ಸಿಲಿಕಾನ್ ಸಿಟಿ ಮಂದಿಗೆ ತಪ್ಪುತ್ತಿಲ್ಲ ಚಿರತೆ ಕಾಟ; ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷ, ಆತಂಕದಲ್ಲಿ ಜನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 01, 2024 | 10:22 PM

ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದ ಮಂದಿಗೆ ಚಿರತೆ ಕಾಟದಿಂದ ಕೊನೆ ಕಾಣುವ ಲಕ್ಷಣವೇ ಇಲ್ಲ ಅನ್ನಿಸುತ್ತಿದೆ. ಒಂದಿಲ್ಲೊಂದು ಕಡೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರ ನಿದ್ದೆಗೆಡಿಸಿದೆ. ಜನವಸತಿ ಪ್ರದೇಶಗಳಲ್ಲಿ ಚಿರತೆ ಓಡಾಟದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಲೆಪರ್ಡ್ ಟಾಸ್ಕ್ ಶುರುವಾಗಿದೆ.

ಸಿಲಿಕಾನ್ ಸಿಟಿ ಮಂದಿಗೆ ತಪ್ಪುತ್ತಿಲ್ಲ ಚಿರತೆ ಕಾಟ; ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷ, ಆತಂಕದಲ್ಲಿ ಜನ
ಸಿಲಿಕಾನ್ ಸಿಟಿ ಮಂದಿಗೆ ತಪ್ಪುತ್ತಿಲ್ಲ ಚಿರತೆ ಕಾಟ
Follow us on

ಬೆಂಗಳೂರು ಗ್ರಾಮಾಂತರ, ಏ.01: ಚಿರತೆ ಕಾಟ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಚಿರತೆ(Leopard)ಯ ಚಿಂತೆ ಜನರನ್ನ ಕಾಡ ತೊಡಗಿದೆ. ಆನೇಕಲ್- ಚಂದಾಪುರ ಮುಖರಸ್ತೆಯಲ್ಲಿನ ಎಸ್ಆರ್​ಆರ್ ಲೇಔಟ್​ನಲ್ಲಿ ಕಳೆದ ರಾತ್ರಿ ಚಿರತೆ ಕಾಣಿಸಿಕೊಂಡಿದೆ. ಲೇಔಟ್​ನ ನಿವಾಸಿಗಳಾದ ಪಾಂಡುರಂಗ ಹಾಗೂ ಅವರ ಮಗ ಶಮಂತ್ ಬೈಕ್​ನಲ್ಲಿ ತೆರಳುತ್ತಿದ್ದಾಗ ಚಿರತೆ ರಸ್ತೆ ದಾಟಿ ಹೋಗುತ್ತಿರುವುದನ್ನ ಕಂಡಿದ್ದಾರೆ. ಕೂಡಲೇ ಲೇಔಟ್​ನ ಸೆಕ್ಯೂರಿಟಿ ಹಾಗೂ ನಿವಾಸಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಚಿರತೆ ಓಡಾಡಿದ ಕಡೆಗಳಲ್ಲಿ ಪರಿಶೀಲನೆ ನಡೆಸಿದಾಗ ಲೇಔಟ್ ಸುತ್ತಮುತ್ತಲಿನ ಕಡೆ ಚಿರತೆ ಓಡಾಟದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಜನರಲ್ಲಿ ಚಿರತೆ ಟೆನ್ಶನ್ ಶುರುವಾಗಿದೆ.

ಇನ್ನು ಜನರಲ್ಲಿ ಚಿರತೆಯ ಆತಂಕ ಹೆಚ್ಚಿದ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ ಶುರುವಾಗಿದೆ. ಚಿರತೆ ಹೆಜ್ಜೆ ಗುರುತು ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿರತೆ ಯಾವ ಕಡೆಗೆ ತೆರಳಿದೆ ಎನ್ನುವ ಬಗ್ಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿ ಕೂಡ ಚೆಕ್ ಮಾಡಲಾಗುತ್ತಿದೆ. ಜನಸಾಮಾನ್ಯರಿಗೆ ಚಿರತೆಯಿಂದ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಇಂದು ರಾತ್ರಿಯೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಲೇಔಟ್​​ನಲ್ಲಿ ವಾಚ್ ಮಾಡಲಾಗುತ್ತದೆ.‌ ಒಂದು ವೇಳೆ ಚಿರತೆಯ ಹೆಜ್ಜೆ ಗುರುತು ಪತ್ತೆಯಾದ್ರೆ, ಬೋನ್ ಇಟ್ಟು ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿದ್ದತೆ ನಡೆಸುತ್ತಿದೆ.

ಇದನ್ನೂ ಓದಿ:ಪಾತ್ರೆಯೊಳಗೆ ತಲೆ ಸಿಲುಕಿ 5 ಗಂಟೆಗಳ ಕಾಲ ಚಿರತೆಯ ಪರದಾಟ; ಅರಣ್ಯಾಧಿಕಾರಿಗಳಿಂದ ರಕ್ಷಣೆ

ಒಟ್ಟಿನಲ್ಲಿ ಕಳೆದ ವರ್ಷವೂ ನಗರದ ಹೊರವಲಯದಲ್ಲಿ ಚಿರತೆಯ ಚಿಂತೆ ಜೋರಾಗಿ ಜನ ಸಾಮಾನ್ಯರಿಗೆ ಕಾಡಿತ್ತು. ಈ ವರ್ಷವೂ ಈಗ ಚಿರತೆಯ ಟೆನ್ಶನ್ ಶುರುವಾಗಿದ್ದು, ಅರಣ್ಯ ಇಲಾಖೆ ಆದಷ್ಟು ಬೇಗ ಚಿರತೆ ಕಾಟಕ್ಕೆ ಮುಕ್ತಿ ಕಲ್ಪಿಸಿಕೊಡುತ್ತಾರ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ