IND vs IRE Full Schedule, Squad: ಟಿ20 ಸರಣಿಯ ವೇಳಾಪಟ್ಟಿ, ತಂಡ, ಪಂದ್ಯದ ಬಗೆಗಿನ ಸಂಪೂರ್ಣ ಮಾಹಿತಿ ಹೀಗಿದೆ
IND vs IRE Full Schedule, Squad: ಈ ತಿಂಗಳ ಅಂತ್ಯದಲ್ಲಿ ಭಾರತ ಮತ್ತು ಐರ್ಲೆಂಡ್ ನಡುವೆ 2 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಗೆ ಎರಡೂ ತಮ್ಮ ತಂಡಗಳನ್ನು ಪ್ರಕಟಿಸಿದ್ದಾರೆ. ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಐರ್ಲೆಂಡ್ ತಂಡವನ್ನು ಆಂಡ್ರ್ಯೂ ಬಲ್ಬಿರ್ನಿ ಮುನ್ನಡೆಸಲಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ಭಾರತ ಮತ್ತು ಐರ್ಲೆಂಡ್ (India and Ireland) ನಡುವೆ 2 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಗೆ ಎರಡೂ ತಮ್ಮ ತಂಡಗಳನ್ನು ಪ್ರಕಟಿಸಿದ್ದಾರೆ. ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಐರ್ಲೆಂಡ್ ತಂಡವನ್ನು ಆಂಡ್ರ್ಯೂ ಬಲ್ಬಿರ್ನಿ ಮುನ್ನಡೆಸಲಿದ್ದಾರೆ. ಭಾರತ ಮತ್ತು ಐರ್ಲೆಂಡ್ ಎರಡೂ ತಂಡಗಳಲ್ಲಿ ಕೆಲವು ಹೊಸ ಮುಖಗಳಿಗೆ ಅವಕಾಶ ನೀಡಿವೆ. ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (Sanju Samson, Suryakumar Yadav) ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಭಾರತ ತಂಡಕ್ಕೆ ಮರಳಿದ್ದಾರೆ. ಮತ್ತೊಂದೆಡೆ, ರಾಹುಲ್ ತ್ರಿಪಾಠಿ ಅವರಿಗೆ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಐರ್ಲೆಂಡ್ ಎರಡು ಹೊಸ ಮುಖಗಳನ್ನು ತಂಡಕ್ಕೆ ಸೇರಿಸಿದ್ದು, ಸ್ಟೀಫನ್ ಡೊಹೆನಿ ಮತ್ತು ಕಾನರ್ ಓಲ್ಫರ್ಟ್ ಅವಕಾಶ ಪಡೆದಿದ್ದಾರೆ. ಐಪಿಎಲ್ 2022 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ರಾಹುಲ್ ತ್ರಿಪಾಠಿ 413 ರನ್ ಗಳಿಸಿದರು. ಐಪಿಎಲ್‌ನಲ್ಲಿ ಅವರ ಅದ್ಭುತ ಪ್ರದರ್ಶನವು ಅವರಿಗೆ ಭಾಗ್ಯದ ಬಾಗಿಲು ತೆರೆದಿದೆ. ಐರ್ಲೆಂಡ್‌ನ ಹೊಸ ಮುಖಗಳಾದ ಸ್ಟೀಫನ್ ಡೊಹೆನಿ ಮತ್ತು ಕಾನರ್ ಓಲ್ಫರ್ಟ್ ಕ್ಲಬ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅಂತರ-ಪ್ರಾಂತೀಯ T20 ಟ್ರೋಫಿಯಲ್ಲಿ ಡೊಹೆನಿ 52.67 ಸರಾಸರಿಯಲ್ಲಿ 158 ರನ್ ಗಳಿಸಿದರು. ಭಾರತದ ಐರ್ಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ, ತಂಡ ಮತ್ತು ಲೈವ್ ಸ್ಟ್ರೀಮಿಂಗ್ ಸಂಪೂರ್ಣ ವಿವರ ಇಲ್ಲಿದೆ.
ಭಾರತ vs ಐರ್ಲೆಂಡ್ T20 ಸರಣಿ
– 26 ಜೂನ್: 1ನೇ T20I, ಡಬ್ಲಿನ್
– 28 ಜೂನ್: 2ನೇ T20I, ಡಬ್ಲಿನ್
ಭಾರತ ಮತ್ತು ಐರ್ಲೆಂಡ್ ನಡುವಿನ T20 ಸರಣಿಯ ನೇರ ಪ್ರಸಾರ
ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿ ಯಾವಾಗ ನಡೆಯಲಿದೆ?
ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯು ಜೂನ್ 26 ಮತ್ತು 28 ರಂದು ನಡೆಯಲಿದೆ.
ಭಾರತ vs ಐರ್ಲೆಂಡ್ T20 ಪಂದ್ಯದ ಸರಣಿಯನ್ನು ಎಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ?
ಸೋನಿ ನೆಟ್‌ವರ್ಕ್‌ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ T20 ಪಂದ್ಯದ ಸರಣಿಯ ನೇರ ಪ್ರಸಾರವಾಗಲಿದೆ.
ಭಾರತ vs ಐರ್ಲೆಂಡ್ T20 ಸರಣಿಯನ್ನು ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?
ಸೋನಿ ಲೈವ್ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ T20 ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
ಭಾರತ ತಂಡ: ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್
ಐರ್ಲೆಂಡ್ ತಂಡ: ಆಂಡ್ರ್ಯೂ ಬಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕಾನ್ಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಕಾನರ್ ಓಲ್ಫರ್ಟ್, ಲೋರ್ಕನ್ ಟಕರ್, ಕ್ರೇಗ್.