ದೇವನಹಳ್ಳಿ: ಹೆಚ್ಡಿ ಕುಮಾರಸ್ವಾಮಿಗೆ ಹಾರ ಹಾಕಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ಹೂವಿನ ವ್ಯಾಪಾರಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ರಾಜೇಶ್ ಹಣ ಒಯ್ಯುತ್ತಿದ್ದರು. ಈ ವೇಳೆ ಹೆಚ್.ಡಿ. ಕುಮಾರಸ್ವಾಮಿ ಬಂದಿದ್ದನ್ನು ಕಂಡು ಹಾರಹಾಕಲು ಹೋಗಿದ್ದರು. ಪ್ಯಾಂಟ್ ಜೇಬಿನಲ್ಲಿ ಹಣ ಇಟ್ಟುಕೊಂಡು ರಾಜೇಶ್ ಹೋಗಿದ್ದರು.
ದೇವನಹಳ್ಳಿ: ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಹಾರಹಾಕಲು ಹೋಗಿ ವ್ಯಕ್ತಿಯೊಬ್ಬ 1 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ದೇವನಹಳ್ಳಿ ಪಟ್ಟಣಕ್ಕೆ ಹೆಚ್.ಡಿ. ಕುಮಾರಸ್ವಾಮಿ ಭೇಟಿ ವೇಳೆ ಘಟನೆ ನಡೆದಿದೆ. ಹೂವಿನ ವ್ಯಾಪಾರ ಮಾಡುತ್ತಿದ್ದ ರಾಜೇಶ್ ಎಂಬವರ ಹಣ ಕಳ್ಳತನವಾಗಿದೆ.
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ರಾಜೇಶ್ ಹಣ ಒಯ್ಯುತ್ತಿದ್ದರು. ಈ ವೇಳೆ ಹೆಚ್.ಡಿ. ಕುಮಾರಸ್ವಾಮಿ ಬಂದಿದ್ದನ್ನು ಕಂಡು ಹಾರಹಾಕಲು ಹೋಗಿದ್ದರು. ಪ್ಯಾಂಟ್ ಜೇಬಿನಲ್ಲಿ ಹಣ ಇಟ್ಟುಕೊಂಡು ರಾಜೇಶ್ ಹೋಗಿದ್ದರು. ಜನಸಂದಣಿಯಲ್ಲಿ ರಾಜೇಶ್ ಜೇಬಿನಲ್ಲಿದ್ದ ಹಣವನ್ನು ಕಳ್ಳರು ಕದ್ದಿದ್ದಾರೆ. ಹಣ ಕಳೆದುಕೊಂಡು ರಾಜೇಶ್ ಕಣ್ಣೀರು ಹಾಕಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಮಗೆ ಅಧಿಕಾರ ಕೊಡಿ ಅಂತ ಹಳ್ಳಿಗಳತ್ತ ಹೋಗುತ್ತೇನೆ, ಇದು ನನ್ನ ಕೊನೆಯ ಹೋರಾಟ: ಹೆಚ್ಡಿ ಕುಮಾರಸ್ವಾಮಿ ರಾಜ್ಯದಲ್ಲಿ ಇನ್ನು ಯಾರೂ ರೈತರ ಸಾಲಮನ್ನಾ ಮಾಡಲ್ಲ. ಸಾಲಮನ್ನಾ ಮಾಡಿದ್ರೂ ಏನೂ ಉಪಯೋಗಕ್ಕೆ ಬರಲ್ಲ. 25 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಹೈನುಗಾರಿಕೆ, ದ್ರಾಕ್ಷಿ, ತೋಟಗಾರಿಕೆ ಬೆಳೆಗೆ ಕೊಟ್ರೆ ಅನುಕೂಲ ಆಗುತ್ತದೆ. ನಾನೂ ಸಹ ಹಸುಗಳನ್ನ ಸಾಕಿ ಹೈನುಗಾರಿಕೆ ಕಷ್ಟ ತಿಳಿದಿದ್ದೇನೆ. ನನಗೆ ಐದು ವರ್ಷ ಸರ್ಕಾರ ರಚಿಸಲು ಅವಕಾಶ ಕೊಟ್ಟರೆ ರೈತರು 1 ರೂಪಾಯಿ ಸಾಲ ಮಾಡದಂತೆ ನೋಡಿಕೊಳ್ಳುತ್ತೇನೆ. ನಮಗೆ ಅಧಿಕಾರ ಕೊಡಿ ಅಂತ ಹಳ್ಳಿಗಳತ್ತ ಹೋಗುತ್ತೇನೆ. ಇದು ನನ್ನ ಕೊನೆಯ ಹೋರಾಟ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಹಣ ಲೂಟಿ ಮಾಡುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ಕೊಳಚೆ ನೀರು ತುಂಬಿ ವಿಷ ಕೊಡುತ್ತಿದ್ದೀರಾ? ಸರ್ಕಾರದ 100 ದಿನಗಳ ಸಾಧನೆ ಜಾಹೀರಾತಿಗಾಗಿ 10 ರಿಂದ 20 ಕೋಟಿ ಖರ್ಚು ಮಾಡಿದ್ದಾರೆ. ಜಾಹೀರಾತು ಮೂಲಕ ಜನರನ್ನ ಮರುಳು ಮಾಡಲು ಯತ್ನ ನಡೆಸಿದ್ದಾರೆ. ಎತ್ತಿನಹೊಳೆಗೆ ಸಿದ್ದರಾಮಯ್ಯ 16 ಸಾವಿರ ಕೋಟಿ ಕೊಟ್ರು. ಎತ್ತಿನಹೊಳೆ ನೀರು ಇನ್ನೂ ಸಕಲೇಶಪುರ ದಾಟಿ ಬಂದಿಲ್ಲ. 1 ವರ್ಷದಲ್ಲಿ ಎತ್ತಿನಹೊಳೆ ನೀರು ಹರಿಸುತ್ತೇವೆ ಅಂದಿದ್ರು. ಆದ್ರೆ ಯೋಜನೆ ಆರಂಭವಾದ ಬಳಿಕ ಸಿಎಂ ಆಗಿ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ನಾನು, ಬಿ.ಎಸ್. ಯಡಿಯೂರಪ್ಪ ಬಂದುಹೋದರು. ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಬಂದು ಕೂತಿದ್ದಾರೆ. 8 ಸಾವಿರ ಕೋಟಿಯಿಂದ ಆರಂಭವಾದ ಎತ್ತಿನಹೊಳೆ ಯೋಜನೆ ಈಗ 24 ಸಾವಿರ ಕೋಟಿಗೆ ಬಂದು ನಿಂತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಜೆಡಿಎಸ್ ಎಲ್ಲಿದೆ ಎಂದು ಕೆಲವರು ಮಾತನಾಡುತ್ತಾರೆ. 2018ರ ಎಲೆಕ್ಷನ್ ಬಳಿಕ ಕಾಂಗ್ರೆಸ್ ಸಹವಾಸ ಮಾಡಿದ್ನಲ್ಲ, ಆಗ ಜೆಡಿಎಸ್ ಪಕ್ಷವನ್ನು ಮುಗಿಸುವ ಕಥೆ ಶುರುವಾಗಿತ್ತು. ಆದ್ರೆ ದೇವರ, ಜನರ ಆಶೀರ್ವಾದದಿಂದ ಇಂದಿಗೂ ಜೆಡಿಎಸ್ ಇದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ದೇವನಹಳ್ಳಿಯಲ್ಲಿ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಮಗೆ ಅಧಿಕಾರ ಕೊಡಿ ಅಂತ ಹಳ್ಳಿಗಳತ್ತ ಹೋಗುತ್ತೇನೆ, ಇದು ನನ್ನ ಕೊನೆಯ ಹೋರಾಟ: ಹೆಚ್ಡಿ ಕುಮಾರಸ್ವಾಮಿ
ಇದನ್ನೂ ಓದಿ: ಬಿಟ್ಕಾಯಿನ್ ದಂಧೆ ಬಗ್ಗೆ ಇಡಿ ತನಿಖೆಗೆ ಎಚ್ಡಿ ಕುಮಾರಸ್ವಾಮಿ ಒತ್ತಾಯ
Published On - 5:24 pm, Sun, 7 November 21