ಪತ್ನಿಗೆ ಮಚ್ಚಿನಿಂದ ಹೊಡೆದ ಪತಿ: ಓಡೋಡಿ ಬಂದು ಜೀವ ಉಳಿಸಿತು ಖಾಕಿ!

ಗಂಡನಿಂದ ಹಲ್ಲೆಗೊಳಗಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ನೆಲಮಂಗಲ ಗ್ರಾಮಾಂತರ ಪೊಲೀಸರು ಆಕೆಯ ಜೀವ ಉಳಿಸಿದ್ದಾರೆ. ನೆಲಮಂಗಲ ತಾಲೂಕಿನ ಗೋವಿಂದಪುರದಲ್ಲಿ ಘಟನೆ ನಡೆದಿದ್ದು, ಪೊಲೀಸರ ಮಾನವೀಯತೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.

ಪತ್ನಿಗೆ ಮಚ್ಚಿನಿಂದ ಹೊಡೆದ ಪತಿ: ಓಡೋಡಿ ಬಂದು ಜೀವ ಉಳಿಸಿತು ಖಾಕಿ!
ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ ಪೊಲೀಸ್​

Updated on: Jan 22, 2026 | 9:26 PM

ನೆಲಮಂಗಲ, ಜನವರಿ 22: ದಂಪತಿ (couple) ಜಗಳದಲ್ಲಿ ಮಚ್ಚಿನಿಂದ ಹಲ್ಲೆಗೊಳಗಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ನೆಲಮಂಗಲ ಗ್ರಾಮಾಂತರ ಪೊಲೀಸರಿಂದ (police) ಒಂದು ಜೀವ ಉಳಿದಿದೆ. ನೆಲಮಂಗಲ ತಾಲೂಕಿನ ಗೋವಿಂದಪುರದಲ್ಲಿ ಘಟನೆ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ನಡೆದದ್ದೇನು?

ನಗ್ಮಾ (25) ಹಲ್ಲೆಗೊಳಾಗಾದ ಪತ್ನಿ. ಸಲ್ಮಾನ್ (26) ಮಚ್ಚಿನಿಂದ ಹಲ್ಲೆ ಮಾಡಿದ ಪತಿ. ಬಳ್ಳಾರಿ ಮೂಲದ ದಂಪತಿ ಎರಡು ವರ್ಷದ ಹಿಂದೆ ಕೆಲಸ ಹರಸಿ ನೆಲಮಂಗಲಕ್ಕೆ ಬಂದಿದ್ದರು. ನೆಲಮಂಗಲ ತಾಲೂಕಿನ ಗೋವಿಂದಪುರದಲ್ಲಿ ವಾಸವಿದ್ದರು.

ಇದನ್ನೂ ಓದಿ: ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ಏರ್​ಲೈನ್ಸ್ ಸಿಬ್ಬಂದಿಯ ಬಂಧನ

ಇಂದು ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಸಲ್ಮಾನ್ ಮಚ್ಚಿನಿಂದ ನಗ್ಮಾಳ ಕೊಲೆ ಮಾಡಲು ಮುಂದಾಗಿದ್ದ. ಘಟನೆ ವೇಳೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ನಗ್ಮಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಳು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಕೂಡಲೇ ಪೊಲೀಸ್ ಜೀಪ್​​ನಲ್ಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಎಸ್​ಪಿ ವೆಂಕಟೇಶ್ ಪ್ರಸನ್ನ ಹಾಗೂ ಇನ್‌ಸ್ಪೆಕ್ಟರ್ ನರೇಂದ್ರ ಬಾಬು ಅವರಿಂದ ನಗ್ಮಾಳನ್ನ ಸಿದ್ದಾರ್ಥ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪೊಲೀಸರ ಮಾನವೀಯತೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಆರೋಪಿ ಪತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸರಣಿ ಅಂಗಡಿ ಕಳ್ಳತನ: 2 ಲಕ್ಷ ರೂ ಬೆಲೆಬಾಳುವ ವಸ್ತು ಕಳ್ಳತನ 

ಬೆಂಗಳೂರು ವಾಯುವ್ಯ ವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಕಾಟ ಜಾಸ್ತಿಯಾಗಿದ್ದು, ರಾತ್ರಿ ವೇಳೆ ರಾಡ್ ಹಿಡಿದು ಅಂಗಡಿ ಶೆಟರ್ ಮುರಿದು ಕಳ್ಳತನ ಮಾಡುತ್ತಿದ್ದಾರೆ. ಸದ್ಯ ಅಡಕಮಾರನಹಳ್ಳಿಯಲ್ಲಿ ಸರಣಿ ಅಂಗಡಿ ಕಳ್ಳತನ ನಡೆದಿದೆ.

ಇದನ್ನೂ ಓದಿ: 1997ರ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸ್: 29 ವರ್ಷ ಬಳಿಕ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್​​ ಸದಸ್ಯ

3 ಅಂಗಡಿಗಳ ಬೀಗ ಮುರಿದು 2 ಲಕ್ಷ ರೂ ಬೆಲೆಬಾಳುವ ವಸ್ತು ಮತ್ತು ನಗದು ಕಳ್ಳತನ ಮಾಡಲಾಗಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಿ: ಮಂಜುನಾಥ್​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.