ಆನೇಕಲ್: ರೋಬೋಟ್ ನೆರವಿನ ಮೂಲಕ ಶಸ್ತ್ರಚಿಕಿತ್ಸೆ ಮಾಡಬಹುದಾದ ಆರ್ಎಎಸ್ ತಂತ್ರಜ್ಞಾನ ಸೌಲಭ್ಯವುಳ್ಳ ರೋಬೋಟ್ನು ನಾರಾಯಣ ಹೆಲ್ತ್ ಸಂಸ್ಥೆ ಇಂದು ಉದ್ಘಾಟಿಸಿದೆ. ನಾರಾಯಣ ಹೆಲ್ತ್ ಸಂಸ್ಥೆಯಲ್ಲಿ ರೋಬೋಟ್ ನೆರವಿನಿಂದ ಇನ್ನು ಮುಂದೆ ಶಸ್ತ್ರಚಿಕಿತ್ಸೆ ಮುಂದುವರೆಯಲಿದೆ. ನಾರಾಯಣ ಹೆಲ್ತ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ದೇವಿಪ್ರಸಾದ ಶೆಟ್ಟಿ ನೂತನ ರೊಬೋಟಿಕ್ ಶಸ್ತ್ರಚಿಕಿತ್ಸೆಗೆ ಚಾಲನೆ ನೀಡಿದ್ದಾರೆ.
ರೋಬೋಟಿಕ್ ಶಸ್ತ್ರ ಚಿಕಿತ್ಸೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ದೇವಿಪ್ರಸಾದ ಶೆಟ್ಟಿ, ರೋಬೋಟ್ ಮೆಷಿನ್ ಇದ್ದರೆ ಉತ್ತಮ. ರೋಬೋಟ್ ಶಸ್ತ್ರಚಿಕಿತ್ಸೆಯಿಂದ ಅಡ್ಡಪರಿಣಾಮ ಇಲ್ಲ. ಕ್ಯಾನ್ಸರ್ ರೋಗಿಗೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮೊದಲಿಗಿಂತಲೂ ಈ ರೋಬೋಟ್ ವಿಭಿನ್ನವಾಗಿದೆ. ಡಾ.ವಿನ್ಸಿ ಎಕ್ಸ್ ವ್ಯವಸ್ಥೆಯೊಂದಿಗೆ ಇದನ್ನು ಸಿದ್ಧಪಡಿಸಲಾಗಿದೆ. ಕಡಿಮೆ ನೋವು, ಕಡಿಮೆ ರಕ್ತದ ನಷ್ಟ, ಕಡಿಮೆ ಆಸ್ಪತ್ರೆಯ ವಾಸ್ತವ್ಯಕ್ಕೆ ಈ ರೋಬೋಟಿಕ್ಸ್ ಸಹಕಾರವಾಗಿದೆ ಎಂದರು.
ಹೇಗೆ ಈ ರೋಬೋಟಿಕ್ ಶಸ್ತ್ರ ಚಿಕಿತ್ಸೆ?
ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆಯಂತಹ ಗಂಭೀರ ಕಾಯಿಲೆಗಳಿರುವ ರೋಗಿಗಳಿಗೆ ಈ ರೋಬೋಟ್ ಮೂಲಕ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ. ಶಸ್ತ್ರ ತಜ್ಞರು ಶಸ್ತ್ರಕ್ರಿಯೆ ನಡೆಸುವ ರೀತಿಯಲ್ಲೇ ಈ ರೋಬೋಟ್ ಕಾರ್ಯನಿರ್ವಹಿಸಲಿದೆ. ಅತಿ ಸೂಕ್ಷ್ಮ ಮತ್ತು ಕ್ಲಿಷ್ಟಕರವೆನಿಸಿದ ಶಸ್ತ್ರಕ್ರಿಯೆಗಳನ್ನು ಇದು ನಡೆಸುತ್ತದೆ. ತಜ್ಞ ವೈದ್ಯರ ಮೇಲ್ವಿಚಾರಣೆಯೊಂದಿದ್ದರೆ ಇದು ಕರಾರುವಕ್ಕಾಗಿ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: X-Ray Setu: ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಬಂದಿದೆ ಎಕ್ಸ್ರೇ ಸೇತು: ಏನಿದರ ವಾಟ್ಸಾಪ್ ಸೇತುಬಂಧ?