ಕಾರ್ಯಕ್ರಮಕ್ಕೆ ಹೋಗಲ್ಲ! ನಮಗೂ ಆತ್ಮಗೌರವ ಇದೆ; ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್​ ಶಾಸಕ ಶ್ರೀನಿವಾಸ್ ಬೇಸರ

ಪಕ್ಷಕ್ಕೆ 20 ವರ್ಷದಿಂದ ದುಡಿದಿರುವರಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ ಯಾವುದೇ ಮನುಷ್ಯ ಸ್ವಾಭಿಮಾನ ಕಳೆದುಕೊಂಡು ಪಕ್ಕದಲ್ಲಿ ಇರಬೇಕು ಅಂತೇನಿಲ್ಲ ಅಂತಾ ಅಸಮಾಧಾನ ತೋಡಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಹೋಗಲ್ಲ! ನಮಗೂ ಆತ್ಮಗೌರವ ಇದೆ; ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್​ ಶಾಸಕ ಶ್ರೀನಿವಾಸ್ ಬೇಸರ
ಎಚ್ ಡಿ ಕುಮಾರಸ್ವಾಮಿ, ಎಸ್ ಆರ್ ಶ್ರೀನಿವಾಸ್

ತುಮಕೂರು: ಗುಬ್ಬಿಯಲ್ಲಿ ನಡೆಯುವ ಕಾರ್ಯಕ್ರಮ ಬಗ್ಗೆ ನನಗೆ ಗೊತ್ತಿಲ್ಲ. ನಾನು ಹೋಗಲ್ಲ, ನಮ್ಮ ಕಾರ್ಯಕರ್ತರೂ ಹೋಗಲ್ಲ ಅಂತ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ (SR Srinivas) ಹೇಳಿಕೆ ನೀಡಿದ್ದಾರೆ. ಯಾವ ವರಿಷ್ಠರು ಬರುತ್ತಾರೆ ಅನ್ನೋದು ಮುಖ್ಯವಲ್ಲ. ನಮಗೂ ಆತ್ಮಗೌರವ, ಸ್ವಾಭಿಮಾನ ಅನ್ನೋದು ಇದೆ. ಸ್ವಾಭಿಮಾನ ಮಾರಿಕೊಂಡು ಪಕ್ಷದಲ್ಲಿರಬೇಕು ಅಂತಿಲ್ಲ. ಯಾರು ಬಂದ್ರು ಅಷ್ಟೇ, ಅವರ ನಡವಳಿಕೆ ಸರಿ ಇರಬೇಕು. ಅವರೊಬ್ಬರಿಗೆ ಗೌರವ ಅಲ್ಲ, ಎಲ್ಲರಿಗೂ ಗೌರವ ಇರುತ್ತೆ ಅಂತ ಶಾಸಕ ಶ್ರೀನಿವಾಸ್ ಹೇಳಿದ್ದಾರೆ.

ಪಕ್ಷಕ್ಕೆ 20 ವರ್ಷದಿಂದ ದುಡಿದಿರುವರಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ ಯಾವುದೇ ಮನುಷ್ಯ ಸ್ವಾಭಿಮಾನ ಕಳೆದುಕೊಂಡು ಪಕ್ಕದಲ್ಲಿ ಇರಬೇಕು ಅಂತೇನಿಲ್ಲ ಅಂತಾ ಅಸಮಾಧಾನ ತೋಡಿಕೊಂಡಿದ್ದಾರೆ. ಅಲ್ಲದೇ ಯಾವ ಲೀಡರ್ ಬಂದರೂ ಅವರ ನಡವಳಿಕೆ ಸರಿಬೇಕು ಅವರ ಜೊತೆಗೆ ಎಲ್ಲರಿಗೂ ಗೌರವ ಇರುತ್ತದೆ ಅಂತಾ ಕುಮಾರಸ್ವಾಮಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ದೇವೇಗೌಡರು, ಕುಮಾರಸ್ವಾಮಿ ಜತೆ ಚರ್ಚೆ ಮುಗಿದಿದೆ. ವೈಯಕ್ತಿಕವಾಗಿ ಮಾತನಾಡುವುದು ಮುಗಿದು ಹೋಗಿದೆ. ಅ.25ರ ನಂತರ ನನ್ನ ನಿರ್ಧಾರ ಏನೆಂದು ತಿಳಿಸುತ್ತೇನೆ. ಕಾರ್ಯಕರ್ತರು, ಬೆಂಬಲಿಗರ ಸಭೆ ಬಳಿಕ ನಿರ್ಧಾರ ತಿಳಿಸುತ್ತೇನೆ. ನಾನು ಜೆಡಿಎಸ್ನಲ್ಲೇ ಇರಬೇಕೆಂದು ಅಂದುಕೊಂಡಿದ್ದೆ. ಆದರೆ ಅವರು ಆ ಹಂತ ಮೀರಿ ಮುಂದೆ ಹೋಗಿದ್ದಾರೆ. ಇದೆಲ್ಲಾ ನಾವಾಗಿ ಮಾಡಿಕೊಂಡಿರುವುದಲ್ಲ. ನಾನು ಮುಕ್ತವಾಗಿದ್ದೆ, ಯಾವಾಗ ಕರೆದರು ನಾನು ಹೋಗುತ್ತಿದ್ದೆ ಅಂತ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

25ರ ಕಾರ್ಯಕ್ರಮವೇನು?
ಇದೇ 25 ರಂದು ಜೆಡಿಎಸ್ ಪಕ್ಷಕ್ಕೆ ಹೊಸ ಮುಖಂಡ ಸೇರ್ಪಡೆಯಾಗಲಿದ್ದಾರೆ. ಸಿ ಎಸ್ ನಾಗರಾಜ್ ಎಂಬುವವರು ಜೆಡಿಎಸ್​ಗೆ ಸೇರ್ಪಡೆಯಾಗಲಿದ್ದಾರೆ. ಹೀಗಾಗಿ ಗುಬ್ಬಿಯಲ್ಲಿ ಜೆಡಿಎಸ್ ಕಾರ್ಯಕ್ರಮ ನಡೆಯಲಿದೆ. ಸೇರ್ಪಡೆ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರು ಆಗಮಿಸುತ್ತಿದ್ದಾರೆ. ಆದರೆ ಈ ಕಾರ್ಯಕ್ರಮದ ಬಗ್ಗೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್​ಗೆ ತಿಳಿದಿಲ್ಲ. ಹೀಗಾಗಿ ನಡೆಯುತ್ತಿರುವ ಕಾರ್ಯಕ್ರಮ ಬಗ್ಗೆ ನನಗೆ ಗೊತ್ತಿಲ್ಲ. ನಾನು ಹೋಗಲ್ಲ ಅಂತ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಎಸ್ ಆರ್ ಶ್ರೀನಿವಾಸ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಆತ್ಮೀಯತೆ ಮೊದಲಿನಂತೆ ಇಲ್ಲ. ಹೀಗಾಗಿ ಆಗಾಗ ಶ್ರೀನಿವಾಸ್ ಬಹಿರಂಗವಾಗಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದಲ್ಲಿ ಇವರನ್ನ ಸರಿಯಾಗಿ ನಡೆಸಿಕೊಳ್ಳದೇ ಮೂಲೆ ಗುಂಪು ಮಾಡಿದ್ದಾರೆ ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬಂದಿದ್ದವು. ಜೊತೆಗೆ ಸಾಕಷ್ಟು ಅಸಮಾಧಾನಗಳು ಇರುವ ಕಾರಣ ಶ್ರೀನಿವಾಸ್ ಪಕ್ಷ ಬಿಡುವ ಬಗ್ಗೆಯೂ ಮಾತನಾಡಿದ್ದರು. ಹೀಗಾಗಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಹೊಸ ಮುಖ ಪರಿಚಯ ಮಾಡಿಕೊಡಲು ನಿರ್ಧಾರ ಮಾಡಿ ಸದ್ಯ ಸಮಾರಂಭ ಆಯೋಜಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ

ಮೈಸೂರು: ಭಾರಿ ಮಳೆಯಿಂದ ಕೆರೆಯಂತಾದ RMP ಕ್ವಾರ್ಟರ್ಸ್; ಮೇಯರ್ ಪ್ರತಿನಿಧಿಸುವ ವಾರ್ಡ್​ನಲ್ಲಿಯೇ ನಿವಾಸಿಗಳ ಪರದಾಟ

‘ಶಿವಣ್ಣ ಮತ್ತು ಅವರ ಕುಟುಂಬಕ್ಕೆ ನಾನು ಚಿರಋಣಿ’; ಸಲಗ ಗೆಲುವಿನಲ್ಲಿ ದುನಿಯಾ ವಿಜಯ್​ ಧನ್ಯವಾದ

Click on your DTH Provider to Add TV9 Kannada