AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದಂಥ ಪತ್ನಿ ಇದ್ದರೂ ಇನ್ನೊಬ್ಬಳ ಜತೆ ಲವ್ವಿಡವ್ವಿ: ಹೆಂಡ್ತಿ ಪ್ರಶ್ನಿಸಿದ್ದಕ್ಕೆ ನಡೆಯಿತು ಘೋರ ದುರಂತ

ಚಿನ್ನದಂಥ ಹೆಂಡ್ತಿ ಇದ್ದರೂ ಇನ್ನೊಬ್ಬಳ ಮೋಹಕ್ಕೆ ಪತಿರಾಯ ಬಿದ್ದಿದ್ದ. ಇದನ್ನು ಹೆಂಡ್ತಿ ಪ್ರಶ್ನೆ ಮಾಡಿದ್ದಕ್ಕೆ ಅವಳಿಗೆ ವರದಕ್ಷಿಣೆ ಕಿರುಕುಳ ಕೊಡಲು ಶುರು ಮಾಡಿದ್ದ. ಗಂಡ ಹಿಂಸೆಯಿಂದ ಬೇಸತ್ತ ಪತ್ನಿ ತನ್ನ ಪುಟ್ಟ ಹೆಣ್ಣುಮಗುವನ್ನು ಬಿಟ್ಟು ದುರಂತ ಸಾವು ಕಂಡಿದ್ದು, ಇದೀಗ ಗಂಡ ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಪುಟ್ಟ ಮಗು ಅನಾಥವಾಗಿದೆ.

ಚಿನ್ನದಂಥ ಪತ್ನಿ ಇದ್ದರೂ ಇನ್ನೊಬ್ಬಳ ಜತೆ ಲವ್ವಿಡವ್ವಿ: ಹೆಂಡ್ತಿ ಪ್ರಶ್ನಿಸಿದ್ದಕ್ಕೆ ನಡೆಯಿತು ಘೋರ ದುರಂತ
Pooja Shree
TV9 Web
| Edited By: |

Updated on:Sep 01, 2025 | 5:36 PM

Share

ಬೆಂಗಳೂರು, (ಸೆಪ್ಟೆಂಬರ್ 01):ಗಂಡನ ಅನೈತಿಕ ಸಂಬಂಧ (illicit relationship) ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ಪತ್ನಿ (Wife) ದುರಂತ ಸಾವು ಕಂಡಿದ್ದಾಳೆ. ಹೌದು..ಗಂಡನ ಅನೈತಿಕ ಸಂಬಂಧ ಹಾಗೂ ಕಿರುಕುಣದಿಂದ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಅಘಾತಕಾರಿ ಘಟನೆಯೊಂದು ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದಿದೆ. ಗಂಡನ ಕಿರುಕುಳಕ್ಕೆ ಬೇಸತ್ತು 28 ವರ್ಷದ ಪತ್ನಿ ಪೂಜಾಶ್ರೀ ನೇಣಿಗೆ ಶರಣಾಗಿದ್ದಾಳೆ. ಇದರಿಂದ ಪುಟ್ಟ ಹೆಣ್ಣು ಮಗು ಅನಾಥವಾಗಿದೆ.

ಪೂಜಾಶ್ರೀ ಎಂಬ 28 ವರ್ಷದ ಮಹಿಳೆ ಮೂರು ವರ್ಷದ ಹಿಂದೆ ಪೋಷಕರು ನಿಶ್ಚಯಿಸಿದ್ದ ನಂದೀಶ್ ಜೊತೆ ವಿವಾಹವಾಗಿದ್ದರು. ಪೂಜಾಶ್ರೀ- ನಂದೀಶ್ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಕೂಡ ಇದೆ. ಪತಿ ನಂದೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೇ, ಪೂಜಾಶ್ರೀ ಕೂಡ ಖಾಸಗಿ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೇ, ಕಳೆದ ಒಂದು ವರ್ಷದಿಂದ ಪತಿ ನಂದೀಶ್ ಗೆ ಅನೈತಿಕ ಸಂಬಂಧ ಇರುವುದು ಪೂಜಾಶ್ರೀಗೆ ಗೊತ್ತಾಗಿದೆ. ಈ ಬಗ್ಗೆ ಪೂಜಾ ಪತಿ ನಂದೀಶ್ ರನ್ನು ಪ್ರಶ್ನಿಸಿದ್ದಾಳೆ. ಬಳಿಕ ನಂದೀಶ್, ಪೂಜಾಳಿಗೆ ಕಿರುಕುಳ ಕೊಡಲಾರಂಭಿಸಿದ್ದಾನೆ.

ಇದನ್ನೂ ಓದಿ: 26 ರ ವಿಧವೆ ಜೊತೆ 52 ವರ್ಷದ ಇಬ್ಬರು ಹೆಂಡಿರ ಗಂಡನ ಲಿವಿಂಗ್ ಟುಗೆದರ್! ಯುವತಿ ದೂರವಾಗ್ತಾಳೆಂದು ಬೆಂಕಿ ಹಚ್ಚಿ ಕೊಲೆ

ಈ ವೇಳೆ ನಂದೀಶ್ ತಾಯಿ, ನಿಮ್ಮ ಮನೆಯಿಂದ ವರದಕ್ಷಿಣೆ ತೆಗೆದುಕೊಂಜು ಬಾ ಎಂದು ಪೂಜಾಶ್ರೀಗೆ ಹೇಳಿದ್ದಾರೆ. ಬಳಿಕ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಬಳಿಕ ಪೂಜಾಶ್ರೀ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಹೋಗಿದ್ದರು. ಈ ಬಗ್ಗೆ ಮನೆಯಲ್ಲಿ ಎರಡು ಮೂರು ಭಾರಿ ರಾಜೀ ಪಂಚಾಯಿತಿ ನಡೆದಿದ್ದು, ಮತ್ತೆ ವರದಕ್ಷಿಣೆ ಕಿರುಕುಳ ನೀಡಲ್ಲ. ಅನೈತಿಕ ಸಂಬಂಧ ಬೆಳೆಸಲ್ಲ ಎಂದು ಭರವಸೆ ನೀಡಿ ಪತ್ನಿ ಪೂಜಾಶ್ರೀಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ.

ಆದ್ರೆ, ಮೂರು ದಿನಗಳ ಹಿಂದೆ ನಂದೀಶ್ ಮತ್ತೆ ಜಗಳ ತೆಗೆದು ಪತ್ನಿ ಪೂಜಾಶ್ರೀ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಪೂಜಾಶ್ರೀ ಮತ್ತೆ ತಾಯಿ ಮನೆಗೆ ಹೋಗಿದ್ದಳು. ಮರು ದಿನ ಬೆಳಿಗ್ಗೆ ಪೂಜಾಶ್ರೀ ತವರು ಮನೆಗೆ ಹೋಗಿ ಹೊಸ ಕಥೆ ಕಟ್ಟಿ ಕರೆದುಕೊಂಡು ಹೋಗಿದ್ದ. ಆದ್ರೆ, ನಿನ್ನೆ ಬೆಳಿಗ್ಗೆ ಪೂಜಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮೃತ ಪೂಜಾಶ್ರೀ ಪೋಷಕರ ದೂರಿನ ಆಧಾರದ ಮೇಲೆ ಈ ಘಟನೆ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿದ್ದು, ಪತಿ ನಂದೀಶ್ ನನ್ನು ಬಂಧಿಸಲಾಗಿದೆ. ಇನ್ನು ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ತಾಯಿ ಕೊಲೆಯಾಗಿದ್ದರೆ, ತಂದೆ ಜೈಲು ಪಾಲಾಗುತ್ತಿದ್ದಾನೆ. ಮಗು ಮಾತ್ರ ಅನಾಥವಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Mon, 1 September 25

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?