ಸಾವಿರದ ಲೆಕ್ಕದಲ್ಲಿ ರಸ್ತೆ ಗುಂಡಿ ಲೆಕ್ಕ ಕೊಟ್ಟ ಬಿಬಿಎಂಪಿ ಹೊಸ ಕಮಿಷ​ನರ್, ಲಕ್ಷಕ್ಕೂ ಅಧಿಕ ಗುಂಡಿ ತೋರಿಸ್ತೀವಿ ಎನ್ನುತ್ತಿರುವ ನಾಗರಿಕರು! ಮುಂದೆ? ಡಿಜಿಟಲ್​ ಲೈವ್​ನಲ್ಲಿ ಚರ್ಚೆ

| Updated By: Digi Tech Desk

Updated on: Jun 02, 2022 | 4:05 PM

ಬಿಬಿಎಂಪಿಗೆ ಕಮಿಷನರ್​ ಆಗಿ ಹೊಸದಾಗಿ ಯಾರೇ ಬರಲಿ, ಅವರು ಹೇಳುವ ಮೊದಲ ಮಾತು ಮಳೆ ಮತ್ತು ಗುಂಡಿ. ಹೊಸ ಕಮಿಷ​ನರ್​ ತುಷಾರ್ ಅವರೂ ಲೆಕ್ಕ ಹಾಕಿದವರಂತೆ ಬೆಂಗಳೂರಿನಲ್ಲಿ ಬರೋಬ್ಬರಿ 10,000 ಗುಂಡಿಗಳಿವೆ ಎಂದು ಹೇಳಿದ್ದಾರೆ. ಬನ್ನೀ ಸಾ ಸಾವಿರ ಅಲ್ಲ; ಲಕ್ಷಣಗಳ ಲೆಕ್ಕದಲ್ಲಿ ಗುಂಡಿಗಳನ್ನು ತೋರಿಸುತ್ತೇವೆ ಎನ್ನುತ್ತಾರೆ ನಮ್ಮ ರಾಜಧಾನಿ ಮಂದಿ.

ಗುಂಡಿ ರಾಜಕೀಯ… ಇದು ಬಿಬಿಎಂಪಿ ಅಧಿಕಾರಿಗಳ ಗಂಡಾಗುಂಡಿಯೇ ಸರಿ. ಇದರ ವಿರುದ್ಧ ರಾಜ್ಯ ಹೈಕೋರ್ಟ್​ ಮುಖ್ಯ ನ್ಯಾಯಾಧೀಶರೇ ಛೀಮಾರಿ ಹಾಕಿದ್ದಾರೆ. ಇಂದಲ್ಲ, ಎರಡಲ್ಲ… ಹಲವು ಬಾರಿ! ಆದರೆ ಫಲಿತಾಂಶ ಮಾತ್ರ ಬೆಂಗಳೂರು ರಸ್ತೆಗಳಲ್ಲಿ ನಿತ್ಯನೂತನವಾಗಿ ಕಂಡುಬರುವ ಗುಂಡಿಗಳಂತೆ ಶೂನ್ಯಾಕಾರದ್ದು! ಇನ್ನು ರಾಜಧಾನಿ ಮಂದಿ ಸಹ ಇದಕ್ಕೇ ಅಡ್ಜಸ್ಟ್​ ಆಗಿಬಿಟ್ಟಿದ್ದಾರೆ. ಆದರೆ ಅನಾಹುತ ನಡೆದಾಗ ಜೀವ ಝಲ್ಲೆನ್ನುತ್ತದೆ. ಹಾಗಂತ ಎಮ್ಮೆ ಚರ್ಮದ ಬಿಬಿಎಂಪಿ ಅಧಿಕಾರಿಗಳು ಇದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಂತ ರಾಜಧಾನಿ ಬೆಂಗಳೂರಿನ ನಾಗರಿಕರು ಇದನ್ನೆಲ್ಲಾ ಸಹಿಸಿಕೊಂಡು, ಹೊಂಡಗಳನ್ನು ದಾಟಿಕೊಂಡು ಜೀವನ ಸಾಗಿಸಬೇಕಾ? ಇದಕ್ಕೆಲ್ಲ ಕೊನೆ ಯಾವಾಗ?

ಇನ್ನು ಬಿಬಿಎಂಪಿಗೆ ಕಮಿಷನರ್​ ಆಗಿ ಹೊಸದಾಗಿ ಯಾರೇ ಬರಲಿ, ಅವರು ಹೇಳುವ ಮೊದಲ ಮಾತು ಮಳೆ ಮತ್ತು ಗುಂಡಿ. ಹೊಸ ಕಮಿಷ​ನರ್​ ತುಷಾರ್ ಅವರೂ ಲೆಕ್ಕ ಹಾಕಿದವರಂತೆ ಬೆಂಗಳೂರಿನಲ್ಲಿ ಬರೋಬ್ಬರಿ 10,000 ಗುಂಡಿಗಳಿವೆ ಎಂದು ಹೇಳಿದ್ದಾರೆ. ಬನ್ನೀ ಸಾ ಸಾವಿರ ಅಲ್ಲ; ಲಕ್ಷಣಗಳ ಲೆಕ್ಕದಲ್ಲಿ ಗುಂಡಿಗಳನ್ನು ತೋರಿಸುತ್ತೇವೆ ಎನ್ನುತ್ತಾರೆ ನಮ್ಮ ರಾಜಧಾನಿ ಮಂದಿ. ಅಷ್ಟಕ್ಕೂ ಬೆಂಗಳೂರಿನಲ್ಲಿರುವ ಗುಂಡಿಗಳ ಲೆಕ್ಕ ಇಷ್ಟು ಬೇಗ ಹೇಗೆ ಸಿಕ್ಕಿತು? ಈ ಗುಂಡಿ ಮುಚ್ಚಿದರೆ ಮತ್ತೆ ಒಂದು ವಾರದೊಳಗೆ ಹೊಸ ಗುಂಡಿಗಳು ಏಳುವ ಸಾಧ್ಯತೆಯಿಲ್ಲವೇ? ಹಾಗಾಗಿ ಗುಂಡಿ ಮುಚ್ಚುವ ಕೆಲಸದ ಹಿಂದೆ ನಾಗರಿಕರಿಗೆ ಒಳ್ಳೆಯ ರಸ್ತೆ ಸೌಲಭ್ಯ ನೀಡುವ ಸಾಧ್ಯತೆ ಇದೆಯೇ? ಅಥವಾ ಮತ್ತೆ ಹಳೆ ಕಲ್ಲು -ಹೊಸ ಬಿಲ್ಲು ಮಾತಿನ ತರಹ ಗೋಲ್ಮಾಲ್ ಆಗುವ ಸಾಧ್ಯತೆ ಇದೆಯೇ? ಇನ್ನೇನು ಮಳೆಗಾಲ ಕಾಲಿಟ್ಟಾಯಿತು. ಮತ್ತೆ ಈ ವಿಷಯದ ಬಗ್ಗೆ ಚರ್ಚೆ ಮಾಡೋಣಾ ಬನ್ನೀ

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಈ ಕುರಿತಾದ ಚರ್ಚೆಯನ್ನು ಆ್ಯಂಕರ್​ ಚಂದ್ರಮೋಹನ್​ ಇಂದಿನ ಡಿಜಿಟಲ್​ ಲೈವ್​ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published on: Jun 02, 2022 03:41 PM