ನಿವೃತ್ತ ಡಿವೈಎಸ್​​ಪಿ ಪುತ್ರಿಗೂ ತಟ್ಟಿದ ವರದಕ್ಷಿಣೆ ಕಿರುಕುಳ: ಮದ್ವೆಯಾದ ಎರಡೇ ವರ್ಷದಲ್ಲಿ ಸಂಸಾರದಲ್ಲಿ ಬಿರುಕು

ನಿವೃತ್ತ ಡಿವೈಎಸ್​​ಪಿ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ಮದುವೆ ಮಾಡಲಾಗಿದ್ದು, ಎರಡೇ ವರ್ಷದಲ್ಲಿ ಗಂಡನ ಮನೆಯವರಿಂದ ಕಿರುಕುಳ ನೀಡಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ತಂದೆ ಮತ್ತು ಕುಟುಂಬಸ್ಥರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿವೃತ್ತ ಡಿವೈಎಸ್​​ಪಿ ಪುತ್ರಿಗೂ ತಟ್ಟಿದ ವರದಕ್ಷಿಣೆ ಕಿರುಕುಳ: ಮದ್ವೆಯಾದ ಎರಡೇ ವರ್ಷದಲ್ಲಿ ಸಂಸಾರದಲ್ಲಿ ಬಿರುಕು
ಪ್ರಾತಿನಿಧಿಕ ಚಿತ್ರ
Edited By:

Updated on: Nov 17, 2025 | 4:19 PM

ನೆಲಮಂಗಲ, ನವೆಂಬರ್​ 17: ನಿವೃತ್ತ ಡಿವೈ​​ಎಸ್​​ಪಿ (DYSP) ಮಗಳಿಗೆ ವರದಕ್ಷಿಣೆ (Dowry) ಕಿರುಕುಳ  ನೀಡಿರುವ ಆರೋಪ ಕೇಳಿಬಂದಿದೆ. ಮದುವೆಯಾದ 15 ದಿನದಿಂದಲೇ ಕಿರುಕುಳ ನೀಡಲು ಆರಂಭಿಸಿದರಂತೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಗೋವರ್ಧನ್, ತಂದೆ ನಾಗರಾಜು ಹಾಗೂ ಕುಟುಂಬಸ್ಥರ ವಿರುದ್ಧ ದೂರು ನೀಡಲಾಗಿದ್ದು, 394/2025, ಕಾಲಂ 84,74,75,352 ಬಿಎನ್​​ಎಸ್ 3&4 ಡಿಪಿ ಆಕ್ಟ್ ಅಡಿಯಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ ತಾಲೂಕಿನ ತಿಮ್ಮಪ್ಪನಪಾಳ್ಯದ ನಿವಾಸಿ, ನಿವೃತ್ತಿ ಡಿವೈಎಸ್​​ಪಿ ಗೋವಿಂದರಾಜು ಮಗಳು ಅನಿತಾ, ಡಾ.ಗೋವರ್ಧನರೊಂದಿಗೆ 2023ರಲ್ಲಿ ನೆಲಮಂಗಲ ನಗರದಲ್ಲಿ ಅದ್ದೂರಿಯಾಗಿ ಮದುವೆ ಮಾಡಲಾಗಿತ್ತು. ಚಿನ್ನ, ಕೆಜಿಗಟ್ಟಲೆ ಬೆಳ್ಳಿ, ಲಕ್ಷಾಂತರ ರೂ. ಹಣ ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಆದರೆ ಮದುವೆಯಾದ ಎರಡೇ ವರ್ಷಕ್ಕೆ ಗಂಡನ ಮನೆಯವರ ವಿರುದ್ಧ ಕಿರುಕುಳ ಆರೋಪ ಮಾಡಲಾಗಿದೆ.

ಫೈನಾನ್ಸ್ ಕಿರುಕುಳಕ್ಕೆ ವೃದ್ಧ ಆತ್ಮಹತ್ಯೆಗೆ ಶರಣು

ಫೈನಾನ್ಸ್ ಕಿರಕುಳಕ್ಕೆ ಬೇಸತ್ತು ವೃದ್ಧ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಸಾತೇರಿ ರುಟಕುಟೆ (78) ಆತ್ಮಹತ್ಯೆ ಮಾಡಿಕೊಂಡ ವೃದ್ಧ.  ಬೆಳಗಾವಿ ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದೆ ಫೈನಾನ್ಸ್ ಹಾವಳಿ ತೀವ್ರಗೊಂಡಿತ್ತು. ಇಲ್ಲಿ ಅನೇಕರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಗ್ರಾಮ ತೊರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಫೈನಾನ್ಸ್ ಹಾವಳಿ ಕಮ್ಮಿಯಾಯ್ತು ಅನ್ನುವಾಗಲೇ ಕಡೋಲಿ ಗ್ರಾಮದಲ್ಲಿ ಮರ್ಯಾದೆಗೆ ಹೆದರಿ ವೃದ್ಧ ಆತ್ಮಹತ್ಯೆಗೆ ಶರಣಾಗಿದ್ದರು.

ಇದನ್ನೂ ಓದಿ: ಚಿನ್ನದಂಥ ಪತ್ನಿ ಇದ್ದರೂ ಇನ್ನೊಬ್ಬಳ ಜತೆ ಲವ್ವಿಡವ್ವಿ: ಹೆಂಡ್ತಿ ಪ್ರಶ್ನಿಸಿದ್ದಕ್ಕೆ ನಡೆಯಿತು ಘೋರ ದುರಂತ

ರೈತ ಸಾತೇರಿ ಮಣ್ಣೂರ ಗ್ರಾಮದ ಕೋ ಆಪರೇಟಿವ್ ಸೊಸೈಟಿಯಲ್ಲಿ 12 ಲಕ್ಷ ರೂ. ಸಾಲ ಮಾಡಿದ್ದರು. ಈ ಸಾಲದ ಕಂತನ್ನು ಕೆಲ ವರ್ಷಗಳ ಕಾಲ ಕಟ್ಟಿದ್ದು, 4 ಲಕ್ಷ ರೂ. ಒಟ್ಟು ಪಾವತಿ ಮಾಡಿದ್ದರು. ಬಳಿಕ ಬೆಳೆ ಕೈಕೊಟ್ಟು, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಫೈನಾನ್ಸ್​​ ಸಿಬ್ಬಂದಿ ಕಿರಕುಳ ನೀಡಲು ಆರಂಭಿಸಿದ್ದಾರಂತೆ. ಕೊನೆಗೆ ಕೋರ್ಟ್ ಆದೇಶ ತಂದು ಮನೆಯನ್ನ ಹರಾಜು ಮಾಡುತ್ತೇವೆ ಎಂದು ಗ್ರಾಮದಲ್ಲಿ ಡಂಗುರ ಸಾರಿದ್ದರು. ಹೀಗಾಗಿ ಮನನೊಂದು ಸಾತೇರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವೃದ್ದನ ಸಾವಿಗೆ ನ್ಯಾಯ ಕೊಡಿಸಿ ಎಂದು ಕುಟುಂಬ ಹಾಗೂ ಇಡೀ ಗ್ರಾಮವೇ ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.