Ranji Trophy 2022: ರಣಜಿ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಬಂಗಾಳದ ಕ್ರೀಡಾ ಸಚಿವ..!

Ranji Trophy 2022: ಮನೋಜ್ ತಿವಾರಿ ಮತ್ತು ಶಹಬಾಜ್ ಅಹ್ಮದ್ ಅವರ ಜೊತೆಯಾಟವು ಬಂಗಾಳವನ್ನು 54 ರನ್​ಗಳಿಂದ 237 ರನ್​ಗಳಿಗೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರವನ್ನು ವಹಿಸಿತು. ಇವರಿಬ್ಬರು ಆರನೇ ವಿಕೆಟ್‌ಗೆ 183 ರನ್‌ಗಳ ಜೊತೆಯಾಟವಾಡಿದರು.

Ranji Trophy 2022: ರಣಜಿ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಬಂಗಾಳದ ಕ್ರೀಡಾ ಸಚಿವ..!
ಮನೋಜ್ ತಿವಾರಿ
Follow us
TV9 Web
| Updated By: ಪೃಥ್ವಿಶಂಕರ

Updated on: Jun 16, 2022 | 4:24 PM

ಕ್ರಿಕೆಟ್‌ ದುನಿಯಾದಲ್ಲಿ ‘ದಾದಾ’ ಹೆಸರು ಚಿರಪರಿಚಿತವಾಗಿದೆ. ದಾದಾ ಎಂಬ ಕೇಳಿದೊಡನೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ನೆನಪಾಗುತ್ತಾರೆ. ಆದರೆ, ಇಲ್ಲಿ ನಾವು ಹೇಳುತ್ತಿರುವುದು ತನ್ನ ತಂಡವನ್ನು ಸಂಕಷ್ಟಕ್ಕೆ ಸಿಲುಕದಂತೆ ಕಾಪಾಡಿದ ಛೋಟಾ ದಾದಾ ಬಗ್ಗೆ. ಸಂಕಷ್ಟದ ಸಮಯದಲ್ಲಿ ಶತಕ ಗಳಿಸಿ ಎದುರಾಳಿ ತಂಡದಲ್ಲಿ ಹೆಚ್ಚಿದ ಉತ್ಸಾಹಕ್ಕೆ ಕಡಿವಾಣ ಹಾಕುವ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ನಾವಿಲ್ಲಿ ರಣಜಿ ಟ್ರೋಫಿ (Ranji Trophy)ಯಲ್ಲಿ ಸ್ಪ್ಲಾಶ್ ಮಾಡುತ್ತಿರುವ ಬ್ಯಾಟ್ಸ್‌ಮನ್ ಮನೋಜ್ ತಿವಾರಿ (Manoj Tiwary) ಬಗ್ಗೆ ಮಾತನಾಡುತ್ತಿದ್ದೇವೆ. ತಿವಾರಿ ಅವರ ಅಡ್ಡಹೆಸರು ಬಂಗಾಳ ಕ್ರಿಕೆಟ್‌ನಲ್ಲಿ ‘ಛೋಟಾ ದಾದಾ’ ಎಂದು ಹೆಸರು ವಾಸಿಯಾಗಿದೆ. ಮನೋಜ್ ತಿವಾರಿ ಅವರು ಪ್ರಸ್ತುತ ಬಂಗಾಳದ ಕ್ರೀಡಾ ಸಚಿವರೂ ಆಗಿದ್ದು, ಜೊತೆಗೆ ಕ್ರಿಕೆಟ್ ಕೂಡ ಆಡುತ್ತಿದ್ದಾರೆ. ತಿವಾರಿ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಅದ್ಭುತ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.

ಮಧ್ಯಪ್ರದೇಶ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಮನೋಜ್ ತಿವಾರಿ 205 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದರು. ಈ ವೇಳೆ ಅವರು 12 ಬೌಂಡರಿ, 41 ಸಿಂಗಲ್ಸ್, 4 ಡಬಲ್ಸ್ ಮತ್ತು 1 ಬಾರಿ ಮೂರು ರನ್ ಗಳಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮನೋಜ್ ತಿವಾರಿ ಅವರ 29 ನೇ ಶತಕವಾಗಿದೆ. ಈ ಶತಕ ತಂಡಕ್ಕೆ ಹೆಚ್ಚು ಅಗತ್ಯವಿರುವ ಸಮಯದಲ್ಲಿ ಬಂಗಾಳ ತಂಡದ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್‌ನ ಬ್ಯಾಟ್‌ನಿಂದ ಹೊರಹೊಮ್ಮಿತು.

ಇದನ್ನೂ ಓದಿ:IND VS IRE: ಧವನ್​ ನಿಂಗ್ ವಯಸ್ಸಾಯ್ತೋ! ಐಪಿಎಲ್​ನಲ್ಲಿ ಮಿಂಚಿದರೂ ಟಿ20 ತಂಡದಲ್ಲಿ ಗಬ್ಬರ್​ಗಿಲ್ಲ ಸ್ಥಾನ

ಇದನ್ನೂ ಓದಿ
Image
IND vs SA: ದುಬಾರಿ ಬೌಲರ್​ಗೆ ಕೋಕ್, ಉಮ್ರಾನ್​ಗೆ ಚಾನ್ಸ್? 4ನೇ ಟಿ20ಗೆ ಭಾರತದ ಸಂಭಾವ್ಯ XI
Image
IND VS IRE: ಧವನ್​ ನಿಂಗ್ ವಯಸ್ಸಾಯ್ತೋ! ಐಪಿಎಲ್​ನಲ್ಲಿ ಮಿಂಚಿದರೂ ಟಿ20 ತಂಡದಲ್ಲಿ ಗಬ್ಬರ್​ಗಿಲ್ಲ ಸ್ಥಾನ

ತಂಡ ಸಂಕಷ್ಟದಿಂದ ಪಾರು

ಸಹಜವಾಗಿಯೇ ಶತಕ ಪೂರೈಸಿದ ತಕ್ಷಣ ಮನೋಜ್ ತಿವಾರಿ ಔಟಾದರೂ ತಮ್ಮ ಕೆಲಸ ಮಾಡಿ ಮುಗಿಸಿದರು. ಜೊತೆಗೆ ಮಧ್ಯಪ್ರದೇಶದ ಬೌಲರ್​ಗಳು ಬಲೆ ಹೆಣೆದ ಸಂಕಷ್ಟಕ್ಕೆ ಬೆಂಗಾಲ್ ತಂಡ ಸಿಕ್ಕಿಬೀಳಲು ಬಿಡಲಿಲ್ಲ. ಮನೋಜ್ ತಿವಾರಿ ಕ್ರೀಸ್‌ಗೆ ಬಂದಾಗ ಬಂಗಾಳ ತಂಡದ ಸ್ಕೋರ್ 5 ವಿಕೆಟ್‌ಗೆ 54 ಆಗಿತ್ತು. ಅದು ಮಧ್ಯಪ್ರದೇಶದ ಮೊದಲ ಇನಿಂಗ್ಸ್‌ನಲ್ಲಿ 341 ರನ್‌ಗಳ ಸ್ಕೋರ್‌ಗಿಂತ ಬಹಳ ಹಿಂದುಳಿದಿತ್ತು. ಆದರೆ, ತಿವಾರಿ ಔಟಾಗಿ ಪೆವಿಲಿಯನ್‌ಗೆ ಮರಳುವ ವೇಳೆಗೆ ಬೆಂಗಾಲ್ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಮನೋಜ್ ತಿವಾರಿ ಶತಕದ ನೆರವಿನಿಂದ ಬಂಗಾಳ 237 ರನ್ ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿತು.

ಶಹಬಾಜ್ ಜೊತೆಗಿನ ಜೊತೆಯಾಟ

ಮನೋಜ್ ತಿವಾರಿ ಮತ್ತು ಶಹಬಾಜ್ ಅಹ್ಮದ್ ಅವರ ಜೊತೆಯಾಟವು ಬಂಗಾಳವನ್ನು 54 ರನ್​ಗಳಿಂದ 237 ರನ್​ಗಳಿಗೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರವನ್ನು ವಹಿಸಿತು. ಇವರಿಬ್ಬರು ಆರನೇ ವಿಕೆಟ್‌ಗೆ 183 ರನ್‌ಗಳ ಜೊತೆಯಾಟವಾಡಿದರು. ಜೊತೆಗೆ ಎಂಪಿ ವಿರುದ್ಧದ ಪಂದ್ಯದಲ್ಲಿ ಬಂಗಾಳ ತಂಡ ಗೆಲುವಿನ ಲಯಕ್ಕೆ ಮರಳಲು ಅವಕಾಶ ನೀಡಿದರು.

ಮನೋಜ್ ತಿವಾರಿ ಹೊಗಳಿದ ಅರುಣ್ ಲಾಲ್

ಮನೋಜ್ ತಿವಾರಿ ಅವರ ಬ್ಯಾಟಿಂಗ್ ಕುರಿತು ಬಂಗಾಳ ತಂಡದ ಕೋಚ್ ಅರುಣ್ ಲಾಲ್, “ಅವರೊಬ್ಬ ದಂತಕಥೆ. ಮನೋಜ್ ಬಂಗಾಳ ಪರ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದು, ಅವರು ಒತ್ತಡವನ್ನು ನಿಭಾಯಿಸಿದ ರೀತಿ ಮತ್ತು ರನ್ ಗಳಿಸುವ ಹಸಿವನ್ನು ತೋರಿದ ರೀತಿ ಅದ್ಭುತವಾಗಿದೆ ಎಂದಿದ್ದಾರೆ.