ಬಿಸಿಲಿನಿಂದ ಕೆಂಗೆಟ್ಟು ಹಣ್ಣು, ಜ್ಯೂಸ್​ಗಳ ಕಡೆ ಮುಖ ಮಾಡಿದ ಜನ; ದುಬಾರಿಯಾದ ದರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 09, 2024 | 9:33 PM

ಈ ವರ್ಷ ರಣ ಬಿಸಿಲಿನ ತಾಪಮಾನಕ್ಕೆ ರಾಜ್ಯದೆಲ್ಲೆಡೆ ಜನ ತತ್ತರಿಸಿ ಹೋಗಿದ್ದಾರೆ. ಇತ್ತ ಸಿಲಿಕಾನ್ ಸಿಟಿ ಹೊರವಲಯದಲ್ಲೂ ಬಿಸಿಲಿನ ದಗೆಗೆ ಮನೆಯಿಂದ ಹೊರಗೆ ಬರಲು ಕೂಡ ಜನ ಹೆದರುವಂತಾಗಿದೆ. ಈ ವರ್ಷ ಗರಿಷ್ಠ ಬಿಸಿಲಿನ ತಾಪಮಾನ ದಾಖಲಾಗುತ್ತಿದ್ದು, ಜನ ತಮ್ಮ ದಣಿವನ್ನ ನಿವಾರಿಸಿಕೊಳ್ಳಲು ಹಣ್ಣು ಹಾಗೂ ಜ್ಯೂಸ್​ಗಳ ಕಡೆ ಮುಖ ಮಾಡಿದ್ದಾರೆ. ಆದ್ರೆ, ಹಣ್ಣು ಜ್ಯೂಸ್​ಗಳ ದರ ಜನರಿಗೆ ಶಾಕ್ ನೀಡಿದೆ.

ಬಿಸಿಲಿನಿಂದ ಕೆಂಗೆಟ್ಟು ಹಣ್ಣು, ಜ್ಯೂಸ್​ಗಳ ಕಡೆ ಮುಖ ಮಾಡಿದ ಜನ; ದುಬಾರಿಯಾದ ದರ
ಹಣ್ಣು, ಜ್ಯೂಸ್​ಗಳ ಕಡೆ ಮುಖ ಮಾಡಿದ ಜನ; ದುಬಾರಿಯಾದ ದರ
Follow us on

ಬೆಂಗಳೂರು ಗ್ರಾಮಾಂತರ, ಏ.09: ಜಿಲ್ಲೆಯ ದೇವನಹಳ್ಳಿಯಲ್ಲಿ(Devanahalli) ಈ ವರ್ಷ ಗರಿಷ್ಠ 38 ಸೆಲ್ಸಿಯಸ್​ನಷ್ಟು ಬಿಸಲಿನ ತಾಪಮಾನ ದಾಖಲಾಗಿದ್ದು, ಜನ ಬಿಸಿಲಿಗೆ ಹೈರಾಣಾಗಿ ಹೋಗಿದ್ದಾರೆ. ಜನರು ತಮ್ಮ ದಣಿವಾರಿಸಿಕೊಳ್ಳಲು ಈಗ ಹಣ್ಣು ಮತ್ತು ಜ್ಯೂಸ್​ಗಳ ಕಡೆ ಮುಖ ಮಾಡಿದ್ದಾರೆ. ಬಿಸಿಲಿಗೆ ಮೈ ತಂಪೆರಿಸುವ ಕಲ್ಲಂಗಡಿ, ಪಪಾಯ, ಕರ್ಬುಜಾ ಸೇರಿದಂತೆ ಇನ್ನಿತರ ಹಣ್ಣುಗಳ ಖರೀದಿ ಹೆಚ್ಚು ಜೋರಾಗಿ ನಡೆಯುತ್ತಿದೆ. ಆದರೆ, ಬಿರು ಬಿಸಲಿಗೆ ಬೋರ್ವೆಲ್​​ಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಹಣ್ಣುಗಳ ಪೂರೈಕೆ ಗಿಂತ ಬೇಡಿಕೆ ಜಾಸ್ತಿ ಆಗಿದೆ. ಇದರಿಂದ ಅವುಗಳ ದರ ಕೂಡ ಸಹಜವಾಗಿ ದುಬಾರಿಯಾಗಿದ್ದು, ಜನರಿಗೆ ಶಾಕ್ ನೀಡಿದೆ.

ದರಗಳ ವಿವರ

                           ಹಿಂದಿನ ದರ                       ಇಂದಿನ ದರ

  • ಕಲ್ಲಂಗಡಿ     ಕೆಜಿಗೆ 15 ರಿಂದ 20 ರೂ.         30 ರಿಂದ 35 ರೂ
  • ಕರ್ಬೂಜ     ಕೆಜಿಗೆ 15 ರೂ.                                40 ರೂ
  • ಪಪಾಯ              15 ರೂ.                                    40 ರೂ
  • ಎಳನೀರು      30 ರಿಂದ 40 ರೂ.                        50 ರೂ

ಅಂದಹಾಗೆ ಬಿಸಲಿಗೆ ದಗೆಗೆ ಹಣ್ಣುಗಳು ನೀರಿನ ಅಭಾವದಿಂದ ಮಾರುಕಟ್ಟೆಗೆ ಬರುವ ಸರಕು ಪ್ರಮಾಣ ಕೂಡ ಕಡಿಮೆಯೇ ಇದೆ. ಆದ್ದರಿಂದ ಈಗ ಅವುಗಳ ರೇಟ್ ಕೂಡ ದುಬಾರಿಯಾಗಿದ್ದು, ಜನರು ಈ ರಣ ಬಿಸಲಿಗೆ ಛತ್ರಿ ಹಿಡಿದು ನಡೆಯುವಂತಾಗಿದೆ. ಇತ್ತ ಜನರು ದಣಿವನ್ನು ನೀಗಿಸಿಕೊಳ್ಳಲು ಅಲ್ಲಲ್ಲಿ ಇರುವ ಎಳನೀರು, ಕಬ್ಬಿನ ರಸ, ಮಜ್ಜಿಗೆ ಹಾಗೂ ಇನ್ನಿತರ ತಂಪು ಪಾನಿಯಗಳನ್ನು ಕುಡಿದು ದಣಿವರಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಹಣ್ಣುಗಳ ಬೆಲೆಯು ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಆದರೂ ಜನ ವಿಧಿ ಇಲ್ಲದೇ ತಮ್ಮ ದೇಹದ ದಣಿವರಿಸಿಕೊಳ್ಳಲು ಖರೀದಿಗೆ ಮುಗಿ ಬಿದ್ದಿದ್ದಾರೆ.

ಇದನ್ನೂ ಓದಿ:Most Expensive Fruits: ವಿಶ್ವದ ಅತ್ಯಂತ ದುಬಾರಿ ಹಣ್ಣುಗಳು ಇಲ್ಲಿದೆ 

ಒಂದು ಕಡೆ ಬೆಲೆ ಇದ್ದರೂ, ಹಣ್ಣುಗಳ ಪೂರೈಕೆ ಕಡಿಮೆ ಇದ್ದು, ವರುಣನ ಆಗಮನದ ನೀರಿಕ್ಷೆಯಲ್ಲಿ ಜನ ಇದ್ದಾರೆ. ಒಟ್ಟಾರೆ ಮನೆಯಿಂದ ಹೊರಗಡೆ ಬರಲು ಜನ ಈ ರಣ ಬಿಸಲಿಗೆ ತತ್ತರಿಸಿ ಹೋಗಿದ್ದಾರೆ. ಬಿಸಲಿನ ತಾಪಮಾನವನ್ನ ಧಣಿವರಿಸಿಕೊಳ್ಳಲು ಹಣ್ಣು, ಜ್ಯೂಸ್ ರೇಟ್ ಹೆಚ್ಚಾಗಿದ್ದರೂ ವಿಧಿಯಿಲ್ಲದೆ ಖರೀದಿ ಮಾಡಿಕೊಳ್ತಿದ್ದಾರೆ. ಆದ್ರೆ, ಆದಷ್ಟು ಬೇಗ ವರುಣ ಕೃಪೆ ತೋರಿ, ಬೇಗ ಮಳೆ ಬಂದು ವಾತಾವರಣ ತಂಪಾಗಲಿ ಎಂದು ದೇವರನ್ನ ಪ್ರಾರ್ಥಿಸುತ್ತಿರುವುದಂತೂ ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:30 pm, Tue, 9 April 24