ನೆಲಮಂಗಲ: ಇನ್ನೇನು ಕೆಲವೇ ದಿನಗಳಲ್ಲಿ ಬಕ್ರೀದ್ (Bakrid) ಹಬ್ಬ ಸಮೀಪಿಸುತ್ತಿದೆ. ಈದ್-ಉಲ್-ಅಧಾ ಹಬ್ಬ ಹಿನ್ನೆಲೆ ನೆಲಮಂಗಲ ತಾಲ್ಲೂಕಿನ ವಿವಿಧೆಡೆ ಕುರಿ (Sheep) ಮೇಕೆ ಕಳ್ಳತನ ಹೆಚ್ಚಾಗಿದೆ. ರಾತ್ರಿ 2 ಗಂಟೆ ಸಮಯದಲ್ಲಿ ಹೆಚ್ಚಾಗಿ ಕಳ್ಳತನ ನಡೆಯುತ್ತಿದೆ. ರೈತ ರಾಮಯ್ಯ ಎಂಬುವವರಿಗೆ ಸೇರಿದ ನಾಲ್ಕು ಮೇಕೆಗಳನ್ನ ಖದೀಮರು ಕಳ್ಳತನ ಮಾಡಿದ್ದಾರೆ. ಕಳೆದ 15 ದಿನದ ಹಿಂದಷ್ಟೇ ಒಂದು ಮೇಕೆ ಕದ್ದೊಯ್ದಿದ್ದರು. ಒಂದೊಂದು ಮೇಕೆಗಳು 25 ರಿಂದ 30 ಸಾವಿರ ರೂ. ಬೆಲೆ ಬಾಳುತ್ತವೆ.
ನೆಲಮಂಗಲ ತಾಲೂಕು ಸೇರಿದಂತೆ ಮಾದನಾಯಕನಹಳ್ಳಿ ಠಾಣ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ನೂರಕ್ಕೂ ಹೆಚ್ಚು ಕುರಿ ಮೇಕೆ ಕಳ್ಳತನ ಆಗಿದೆ. ಕುರಿ ಕಳ್ಳತನದಿಂದ ವ್ಯಾಪಾರ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವು
ಶಿವಮೊಗ್ಗ: ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕೆಲ ಗ್ಯಾಂಗ್ಗಳು ಯಮಾರಿಸಿ ಚಿನ್ನಾಭರಣವನ್ನ ರಾಬರಿ ಮಾಡುತ್ತಿರುವ ಘಟನೆ ನಗರದಲ್ಲಿ ಕಂಡುಬಂದಿದೆ. ಕಳೆದ ವಾರವಷ್ಟೇ ಗೋಪಿ ವೃತ್ತದದ ಹೆಡ್ ಪೋಸ್ಟ್ ಆಫೀಸ್ ಬಳಿ ಭದ್ರಾವತಿಯಿಂದ ಬಂದಿದ್ದ ಮಹಿಳೆಯ ಮೈಮೇಲೆಯಿದ್ದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿತ್ತು.
ತಾವು ಚಕ್ಕಿಂಗ್ ಆಫೀಸರ್ ಎಂದು ಪರಿಚಯ ಮಾಡಿಕೊಂಡು ಕಾಳಜಿ ತೋರಿಸಿದ್ದಾರೆ. ಪೇಪರ್ನಲ್ಲಿ ಚಿನ್ನಾಭರಣವನ್ನ ಇಟ್ಟುಕೊಂಡು ಹೋಗಿ ಎಂದು ಕುತ್ತಿಗೆಯಲ್ಲಿದ್ದ ಬಂಗಾರದ 50 ಗ್ರಾಂದ ಮಾಂಗಲ್ಯವನ್ನು ತೆಗೆಯಿಸಿದ್ದಾರೆ. ಬಳಿಕ ಅದನ್ನು ಪೇಪರ್ನಲ್ಲಿ ಹಾಕಿಕೊಟ್ಟಂತೆ ನಟಿಸಿ, ಇಬ್ಬರು ಕಳ್ಳರು ಚಿನ್ನಾಭರಣವನ್ನು ಎಗರಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರಿಂದ ಸುಲಿಗೆ ಆರೋಪ: ಕಾಂಗ್ರೆಸ್ ಮುಖಂಡ ಸೇರಿದಂತೆ 4 ಜನ ಅರೆಸ್ಟ್
ಮಡಿಕೇರಿ: ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದ ಬಳಿ ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಗಾಧರ್(35) ಮೃತ ವ್ಯಕ್ತಿ. ಹಾಸನ ಜಿಲ್ಲೆ ಅರಸೀಕೆರೆ ನಿವಾಸಿ ಗಂಗಾಧರ್; ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.