ಯುವತಿಗೆ ಮೆಸೇಜ್ ಮಾಡಿದಕ್ಕೆ ದೇವನಹಳ್ಳಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ! ನಾಲ್ವರು ಅರೆಸ್ಟ್
ಯುವತಿಗೆ ಮೆಸೆಜ್ ಮಾಡುತ್ತಿದ್ದ ಅಂತ ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿ ಕಳೆದ ತಿಂಗಳು 31 ರಂದು ಆರೋಪಿಗಳು ಕೊಲೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಸುರೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಯಲಹಂಕದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವನಹಳ್ಳಿ: ಯುವಕನಿಗೆ ಚಾಕು ಇರಿದು ಕೊಲೆ (Murder) ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನ ಬಾಗಲೂರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಯುವತಿಗೆ ಮೆಸೇಜ್ (Message) ಮಾಡಿದ್ದ ಅಂತ ನಾಲ್ವರು ಚಾಕು ಇರಿದಿದ್ದಾರೆ. ಬಾಗಲೂರು ಕೈಗಾರಿಕಾ ಪ್ರದೇಶದ ಅಮೇಜಾನ್ ಕಂಪನಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದಾಳೆ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುರೇಂದ್ರ ಎಂಬುವನ ಮೇಲೆ ನಾಲ್ವರು ದಾಳಿ ಮಾಡಿದ್ದಾರೆ. ಮೋಹನ್, ರಾಕೇಶ್, ವರುಣ್ ಕುಮಾರ್ ಮತ್ತು ಸೂರಜ್ ಬಂಧಿತ ಆರೋಪಿಗಳು.
ಯುವತಿಗೆ ಮೆಸೇಜ್ ಮಾಡುತ್ತಿದ್ದ ಅಂತ ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿ ಕಳೆದ ತಿಂಗಳು 31 ರಂದು ಆರೋಪಿಗಳು ಕೊಲೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಸುರೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಯಲಹಂಕದ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಜ.31ರ ರಾತ್ರಿ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಯುವಕನಿಗೆ ಚಾಕು ಇರಿಯಲಾಗಿತ್ತು. ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳನ್ನ ಬಂಧಿಸಲಾಗಿದೆ. ಗಾಯಾಳು ಸುರೇಶ್ ಹಾಗೂ ಪ್ರಮುಖ ಆರೋಪಿಗಳಿಬ್ಬರು ಸಹೋದ್ಯೋಗಿಗಳು. ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ವಿಚಾರವಾಗಿ ಆರೋಪಿಗಳು ಹಾಗೂ ಸುರೇಶ್ ನಡುವೆ ಮನಸ್ತಾಪವಿತ್ತು. ಅಲ್ಲದೇ ಇತ್ತೀಚಿಗೆ ಸುರೇಶ್ ನನ್ನ ಕೆಲಸದಿಂದ ತೆಗೆಯಲಾಗಿತ್ತು. ಸಹದ್ಯೋಗಿ ಯುವತಿಗೆ ಕಿರುಕುಳದ ಆರೋಪದಡಿ ಸುರೇಶ್ ಕೆಲಸ ಕಳೆದುಕೊಂಡಿದ್ದ. ಜ.31 ರಂದು ಆರೋಪಿಗಳು ಹಾಗೂ ಸುರೇಶ್ ನಡುವೆ ಇದೇ ವಿಚಾರವಾಗಿ ವಾಗ್ವಾದಗಳಾಗಿವೆ. ಈ ಸಂದರ್ಭದಲ್ಲಿ ಓರ್ವ ಆರೋಪಿ ಸುರೇಶ್ಗೆ ಚಾಕು ಇರಿದಿದ್ದ. ಸದ್ಯ ಗಾಯಾಳು ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಶೋಧಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಯುವತಿ ಜೊತೆಗೆ ಅಸಭ್ಯ ವರ್ತನೆ: ಕಬ್ಬನ್ ಪಾರ್ಕ್ನಲ್ಲಿ ಜಾಗಿಂಗ್ ಮಾಡುತ್ತಿದ್ದ ಯುವತಿ ಜೊತೆಗೆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಗೆ ಖಾಸಗಿ ಅಂಗ ತೋರಿಸಿದ್ದಾನೆ. ಈ ಘಟನೆ ಜನವರಿ 22ರ ಸಂಜೆ ಆರು ಗಂಟೆ ಸಮಯಕ್ಕೆ ನಡೆದಿದೆ. ಸದ್ಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲುಲಾಗಿದೆ.
ಕಳ್ಳತನ ಆರೋಪಿಗಳ ಬಂಧನ: ತುಮಕೂರು: ಪಾವಗಡ ತಾಲೂಕಿನ ಹಲವೆಡೆ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಐವಾರ್ಲಹಳ್ಳಿ ಗ್ರಾಮದ ಜಯಪ್ರಕಾಶ್ ನಾಯ್ಕ್, ಲೋಕೇಶ್, ದೇವರಾಜ್ ಬಂಧಿತರು. ಬಂಧಿತರಿಂದ 11.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಕಳೆದ 2021 ಸೆಪ್ಟೆಂಬರ್ನಲ್ಲಿ ಸೇವಾಲಾಲ್ ಪುರ ಗ್ರಾಮದಲ್ಲಿ ಕಳವು ಮಾಡಿದ್ದರು. ಜೊತೆಗೆ ಪಾವಗಡ ಮಧುಗಿರಿ ತಾಲೂಕಿನ 8 ಮನೆಗಳಲ್ಲಿ ಕಳ್ಳತನ ಮಾಡಿದ್ದರು. ಕಳವು ಮಾಡಿದ್ದ ಆಭರಣಗಳನ್ನು ಮಹೇಶ್ ಎಂಬಾತರಿಗೆ ಮಾರಾಟ ಮಾಡಿದ್ದರು.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಬಂಧನ: ಬೈಕ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿದ್ಯಾರ್ಥಿಗಳಿಗೆ, ಗಾಂಜಾ ವ್ಯಸನಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಕದ್ದ ಬೈಕ್ನಲ್ಲಿ ಮಾರಾಟ ಮಾಡುತ್ತಿದ್ದರು. ಬೈರೇಶ್ ಮತ್ತು ಯಾಸೀರ್ ಅರಾಫತ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದ್ದ ಪೊಲೀಸರು, ಬಂಧಿತರಿಂದ 8 ದ್ವಿಚಕ್ರ ವಾಹನ ಮತ್ತು 1.2 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ
ಪದ್ಮಾವತಿ ಯಾದವ್ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿವಂತೆ ಸಹೋದರನಿಂದ ಹೋರಾಟ
Published On - 8:55 am, Sat, 5 February 22