿಗೆ ನಾನೇ ಜಾಗ ಕೊಟ್ಟಿದ್ದೆ. ನನ್ನ ಜಾಗದಲ್ಲೇ ಜೆಡಿಎಸ್ನವರು ಇದ್ದರು ಅಂತ ಜಮೀರ್ ಹೇಳಿದ್ದಾರೆ.

ಕುಮಾರಸ್ವಾಮಿ ಕೇವಲ ಅಲ್ಪಸಂಖ್ಯಾತರನ್ನು ಮುಗಿಸ್ತಿಲ್ಲ. ಒಕ್ಕಲಿಗರನ್ನು ಕೂಡ ಮುಗಿಸುತ್ತಿದ್ದಾರೆ. ನಾಯಕರು ಬೆಳೆಯುವುದನ್ನ ಕುಮಾರಸ್ವಾಮಿ ಸಹಿಸಲ್ಲ ಅಂತ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಆರೋಪಿಸಿದ್ದಾರೆ. ಇವರು ನನ್ನನ್ನು ಡ್ರೈವರ್ ಎಂದು ಕರೆಯುತ್ತಾರೆ. ಇವರಂತೆ ನಾನು ಬಿಬಿಎಂಯಲ್ಲಿ ಕಸ ಗುಡಿಸುತ್ತಿದ್ದೆನಾ? ಕುಮಾರಸ್ವಾಮಿ ಹೀಗೆ ಮಾತಾಡ್ತಾ ಇದ್ರೆ ಸುಮ್ಮನಿರಲ್ಲ. ಒಂದೊಂದೇ ವಿಚಾರವನ್ನು ಬಹಿರಂಗಪಡಿಸುತ್ತೇನೆ. ಬೆಳಗಾದ್ರೆ ಸಾಕು ನಾಯಿ, ಆನೆ ಎಂದು ಮಾತಾಡ್ತೀರಿ. ನಿಮ್ಮನ್ನು ಆನೆ ಮಾಡಿದ್ದು ಯಾರು ಸ್ವಾಮಿ? ಅಂತ ಜಮೀರ್ ಗರಂ ಆಗಿದ್ದಾರೆ.

ದಾಖಲೆಗಳಿವೆ
20-20 ಸರ್ಕಾರ ರಚನೆ ವೇಳೆ ಯಡಿಯೂರಪ್ಪಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಕುಮಾರಸ್ವಾಮಿಗೆ ಹೇಳಿದ್ದೆ. ಮಾತು ತಪ್ಪಬೇಡಿ ಕುಮಾರಸ್ವಾಮಿಯವರೇ ಎಂದು ಹೇಳಿದ್ದೆ. ಆದರೆ ಅವರು ಕೊಟ್ಟಿಲ್ಲ. ಈ ಬಗ್ಗೆ ದಾಖಲೆಗಳಿವೆ. ನಾನು ಮಾತನಾಡಿರುವುದು ಬಗ್ಗೆ ದಾಖಲೆಗಳಿವೆ ಅಂತ ಹೇಳಿಕೆ ನೀಡಿದ ಜಮೀರ್, ಹೆಚ್​ಡಿ ರೇವಣ್ಣ ಡಿಸಿಎಂ ಆಗುತ್ತಾನೆಂದು ಬಿಎಸ್‌ವೈಗೆ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಮುಸ್ಲಿಮರನ್ನು ಬಲಿ ಹಾಕಿದ್ದಾರೆ; ಜಮೀರ್ ಆರೋಪ
ಕುಮಾರಸ್ವಾಮಿ ಸೂಟ್‌ಕೇಸ್ ರಾಜಕಾರಣ ಮಾಡುತ್ತಾರೆ. ಹಾನಗಲ್‌ನಿಂದ ಹೆಚ್‌ಡಿಕೆಗೆ ಕಡಿಮೆ ಹಣ ಬಂದಿರಬೇಕು. ಹೀಗಾಗಿ ಹಾನಗಲ್‌ನಲ್ಲಿ ಒಂದು ದಿನ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಶಾಸಕ ಜಮೀರ್,  ಕನಿಷ್ಠ 3-4 ದಿನವಾದ್ರೂ ಪ್ರಚಾರ ಮಾಡಬೇಕಾಗಿತ್ತು. ಕುಮಾರಸ್ವಾಮಿ ಮುಸ್ಲಿಮರನ್ನು ರಾಜಕೀಯವಾಗಿ ಬಲಿ ಹಾಕಿದ್ದಾರೆ. ಅಲ್ಪಸಂಖ್ಯಾತರನ್ನು ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ. ಅಲ್ಪಸಂಖ್ಯಾತರನ್ನು ಮುಗಿಸುತ್ತಿರುವುದು ಕುಮಾರಸ್ವಾಮಿ ಅಂತ ಹೇಳಿಕೆ ನೀಡಿದ್ದಾರೆ.

ದೇಶಕ್ಕಾಗಿ ಅಲ್ಪಸಂಖ್ಯಾತರು ಪ್ರಾಣ ತ್ಯಾಗ ಮಾಡಿದ್ದಾರೆ. ಹೆಚ್ಚು ಸಂಖ್ಯೆಯಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಯಾವುದೇ ಜಾತಿ ನೋಡುವುದಿಲ್ಲ. ಅವರಿಗೆ ಗೊತ್ತಿರುವುದು ಹೆಣ್ಣು, ಗಂಡು ಎರಡೇ ಜಾತಿ. ಸಿದ್ದರಾಮಯ್ಯ ಸೇರಿದ ಕಡೆ ಜನಸಾಗರವೇ ಸೇರುತ್ತದೆ. ಕುಮಾರಸ್ವಾಮಿ 100 ಜನರನ್ನು ಸೇರಿಸಲು ಹಣ ಕೊಡ್ತಾರೆ. ಹಣ ಕೊಟ್ಟು ಜನರನ್ನ ಕರೆದುಕೊಂಡು ಬರುತ್ತಾರೆ. ನಾವು ಕೇವಲ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತಾಡುತ್ತೀವಿ. ಜೆಡಿಎಸ್‌ನವರಂತೆ ಜಾತಿ ಎತ್ತಿಕಟ್ಟುವ ಕೆಲಸ ಮಾಡಲ್ಲ ಎಂದರು.

ನನಗೆ ರಾಜಕೀಯ ಗುರುಗಳು ಹೆಚ್‌ಡಿ ದೇವೇಗೌಡ, ಸಿದ್ದರಾಮಯ್ಯ
ಆರ್​ಎಸ್​ಎಸ್​ನಿಂದಲೂ ಹೆಚ್‌ಡಿಕೆಗೆ ಸೂಟ್‌ಕೇಸ್ ಬಂದಿರಬಹುದು. ಹೀಗಾಗಿ ಇತ್ತೀಚೆಗೆ ಆರ್​ಎಸ್​ಎಸ್​ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಹಾನಗಲ್‌ನ ಜೆಡಿಎಸ್ ಅಭ್ಯರ್ಥಿ ಜೆಡಿಎಸ್‌ನವರನ್ನು ನಂಬಿಕೊಂಡರೆ ಬೀದಿಗೆ ಬರುತ್ತಾನೆ. ನನಗೆ ಹೆಸರಿಗೆ ಮಾತ್ರ ಸಚಿವ ಸ್ಥಾನವನ್ನು ಕೊಟ್ಟಿದ್ದರು. ಆಗಲೇ ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದಿದ್ದೆ. ಸಿದ್ದರಾಮಯ್ಯ ನನಗೆ ನಾಲ್ಕು ಖಾತೆಗಳನ್ನು ಕೊಟ್ಟಿದ್ದರು. ಕುಮಾರಸ್ವಾಮಿ ಕೊಟ್ಟಿದ್ದು ಕೇವಲ ಹಜ್, ವಕ್ಫ್ ಅಷ್ಟೇ. ನನಗೆ ರಾಜಕೀಯ ಗುರುಗಳು ಹೆಚ್‌ಡಿ ದೇವೇಗೌಡ, ಸಿದ್ದರಾಮಯ್ಯ ಅಂತ ಜಮೀರ್ ಅಭಿಪ್ರಾಯಪಟ್ಟಿದ್ದಾರೆ.

ಹಳೇ ದಿನಗಳನ್ನೇ ಕೊಡಿ
‘ನಮಗೆ ಅಚ್ಛೇದಿನ್ ಬೇಡ, ಹಳೇ ದಿನಗಳನ್ನೇ ಕೊಡಿ’ ಮೋದಿ ಬಂದ್ರೆ ಏನೋ ಅಭಿವೃದ್ಧಿ ಆಗುತ್ತೆಂದು ತಿಳಿದಿದ್ದೆ. ಅವರು ಅಚ್ಛೇದಿನ್ ಆಯೇಗಾ ಎಂದು ಹೇಳುತ್ತಿದ್ದರು. ಎಲ್ಲಿದೆ ಸ್ವಾಮಿ ಅಚ್ಛೇದಿನ್, ನಮಗೆ ಅಚ್ಛೇದಿನ್ ಬೇಡ. ನಮಗೆ ಹಳೇ ದಿನಗಳನ್ನೇ ಕೊಡಿ ಸ್ವಾಮಿ ಅಂತ ಜಮೀರ್ ಹೇಳಿದ್ದಾರೆ. ಸಿಎಂ ಇಬ್ರಾಹಿಂ ಸೋತು 3ನೇ ಸ್ಥಾನಕ್ಕೆ ಹೋಗಿದ್ದರು. ಆದರೂ ಅವರಿಗೆ ಎಂಎಲ್‌ಸಿ ಸ್ಥಾನವನ್ನು ನೀಡಲಾಯಿತು. ಇನ್ನೂ ಯಾವ ಸ್ಥಾನ ನೀಡಬೇಕು? ಅವರಿಗೆ ಅನ್ಯಾಯವಾಗಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಕೇಳಲಿ. ಇಬ್ರಾಹಿಂ ಸ್ವಕ್ಷೇತ್ರದಲ್ಲೇ ಡೆಪಾಸಿಟ್ ಕಳೆದುಕೊಂಡರು. ಆದರೂ ಅವರನ್ನು 2 ಬಾರಿ ಎಂಎಲ್‌ಸಿ ಮಾಡಲಾಯಿತು ಎಂದು ನುಡಿದರು.

ಆರ್‌ಎಸ್ಎಸ್ ಟೀಕೆ ಮಾಡುವುದಕ್ಕೆ ಕಾರಣವಿದೆ
ಕುಮಾರಸ್ವಾಮಿ ಈ ಹಿಂದೆ ಆರ್​ಎಸ್​ಎಸ್​ಗೆ​ ಟೀಕೆ ಮಾಡಿಲ್ಲ. ಈಗ ಏಕಾಏಕಿ ಏಕೆ ಆರ್‌ಎಸ್ಎಸ್​ಗೆ ಟೀಕೆ ಮಾಡುತ್ತಿದ್ದಾರೆ. ಆರ್‌ಎಸ್ಎಸ್​ಗೆ ಟೀಕೆ ಮಾಡುವುದಕ್ಕೆ ಕಾರಣವಿದೆ. ಅವರಿಗೆ ಆರ್‌ಎಸ್ಎಸ್‌ನಿಂದ ಮೆಸೇಜ್ ಬಂದಿರಬಹುದು. 2 ಕಡೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನ ಹಾಕಿದ್ರೆ ಸಾಲದು. 2 ಕಡೆಯೂ ಸೂಟ್‌ಕೇಸ್ ಪಡೆದುಕೊಂಡರೆ ಆಗುವುದಿಲ್ಲ. ಟೀಕೆ ಮಾಡಿ ಎಂದು ಕುಮಾರಸ್ವಾಮಿಗೆ ಹೇಳಿರಬಹುದು. ಹೀಗಾಗಿ ಅವರು ಆರ್‌ಎಸ್ಎಸ್ ವಿರುದ್ಧ ಟೀಕೆ ಮಾಡ್ತಿದ್ದಾರೆ ಅಂತ ಕಾಂಗ್ರೆಸ್ ಶಾಸಕ ಜಮೀರ್ ಹೇಳಿದರು.

ಇದನ್ನೂ ಓದಿ

ದೇವೇಗೌಡ ರಾಷ್ಟ್ರೀಯ ಅಧ್ಯಕ್ಷ, ಹೆಚ್‌ಡಿಕೆ ಹೆಂಡ್ತಿ ನಾಯಕಿ, ರೇವಣ್ಣ ಮಗ ನಾಯಕ, ರೇವಣ್ಣ ಹೆಂಡತಿ ನಾಯಕಿ: ಹರಿಹಾಯ್ದ ಸಿದ್ದರಾಮಯ್ಯ

ಸುಪ್ರೀಂಕೋರ್ಟ್ ಆದೇಶ ಬಂದರೆ ಬಿಬಿಎಂಪಿ ಚುನಾವಣೆ; ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

Click on your DTH Provider to Add TV9 Kannada