ಬೆಂಗಳೂರು ಗ್ರಾಮಾಂತರ, ಅ.24: ಹಾಸನ-ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ರಾಫಿಕ್ (Traffic) ಜಾಮ್ ಉಂಟಾದ ಘಟನ ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ನೆಲಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ. ದಸರಾ ರಜೆಗೆ ತಮ್ಮೂರಿಗೆ ತೆರಳಿದ್ದ ನಗರ ವಾಸಿಗಳು, ಹಿಂದಿರುಗುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಬಳಿಕ ಸಂಚಾರ ದಟ್ಟಣೆ ನಿಯಂತ್ರಿಸಲು ನೆಲಮಂಗಲ ಪೊಲೀಸರು ಹರಸಾಹಸ ಪಡುವಂತಾಗಿದೆ. ಇನ್ನು ಇಂತಹ ಘಟನೆಗಳು ನಡೆಯುತ್ತಿದ್ದರೂ ಈವರೆಗೂ ಯಾವುದೇ ಮುಂಜಾಗೃತ ಕ್ರಮ ಕೈಗೊಂಡಿಲ್ಲ.
ಇನ್ನು ನೆಲಮಂಗಲದ ಜಾಸ್ಟೋಲ್ನಲ್ಲಿ ಲೈಟ್ ಇಲ್ಲದೆ ಕತ್ತಲು ಆವರಿಸಿದ್ದು, ಲೈಟ್ ಆನ್ ಮಾಡದೆ ಟೋಲ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ವಿದ್ಯುತ್ ಬಿಲ್ ಉಳಿಸಲು ಜಾಸ್ಟೋಲ್ ಸಂಸ್ಥೆಯಿಂದ ಕಳ್ಳಾಟ ಮಾಡುತ್ತಿದ್ದು, ಪೊಲೀಸರ ಜಾಣಮೌನಕ್ಕೆ ಜಾರಿದ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ಜಾಸ್ಟೋಲ್ನಲ್ಲಿ ನಡೆದಿದೆ. ಹೌದು, ಜಾಸ್ಟೋಲ್ನಲ್ಲಿ ಕತ್ತಲೆಯಲ್ಲೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇದರಿಂದ ವಾಹನ ಸವಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಈ ಹಿಂದೆ ರಸ್ತೆ ಸುರಕ್ಷತೆ ವಿಭಾಗದ ಹಿಂದಿನ ಎಡಿಜಿಪಿ ಅಲೋಕ್ ಎಚ್ಚರಿಕೆ ನೀಡಿದ್ದರು. ಆದರೂ ಟೋಲ್ ಸಿಬ್ಬಂದಿಗಳು ಮಾತ್ರ ಬುದ್ಧಿ ಕಲಿತ್ತಿಲ್ಲ.
ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಅನೇಕ ಮಂದಿ ಮೆಟ್ರೋ ಮೊರೆ ಹೋಗುತ್ತಿದ್ದು, ಮತ್ತೊಂದೆಡೆ ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐಟಿ ಬಿಟಿ ಕಂಪನಿಗಳು ಕೂಡ ಮುಂದಾಗಿತ್ತು. ಬೆಂಗಳೂರಿನ ಹೊರ ವರ್ತುಲ ರಸ್ತೆ ಉದ್ದಕ್ಕೂ ಇರುವ ಹಲವಾರು ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವಂತೆ ಉತ್ತೇಜಿಸಲು ದಿಟ್ಟ ಹೆಜ್ಜೆ ಇಟ್ಟಿದೆ. ಈ ಪ್ರಯತ್ನದಲ್ಲಿ ನಾಗರಿಕ ಕಾರ್ಯಕರ್ತರು ಮತ್ತು ಇತರ ಮಧ್ಯಸ್ಥಗಾರರ ಜೊತೆ ಕೈ ಜೋಡಿಸಿವೆ.
ಇನ್ನು ಈ ಕಂಪನಿಗಳು ತಮ್ಮ ಸಿಬ್ಬಂದಿಗಾಗಿ ಬೃಹತ್ ಪ್ರಮಾಣದಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ಖರೀದಿಸುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನೊಂದಿಗೆ ಸಕ್ರಿಯವಾಗಿ ಚರ್ಚೆಗಳನ್ನು ನಡೆಸುತ್ತಿದೆ. ಸ್ಮಾರ್ಟ್ ಕಾರ್ಡ್‌ಗಳ ಬೃಹತ್ ಖರೀದಿಗೆ ಸಂಬಂಧಿಸಿದಂತೆ ORR ಮತ್ತು ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಗಳ ಜೊತೆ ಚರ್ಚೆ ನಡೆಯುತ್ತಿದೆ ಎಂದು ಬಿಎಂಆರ್ಸಿಎಲ್ ದೃಢಪಡಿಸಿದೆ. ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿರುವ ಪ್ರಕಾರ, ವೈಟ್‌ಫೀಲ್ಡ್ ಮೂಲದ ಕಂಪನಿಯು ತನ್ನ ಉದ್ಯೋಗಿಗಳಿಗಾಗಿ ಈಗಾಗಲೇ 500 ಸ್ಮಾರ್ಟ್ ಕಾರ್ಡ್‌ಗಳನ್ನು ಖರೀದಿಸಿದೆ ಎನ್ನಲಾಗುತ್ತಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:14 pm, Tue, 24 October 23