ದೇವನಹಳ್ಳಿ: ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್ (Smuggling) ಮಾಡಲು ಖತರ್ನಾಕ್ ಪ್ಲಾನ್ ಮಾಡಿ ಸ್ಮಗ್ಲರ್ಸ್ ಪ್ಲಾಪ್ ಆಗಿದ್ದು, 650 ಕ್ಕೂ ಅಧಿಕ ಕೆಜಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ರಕ್ತಚಂದನ (Red Sandalwood) ವನ್ನು ಪೊಲೀಸರು ವಶಕ್ಕೆ ಪಡೆದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ನೀಲಗಿರಿ ತೋಪಿನಲ್ಲಿ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ಪುಷ್ಪಾ ಸಿನಿಮಾದಲ್ಲಿ ಕಾಡಿನಲ್ಲಿ ಮರಗಳ ಮೇಲೆ ರಕ್ತ ಚಂದನ ತುಂಡುಗಳನ್ನ ಕಟ್ಟಿ ಪೊಲೀಸರ ಕಣ್ತಪ್ಪಿಸೂ ದೃಶ್ಯದ ರೀತಿ ನೀಲಗಿರಿ ಮರಗಳ ನಡುವೆ ಭೂಮಿಯಲ್ಲಿ ರಕ್ತ ಚಂದನ ಬಚ್ಚಿಟ್ಟು ಖದೀಮರು ಸ್ಮಗ್ಲಿಂಗ್ ಮಾಡಲು ಯತ್ನಿಸಿದ್ದಾರೆ. ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಕೆಜಿಗಟ್ಟಲೆ ರಕ್ತಚಂದನ ವಶಕ್ಕೆ ಪಡೆಯಲಾಗಿದೆ. ನೆರೆಯ ಆಂದ್ರದ ನಲ್ಲಮಲ್ಲ ಅರಣ್ಯ ಪ್ರದೇಶದಿಂದ ರಕ್ತ ಚಂದನ ತಂದಿದ್ದು, ಪೊಲೀಸರು ದಾಳಿ ನಡೆಸುತ್ತಿದ್ದಂತೆ ಖದೀಮರು ಎಸ್ಕೇಪ್ ಆಗಿದ್ದಾರೆ. ರಕ್ತ ಚಂದನ ಬಚ್ಚಿಟ್ಟಿದ್ದ ಅಯಾಜ್ ಖಾನ್, ಜಮೀರ್ ಮತ್ತು ಇರ್ಪಾನ್ ಎಸ್ಕೇಪ್ ಆಗಿದ್ದು, ಹೀಗಾಗಿ ಮೂವರ ವಿರುದ್ದ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.
ಹೊಸಕೋಟೆ ಪೊಲೀಸರಿಂದ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆದಿದೆ.
ಇದನ್ನೂ ಓದಿ: Cough: ಕಫ ಸಮಸ್ಯೆಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದು ಸುಲಭ ಚಿಕಿತ್ಸೆ
ಸಿನಿಮಾ ಸ್ಟೈಲ್ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್
ಮೊದಲಿಗೆ ನೀಲಗಿರಿ ತೋಪಿನ ಪಾಳು ಬಿದ್ದ ಮನೆಯಲ್ಲಿ ರಕ್ತಚಂದನ ಇಟ್ಟಿರೋದಾಗಿ ಮಾಹಿತಿ ಸಿಕ್ಕಿದ್ದು, ಖಚಿತ ಮಾಹಿತಿ ಮೆರೆಗೆ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಕ್ರೈಂ ತಂಡದ ಜತೆ ಪಾಳುಬಿದ್ದ ಮನೆ ಮೇಲೆ ದಾಳಿ ಮಾಡಿದ್ದಾರೆ. ಆದ್ರೆ ದಾಳಿ ವೇಳೆ ಮನೆಯಲ್ಲಿ ಯಾವುದೇ ರಕ್ತಚಂದನ ತುಂಡು ಪತ್ತೆಯಾಗಿಲ್ಲ. ಪುಷ್ಪಾ ಸಿನಿಮಾದಲ್ಲಿ ಪೊಲೀಸರು ಬರೋದನ್ನ ತಿಳಿದು ಹರಿಯುವ ನೀರಿಗೆ ತುಂಡುಗಳನ್ನ ಎಸೆದು ಎಸ್ಕೇಪ್ ಆಗುವ ಹಾಗೆ, ಕಟ್ಟಿಗೇನಹಳ್ಳಿಯಲ್ಲಿ ಮನೆ ಪಕ್ಕದ ಹತ್ತಾರು ಎಕರೆ ಪ್ರದೇಶದ ನೀಲಗಿರಿ ತೋಪಿನಲ್ಲಿ ರಕ್ತ ಚಂದನವನ್ನು ಖದೀಮರು ಬಚ್ಚಿಟ್ಟಿದ್ದಾರೆ. ಮನೆಯಲ್ಲಿ ರಕ್ತ ಚಂದನವಿಲ್ಲ ಅಂತ ಪೊಲೀಸರು ವಾಪಸ್ ಹೋಗುತ್ತಾರೆ ಅಂದುಕೊಂಡಿದ್ದ ಖದೀಮರು, ಅದೇ ರೀತಿ ಪಾಳು ಬಿದ್ದ ಮನೆ ಮತ್ತು ಮನೆ ಸುತ್ತಾಮುತ್ತ ಪೊಲೀಸರು ಹುಡುಕಾಡಿದ್ದಾರೆ. ಆದ್ರೆ ಎಲ್ಲು ರಕ್ತ ಚಂಧನ ಸಿಗದಿದ್ರು ಇಲ್ಲೆ ಎಲ್ಲೋ ಇದೆ ಅಂತ ಪಕ್ಕಾ ಪ್ಲಾನ್ನಲ್ಲಿದ್ದ ಪೊಲೀಸರು, ಈ ವೇಳೆ ನೀಲಗಿರಿ ತೋಪಿನಲ್ಲಿ ಹುಡುಕಾಟ ನಡೆಸಿದಾಗ ಒಂದು ಕಡೆ ರಕ್ತಚಂದನ ಚಕ್ಕೆ ಪತ್ತೆಯಾಗಿದೆ. ಚಕ್ಕೆ ಪತ್ತೆಯಾದ ಹಿನ್ನೆಲೆ ಹತ್ತಾರು ಎಕರೆ ನೀಲಗಿರಿ ತೋಪಿನಲ್ಲಿ ಕೂಂಬಿಂಗ್ ಮಾಡಿದ್ದಾರೆ. ರಕ್ತಚಂದನ ತುಂಡುಗಳಿಗಾಗಿ 20 ಕ್ಕೂ ಅಧಿಕ ಪೊಲೀಸರಿಂದ 2 ಗಂಟೆಗೂ ಅಧಿಕ ಕಾಲ ನೀಲಗಿರಿ ತೋಪಿನಲ್ಲಿ ಸರ್ಚ್ ಮಾಡಿದ್ದಾರೆ.
ಶ್ವಾನದಳದಿಂದ ಪೊಲೀಸರಿಗೆ ಸಿಕ್ತು ಕೆಜಿಗಟ್ಟಲೆ ರಕ್ತಚಂಧನ
ನೀಲಗಿರಿ ತೋಪಿನಲ್ಲಿ ಚಕ್ಕೆ ಸಿಕ್ಕ ಹಿನ್ನೆಲೆ ಶ್ವಾನದಳ ಕರೆಸಿ ಸರ್ಚ್ ಮಾಡಿದ್ದು, ಈ ವೇಳೆ ತೋಪಿನ ಹಲವಡೆ ಭೂಮಿಯಲ್ಲಿ ರಕ್ತಚಂದನ ಬಗ್ಗೆ ಶ್ವಾನ ಸುಳಿವು ಕೊಟ್ಟಿದೆ. ಹೀಗಾಗಿ ಸ್ಥಳಕ್ಕೆ ಜೆಬಿಸಿ ಕರೆಸಿ ಶ್ವಾನ ತೋರಿಸಿದ ಜಾಗದಲ್ಲಿ ಹುಡುಕಾಡಿದಾಗ ರಕ್ತಚಂದನ ತುಂಡುಗಳು ಪತ್ತೆಯಾಗಿದೆ. 650 ಕ್ಕೂ ಅಧಿಕ ಕೆಜಿ ರಕ್ತ ಚಂದನ ತುಂಡುಗಳು ನೀಲಗಿರಿ ತೋಪಿನಲ್ಲಿ ಪತ್ತೆಯಾಗಿದ್ದು, ಎಲ್ಲವನ್ನೂ ವಶಕ್ಕೆ ಪಡೆದು ಹೊಸಕೋಟೆ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ. ಆದ್ರೆ ಅಷ್ಟೋತ್ತಿಗಾಗಲೆ ಗ್ರಾಮದಿಂದ ಖದೀಮರು ಎಸ್ಕೇಪ್ ಆಗಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರು: ನಗರದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿರುವಂತಹ ಘಟನೆ ಹುಣಸೂರು ತಾಲ್ಲೂಕಿನ ರಂಗಯ್ಯನ ಕೊಪ್ಪಲು ಗೇಟ್ ಬಳಿಯ ಹೆದ್ದಾರಿ ಬದಿಯಲ್ಲಿ ಪತ್ತೆಯಾಗಿದೆ. ಮೈಸೂರು ಬಂಟ್ವಾಳ – 275ಯಲ್ಲಿ ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 40 ರಿಂದ 45 ವಯಸ್ಸಿನ ವ್ಯಕ್ತಿಯಾಗಿದ್ದು, ನಾಪತ್ತೆಯಾದವರು ಯಾರಾದರೂ ಇದ್ದರೆ ಬಿಳಿಕೆರೆ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:14 am, Fri, 17 June 22