ವರದಕ್ಷಿಣೆ ಕಾಟ, ಗರ್ಭಪಾತ ಮಾಡಿಸಿಕೊಳ್ಳಲು ಕಿರುಕುಳ ಆರೋಪ: ಗರ್ಭಿಣಿ ನೇಣಿಗೆ ಶರಣು

ನೆಲಮಂಗಲ: ಸಮಾಜ ಎಷ್ಟೆ ಬದಲಾವಣೆ ಆಗುತ್ತಿದೆ ಅಂದ್ರು ಈ ವರದಕ್ಷಿಣೆ ಅನ್ನೋ ಸಾಮಾಜಿಕ ಪಿಡುಗು ಮಾತ್ರ ಇಂದಿಗೂ ನಿಂತಿಲ್ಲ, ವರದಕ್ಷಿಣೆ ಕಿರುಕುಳದೊಂದಿಗೆ ಭ್ರೂಣ ಹತ್ಯೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಭ್ರೂಣ ಹತ್ಯೆ ಕಿರುಕುಳಕ್ಕೆ ಎರಡೂವರೆ ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಫೋಟೋದಲ್ಲಿ ಸುಂದರ ಮೊಗದ ಚೆಲುವೆಯಂತೆ ಕಾಣುತ್ತಿರುವ ಈಕೆಯ ಹೆಸರು ರಮ್ಯ. ಬೆಂಗಳೂರಿನ ಜಿಂದಾಲ್ ‌ನಗರದ ನಿವಾಸಿ 23 ವರ್ಷದ ರಮ್ಯ ಕಳೆದ […]

ವರದಕ್ಷಿಣೆ ಕಾಟ, ಗರ್ಭಪಾತ ಮಾಡಿಸಿಕೊಳ್ಳಲು ಕಿರುಕುಳ ಆರೋಪ: ಗರ್ಭಿಣಿ ನೇಣಿಗೆ ಶರಣು
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 11, 2020 | 4:16 PM

ನೆಲಮಂಗಲ: ಸಮಾಜ ಎಷ್ಟೆ ಬದಲಾವಣೆ ಆಗುತ್ತಿದೆ ಅಂದ್ರು ಈ ವರದಕ್ಷಿಣೆ ಅನ್ನೋ ಸಾಮಾಜಿಕ ಪಿಡುಗು ಮಾತ್ರ ಇಂದಿಗೂ ನಿಂತಿಲ್ಲ, ವರದಕ್ಷಿಣೆ ಕಿರುಕುಳದೊಂದಿಗೆ ಭ್ರೂಣ ಹತ್ಯೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಭ್ರೂಣ ಹತ್ಯೆ ಕಿರುಕುಳಕ್ಕೆ ಎರಡೂವರೆ ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಈ ಫೋಟೋದಲ್ಲಿ ಸುಂದರ ಮೊಗದ ಚೆಲುವೆಯಂತೆ ಕಾಣುತ್ತಿರುವ ಈಕೆಯ ಹೆಸರು ರಮ್ಯ. ಬೆಂಗಳೂರಿನ ಜಿಂದಾಲ್ ‌ನಗರದ ನಿವಾಸಿ 23 ವರ್ಷದ ರಮ್ಯ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಚಿಕ್ಕಬಿದುರಕಲ್ಲು ನಿವಾಸಿ ಅರುಣ್‌ನೊಂದಿಗೆ ಸಾಂಸಾರಿಕ‌ ಜೀವನಕ್ಕೆ ಕಾಲಿಟ್ಟಿದ್ದರು.

ಸುಖ ಸಂಸಾರಕ್ಕೆ ಸಾಕ್ಷಿ ಎಂಬಂತೆ ಅಂದವಾದ ಹೆಣ್ಣು ಮಗುವೂ ಆಯ್ತು. ಆದ್ರೆ ದಿನ ಕಳೆದಂತೆ ಸುಖಸಂಸಾರದಲ್ಲಿ ವರದಕ್ಷಿಣೆ ಎನ್ನೋ ಭೂತ ಕಾಡಲು ಶುರುವಾಗುತ್ತೆ. ಮದುವೆಗೆ ಮೊದಲು ಜಿಂದಾಲ್‌ನಲ್ಲಿ ಸೈಟ್ ಕೊಡುವುದಾಗಿ ರಮ್ಯ ಪೋಷಕರು ತಿಳಿಸಿದ್ದರಂತೆ. ಆದ್ರೆ ಈಗ ರಮ್ಯ ತಂಗಿಗೆ ಮದುವೆ ನಿಶ್ಚಯವಾಗಿದ್ದು ಸೈಟ್ ಮಾರಲು ಹೊರಟಿದ್ದರು ಎನ್ನಲಾಗಿದೆ. ಹಾಗಾಗಿ ದಿನದಿಂದ ದಿನಕ್ಕೆ ಕಿರುಕುಳ ಹೆಚ್ಚಾಗಿ ರಮ್ಯ ಬಹಳಷ್ಟು ನೊಂದು ತನ್ನ ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು ಎಂದು ಮೃತಳ ಸಂಬಂಧಿ ವರಲಕ್ಷ್ಮಿ ಅನ್ನೋರು ಅರೋಪ ಮಾಡಿದ್ದಾರೆ.

Published On - 2:24 pm, Thu, 11 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us