ಮಾನಸಿಕವಾಗಿ ಮನನೊಂದು ಮಕ್ಕಳ ಮೇಲೆ ಪೆಟ್ರೋಲ್ ಸುರಿದು, ತಾನೂ ಆತ್ಮಹತ್ಯೆಗೆ ಯತ್ನ; ತಾಯಿ ಸೇರಿ ಇಬ್ಬರು ಮಕ್ಕಳ ಸಾವು

| Updated By: ಆಯೇಷಾ ಬಾನು

Updated on: Jan 06, 2022 | 7:56 AM

ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಂ.ಗೊಲ್ಲಹಳ್ಳಿಯಲ್ಲಿ ಮಾನಸಿಕವಾಗಿ ಮನನೊಂದು ಮಕ್ಕಳ ಜೊತೆ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಅವರ ಪ್ರಾಣ ಕಾಪಾಡಲು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಗೃಹಿಣಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಮಾನಸಿಕವಾಗಿ ಮನನೊಂದು ಮಕ್ಕಳ ಮೇಲೆ ಪೆಟ್ರೋಲ್ ಸುರಿದು, ತಾನೂ ಆತ್ಮಹತ್ಯೆಗೆ ಯತ್ನ; ತಾಯಿ ಸೇರಿ ಇಬ್ಬರು ಮಕ್ಕಳ ಸಾವು
ಸಾಂದರ್ಭಿಕ ಚಿತ್ರ
Follow us on

ದೇವನಹಳ್ಳಿ: ಮಕ್ಕಳ ಜೊತೆ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಚಿಕಿತ್ಸೆ ಫಲಿಸದೆ ತಾಯಿ, ಮಕ್ಕಳಿಬ್ಬರು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ಸಾವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಂ.ಗೊಲ್ಲಹಳ್ಳಿಯಲ್ಲಿ ಮಾನಸಿಕವಾಗಿ ಮನನೊಂದು ಮಕ್ಕಳ ಜೊತೆ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಅವರ ಪ್ರಾಣ ಕಾಪಾಡಲು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಗೃಹಿಣಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಗ್ರಾಮದ ಸಂಧ್ಯಾ( 33 ) ಕುಸುಮಾ( 4 ) ಮತ್ತು ರೋಹಿತ್( 2 ) ಮೃತ ದುರ್ದೈವಿಗಳು. ಕಳೆದ ಮಂಗಳವಾರ ಮನೆಯಲ್ಲಿ ಯಾರು ಇಲ್ಲದ ಮೇಳೆ ಮಹಿಳೆ ತನ್ನ ಮೇಲೆ ಹಾಗೂ ತನ್ನ ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಬೆಂಕಿ ಕಂಡು ಸ್ಥಳೀಯರು ಮೂವರನ್ನೂ ಬೆಂಗಳೂರಿನ ವಿಕ್ಟೋರಿಯಾ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರು, ಆದ್ರೆ ತೀವ್ರ ಸುಟ್ಟ ಗಾಯಗಳಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Mekedatu Padayatra: ಮೇಕೆದಾಟು ಪಾದಯಾತ್ರೆಗೆ ಓರಿಯಾನ್ ಮಾಲ್​​ನಲ್ಲಿ ಶೂ ಖರೀದಿಸಿದ ಸಿದ್ದರಾಮಯ್ಯ