ಸೂರ್ಯನಗರದಲ್ಲಿ ಶಾಸಕ ಮನೆ ಮುಂದೆ ಯಾವ ವಾಹನವೂ ಓಡಾಡೋ ಹಾಗಿಲ್ಲ; ಆನೇಕಲ್​ ಕಾಂಗ್ರೆಸ್ ಶಾಸಕ ಶಿವಣ್ಣ ದರ್ಬಾರ್

ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಕಾಂಗ್ರೆಸ್ ಶಾಸಕ ಶಿವಣ್ಣನವರ ಮನೆ ಮುಂದೆ ಕೊರೊನಾ ಸಂದರ್ಭದಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಇನ್ನೂ ತೆರವು ಮಾಡಿಲ್ಲ. ಮನೆ ಮುಂದೆ ಯಾವುದೇ ವಾಹನ ತೆರಳದಂತೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಹೀಗಾಗಿ ಮುಖ್ಯ ರಸ್ತೆಗೆ ಹೋಗಬೇಕಾದರೆ ಒಂದು ಸುತ್ತು ಹಾಕಿಕೊಂಡು ಹೋಗಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂರ್ಯನಗರದಲ್ಲಿ ಶಾಸಕ ಮನೆ ಮುಂದೆ ಯಾವ ವಾಹನವೂ ಓಡಾಡೋ ಹಾಗಿಲ್ಲ; ಆನೇಕಲ್​ ಕಾಂಗ್ರೆಸ್ ಶಾಸಕ ಶಿವಣ್ಣ ದರ್ಬಾರ್
ಮನೆ ಮುಂದಿನ ರಸ್ತೆ ಮೇಲೆ ಬ್ಯಾರಿಕೇಡ್
Updated By: preethi shettigar

Updated on: Oct 26, 2021 | 2:19 PM

ಬೆಂಗಳೂರು: ತಮ್ಮ ಮನೆ ಮುಂದೆ ಯಾವ ವಾಹನವೂ ಓಡಾಡದ ಹಾಗೆ ಬೆಂಗಳೂರಿನ ಆನೇಕಲ್ ಶಾಸಕ ಶಿವಣ್ಣ ಅವರು ಬ್ಯಾರಿಕೇಡ್ ಹಾಕಿದ್ದಾರೆ. ಆ ಮೂಲಕ ಮನೆ ಮುಂದಿನ ರಸ್ತೆ ಮೇಲೆ ಶಾಸಕ ಶಿವಣ್ಣ ಅಂಧಾ ದರ್ಬಾರ್ ನಡೆಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಅಂದರೆ ಕೊರೊನಾ ಸಂದರ್ಭದಲ್ಲಿ ಮನೆ ಮುಂದಿನ ರಸ್ತೆ ಮೇಲೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಈವರೆಗೂ ಬ್ಯಾರಿಕೆಡ್ ತೆರವು ಮಾಡಿಲ್ಲ. ಹೀಗಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಕಾಂಗ್ರೆಸ್ ಶಾಸಕ ಶಿವಣ್ಣನವರ ಮನೆ ಮುಂದೆ ಕೊರೊನಾ ಸಂದರ್ಭದಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಇನ್ನೂ ತೆರವು ಮಾಡಿಲ್ಲ. ಮನೆ ಮುಂದೆ ಯಾವುದೇ ವಾಹನ ತೆರಳದಂತೆ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಹೀಗಾಗಿ ಮುಖ್ಯ ರಸ್ತೆಗೆ ಹೋಗಬೇಕಾದರೆ ಒಂದು ಸುತ್ತು ಹಾಕಿಕೊಂಡು ಹೋಗಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿಗೆ ಬುದ್ಧಿ ಹೇಳಿದ್ದೇ ಮುಳುವಾಯ್ತು: ಗುಬ್ಬಿ ಶಾಸಕ ಶ್ರೀನಿವಾಸ್
ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ಹೆಚ್​ ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಇಂದು ಮತ್ತೊಂದು ಮಜಲು ತಲುಪಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ನಡೆದಿರುವ ಆಂತರಿಕ ವಿಚಾರಗಳು ಜಗಜ್ಜಾಹೀರಾಗುತ್ತಿವೆ. ಬೆಂಗಳೂರಿನ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ನಡೆದಿದ್ದ‌ ಸಭೆಯ ರಹಸ್ಯ ಬಿಚ್ಚಿಟ್ಟ ಶಾಸಕ ಎಸ್.ಆರ್. ಶ್ರೀನಿವಾಸ್, ಕುಮಾರಸ್ವಾಮಿ ಹಾಗೂ ಜಮೀರ್ ಟೀಂ ನಡುವೆ 2013ರಲ್ಲಿ ಮಧ್ಯರಾತ್ರಿ 4 ಗಂಟೆವರೆಗೂ ಸಭೆ ನಡೆದಿತ್ತು.

ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟರಾಜು ಪಾಲ್ಗೊಂಡಿದ್ದ ಸಭೆ ಅದು. ಜಮೀರ್ ಟೀಂ ಹಾಗೂ ಕುಮಾರಸ್ವಾಮಿ ನಡುವೆ ನಡೆದಿದ್ದ ಸಂಧಾನ ಸಭೆ ಅದು. ಕುಮಾರಸ್ವಾಮಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು. ಅಲ್ಲಿಗೆ ಲಿ ಮೆರಿಡಿಯನ್ ಹೋಟೆಲ್​ನಲ್ಲಿ ಅಂದು ನಡೆದಿದ್ದ ಸಭೆಯೇ ಶಾಸಕ ಎಸ್.ಆರ್. ಶ್ರೀನಿವಾಸ್​ಗೆ ಈಗ ಜೆಡಿಎಸ್​ನಿಂದ ವಿಮುಖವಾಗಲು ಕಾರಣವಾಯ್ತು ಎಂಬುದು ಸ್ಪಷ್ಟವಾಗಿದೆ.

ಬೆಳಗಿನ ಜಾವ 4 ಗಂಟೆವರೆಗೂ ನಡೆದ ಸಭೆಯಲ್ಲಿ ನಡೆದಿದ್ದಾದ್ರೂ ಏನು? ಕುಮಾರಸ್ವಾಮಿಯ ತಪ್ಪುಗಳನ್ನ ಅತೃಪ್ತ ಶಾಸಕರು ಎತ್ತಿ ತೋರಿಸಿದರು ಎಂದು 2013 ರಲ್ಲಿ ನಡೆದ ಸಭೆಯ ವಿವರವನ್ನ ಶ್ರೀನಿವಾಸ್ ತಿಳಿಸಿದರು. ಸಂಧಾನ ಸಭೆ ಭಿನ್ನಮತವಾಗಿ ಸ್ಫೋಟವಾಯ್ತಾ? ಮಧು ಬಂಗಾರಪ್ಪ, ಜಿ.ಟಿ. ದೇವೇಗೌಡ ಹಾಗೂ ಸುರೇಶ್ ಬಾಬು, ಸಾರಾ ಮಹೇಶ್ ಸೇರಿ ಕುಮಾರಸ್ವಾಮಿ‌ ಹಾಗೂ ಜಮೀರ್ ಅಂಡ್ ಟೀಂ ಅನ್ನು ಒಂದು ಮಾಡಲು ನಡೆಸಿದ್ದ ಸಭೆ ಅದು. ಲಿ ಮೆರಿಡಿಯನ್ ಹೋಟೆಲ್ ನಲ್ಲಿ ರಾತ್ರಿ 3-4 ಗಂಟೆವರೆಗೂ ಜಮೀರ್ ಅಹಮದ್ ಕುಮಾರಸ್ವಾಮಿ ಮೇಲೆ ದೂರುಗಳೆ ಹೇಳ್ತಿದ್ದರು. ಕುಮಾರಸ್ವಾಮಿ ಸುಮ್ಮನೇ ಕುಳಿತಿದ್ದರು.

ಇದನ್ನೂ ಓದಿ:
ಬ್ಯಾರಿಕೇಡ್‌ ಹಾಕಿದ್ದು ರೈತರಲ್ಲ, ದೆಹಲಿ ಪೊಲೀಸರು; ರಸ್ತೆ ತೆರವು ಮಾಡುವಂತೆ ಹೇಳಿದ ಸುಪ್ರೀಂಕೋರ್ಟ್ ನಿರ್ದೇಶನಕ್ಕೆ ಬಿಕೆಯು ಪ್ರತಿಕ್ರಿಯೆ

ಕಾರ್ಯಕ್ರಮಕ್ಕೆ ಹೋಗಲ್ಲ! ನಮಗೂ ಆತ್ಮಗೌರವ ಇದೆ; ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್​ ಶಾಸಕ ಶ್ರೀನಿವಾಸ್ ಬೇಸರ

Published On - 1:50 pm, Tue, 26 October 21