AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು

ಇದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ. ಕೆಂಪೇಗೌಡ ಏರ್​ಪೋರ್ಟ್​ ಮಾರ್ಗಕ್ಕೆ ಮೊದಲ ಬ್ಲೂ ಲೈನ್ ಮೆಟ್ರೋ ರೈಲು ಆಗಮಿಸಿದೆ. ಈ ಟ್ರೈನ್ ಸೆಟ್ ಬೆಂಗಳೂರಿನ ಬೈಯಪ್ಪನಹಳ್ಳಿ ಡಿಪೋ ತಲುಪಿದೆ. ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರು ಏರ್​ಪೋರ್ಟ್​ವರೆಗಿನ 58.19 ಕಿ.ಮೀ ಉದ್ದದ ಮಾರ್ಗ ಇದಾಗಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು
ಬ್ಲೂ ಲೈನ್ ಮೆಟ್ರೋ Image Credit source: tv9 kannada
ಕಿರಣ್​ ಸೂರ್ಯ
| Edited By: |

Updated on:Jun 04, 2026 | 3:59 PM

Share

ಬೆಂಗಳೂರು, ಜೂನ್​ 04: ಬ್ಲೂ ಲೈನ್ (Blue Line Metro) ಬೆಂಗಳೂರಿಗರ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗ. ಈ ವರ್ಷ ಡಿಸೆಂಬರ್​ನಲ್ಲಿ ಓಪನ್ ಮಾಡಲು ಬಿಎಂಆರ್​ಸಿಎಲ್​ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬೆನ್ನಲ್ಲೇ ಕೆಂಪೇಗೌಡ ಏರ್​ಪೋರ್ಟ್ (Kempegowda International Airport)​​ ಮಾರ್ಗಕ್ಕೆ ಮೊದಲ ರೈಲು ಬಂದಿದೆ. ಇಂದು ಬೆಳಿಗ್ಗೆ ಬೈಯಪ್ಪನಹಳ್ಳಿ ಡಿಪೋಗೆ ಟ್ರೈನ್ ಸೆಟ್​ ತಲುಪಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್ ನೀಡಿದೆ.

ಮುಖ್ಯಾಂಶಗಳು

  • ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್​
  • ಬ್ಲೂ ಲೈನ್ ಮೆಟ್ರೋ ಮಾರ್ಗದ​​ ಮೊದಲ ರೈಲು ನಗರಕ್ಕೆ ಎಂಟ್ರಿ
  • ಇಂದು ಬೆಳಿಗ್ಗೆ ಬೈಯಪ್ಪನಹಳ್ಳಿ ಡಿಪೋ ತಲುಪಿದ ಟ್ರೈನ್ ಸೆಟ್

ಬ್ಲೂ ಲೈನ್ ಮೆಟ್ರೋ ಮಾರ್ಗವು ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ​ವರೆಗೆ ಸಂಪರ್ಕ ಕಲ್ಪಿಸಲಿದ್ದು, ಇದು ನಗರದ ಜನರಿಗೆ ಮತ್ತು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 58.19 ಕಿಮೀ ವಿಸ್ತೀರ್ಣದ ಬ್ಲೂ ಲೈನ್ ಮೆಟ್ರೋ ಮಾರ್ಗಕ್ಕೆ ಬೆಂಗಳೂರಿನ ಬೆಮಲ್‌ನಲ್ಲಿ ರೈಲುಗಳನ್ನು ಆರ್ಡರ್ ಮಾಡಲಾಗಿದೆ. ಈ ಮಾರ್ಗಕ್ಕಾಗಿ 38 ಡ್ರೈವರ್ ಲೆಸ್​ ರೈಲುಗಳಿಗಾಗಿ ಆರ್ಡರ್ ನೀಡಲಾಗಿದೆ. ಬ್ಲೂ ಲೈನ್​​ಗೆ ಇನ್ನು ಎರಡು ಮೆಟ್ರೋ ರೈಲು ಬರಬೇಕಿದೆ. ಈ ವರ್ಷ ಡಿಸೆಂಬರ್‌ನಲ್ಲಿ 19.75 ಕಿಮೀ ಉದ್ದದ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದವರೆಗಿನ ಮೊದಲ ಹಂತವನ್ನು ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್, ಬುಧವಾರದಿಂದ 2 ಹೆಚ್ಚುವರಿ ರೈಲು ಸೇರ್ಪಡೆ

ಸಿಲ್ಕ್ ಬೋರ್ಡ್ ಟು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೋ 58.19 ಕಿಮೀ ವಿಸ್ತೀರ್ಣವಿದ್ದು, ಈ ಮಾರ್ಗದಲ್ಲಿ 30 ಮೆಟ್ರೋ ಸ್ಟೇಷನ್​​ಗಳಿರಲಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರ 19.75 ಕಿಮೀ ಮಾರ್ಗದಲ್ಲಿ 13 ಸ್ಟೇಷನ್​​ಗಳಿರಲಿದ್ದು, ಕೆ.ಆರ್ ಪುರ ಟು ಏರ್​ಪೋರ್ಟ್​​ವರೆಗೆ 38.44 ಕಿಮೀ ಮಾರ್ಗದಲ್ಲಿ 17 ಮೆಟ್ರೋ ಸ್ಟೇಷನ್​ ಗಳಿರಲಿವೆ. ನೀಲಿ ಮಾರ್ಗವನ್ನು ಬರೋಬ್ಬರಿ 14,788 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:58 pm, Thu, 4 June 26

Follow Us
ಬೆಳಗ್ಗೆ 6 ಗಂಟೆಯಿಂದಲೇ ‘ಟಾಕ್ಸಿಕ್’ ಪ್ರದರ್ಶನ ಆರಂಭ; ಜೋರಾಗಿದೆ ಕ್ರೇಜ್
ಬೆಳಗ್ಗೆ 6 ಗಂಟೆಯಿಂದಲೇ ‘ಟಾಕ್ಸಿಕ್’ ಪ್ರದರ್ಶನ ಆರಂಭ; ಜೋರಾಗಿದೆ ಕ್ರೇಜ್
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಚೀನಾ ಸಚಿವರ ಜೊತೆ ಅಜಿತ್ ದೋವಲ್ ಮಾತುಕತೆ
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಚೀನಾ ಸಚಿವರ ಜೊತೆ ಅಜಿತ್ ದೋವಲ್ ಮಾತುಕತೆ
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್