IND vs SA 4th T20 Match Live Streaming: ಸರಣಿ ಜೀವಂತವಾಗಿರಿಸಲು ಭಾರತ ಗೆಲ್ಲಲೇಬೇಕು! ಪಂದ್ಯದ ಬಗ್ಗೆ ಮಾಹಿತಿಯಿದು
India vs South Africa 4th T20 Match Live Streaming: ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ತಂಡ ವಿಶಾಖಪಟ್ಟಣಂನಲ್ಲಿ ಗೆದ್ದು ಸರಣಿಯಲ್ಲಿ ಜೀವಂತವಾಗಿರಿಸಿದೆ. ಈ ಪಂದ್ಯ ಭಾರತಕ್ಕೂ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಶುಕ್ರವಾರ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ತಂಡ ವಿಶಾಖಪಟ್ಟಣಂನಲ್ಲಿ ಗೆದ್ದು ಸರಣಿಯಲ್ಲಿ ಜೀವಂತವಾಗಿರಿಸಿದೆ. ಈ ಪಂದ್ಯ ಭಾರತಕ್ಕೂ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ. ಪ್ರವಾಸಿ ತಂಡಕ್ಕೆ ಸರಣಿ ಕೈವಶ ಮಾಡಿಕೊಳ್ಳಲು ಕೇವಲ ಒಂದೇ ಒಂದು ಜಯದ ಅಗತ್ಯವಿದೆ. ರಿಷಬ್ ಪಂತ್ (Rishabh Pant) ನಾಯಕತ್ವದಲ್ಲಿ ಸರಣಿಯನ್ನು ಉಳಿಸುವುದು ತಂಡಕ್ಕೆ ದೊಡ್ಡ ಸವಾಲಾಗಿದೆ. ಆದಾಗ್ಯೂ, ಕೊನೆಯ ಪಂದ್ಯದ ನಂತರ, ಪುನರಾಗಮನದ ಭರವಸೆ ಗೋಚರಿಸುತ್ತದೆ.
ವಿಶಾಖಪಟ್ಟಣಂನಲ್ಲಿ ಉತ್ತಮ ಆರಂಭ ಪಡೆದ ಭಾರತ ತಂಡ ಮಧ್ಯಮ ಓವರ್‌ಗಳಲ್ಲಿ ಪರದಾಡುವಂತಾಯಿತು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ 21 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ತಂಡವನ್ನು 180 ರನ್ ಗಳಿಗೆ ಕೊಂಡೊಯ್ದರು. ಈಗ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯುತವಾಗಿ ಆಡಬೇಕಾಗಿದೆ. ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಹಾಲ್ ಮತ್ತು ಅಕ್ಷರ್ ಪಟೇಲ್ ಅದ್ಭುತ ಬೌಲಿಂಗ್ ಮಾಡಿದರು. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಕೂಡ ಲಯಕ್ಕೆ ಮರಳಿದ್ದು ಟೀಂ ಇಂಡಿಯಾ ಪಾಲಿಗೆ ಶುಭ ಸುದ್ದಿಯಾಗಿದೆ.
ಇದನ್ನೂ ಓದಿ:IND vs SA: ದುಬಾರಿ ಬೌಲರ್ಗೆ ಕೋಕ್, ಉಮ್ರಾನ್ಗೆ ಚಾನ್ಸ್? 4ನೇ ಟಿ20ಗೆ ಭಾರತದ ಸಂಭಾವ್ಯ XI
ಬೌಲರ್‌ಗಳ ವಾಪಸಾತಿಗೆ ಪಂತ್ ಸಂತಸ
ಮೂರನೇ T20I ನಲ್ಲಿ ದಕ್ಷಿಣ ಆಫ್ರಿಕಾವನ್ನು 48 ರನ್‌ಗಳಿಂದ ಸೋಲಿಸಿದ ನಂತರ ಐದು ಪಂದ್ಯಗಳ ಸರಣಿಯಲ್ಲಿ ಪುನರಾಗಮನ ಮಾಡಿದ ಭಾರತದ ನಾಯಕ ರಿಷಬ್ ಪಂತ್, ತಾನು ಬ್ಯಾಟಿಂಗ್‌ನಲ್ಲಿ 15 ರನ್‌ಗಳಷ್ಟು ಹಿಂದುಳಿದಿದ್ದೇವು ಎಂದು ಭಾವಿಸಿದ್ದೇನೆ ಆದರೆ ಬೌಲರ್‌ಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಪಂತ್, “ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇಬ್ಬರೂ ಉತ್ತಮ ಪ್ರದರ್ಶನ ನೀಡಿದರು. ನಾವು 15 ರನ್ ಹಿಂದೆ ಇದ್ದೇವೆ ಎಂದು ನಾವು ಭಾವಿಸಿದ್ದೇವೆ ಆದರೆ ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಬೌಲರ್‌ಗಳು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದರು. ಭಾರತದಲ್ಲಿ, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಪಾತ್ರ ಮುಖ್ಯವಾಗಿದೆ, ಆದ್ದರಿಂದ ಅವರ ಮೇಲೆ ಒತ್ತಡವಿರುತ್ತದೆ ಅಂತಹ ಪಂದ್ಯಗಳಲ್ಲಿ ಒತ್ತಡವಿಲ್ಲದೆ ಆಡುವುದು ಇಂತಹ ಫಲಿತಾಂಶವನ್ನು ನೀಡುತ್ತದೆ ಎಂದಿದ್ದಾರೆ.
ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ನೇ T20I ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ನೇ T20I ಪಂದ್ಯ ಯಾವಾಗ ನಡೆಯಲಿದೆ?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ಜೂನ್ 17 ರಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದ ಟಾಸ್ ಸಂಜೆ 6:30ಕ್ಕೆ ನಡೆಯಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ನೇ T20 ಎಲ್ಲಿ ನೇರ ಪ್ರಸಾರವಾಗಲಿದೆ?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ನೇ T20I ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ T20 ನ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಇದಲ್ಲದೇ tv9kannada.com ನ ಲೈವ್ ಬ್ಲಾಗ್‌ನಿಂದಲೂ ಪಂದ್ಯದ ಮಾಹಿತಿಯನ್ನು ಪಡೆಯಬಹುದು.