ಬೆಂಗಳೂರು ಗ್ರಾಮಾಂತರ, ಮಾ.03: ಕಳೆದ ಮೂರು ದಿನದಿಂದ ಒಳರೋಗಿಗಳಿಗೆ ಊಟ ಕೊಡದೆ ಟೆಂಡರ್ ಅವಧಿ ಮುಗಿದಿದೆ ಎಂದು ನೆಪ ಹೇಳಿಕೊಂಡು ರೋಗಿಗಳಿಗೆ ಊಟ ಕೂಡದೆ ಆಸ್ಪತ್ರೆಯ ಆಡಳಿತ ಮಂಡಳಿ, ಉದ್ದಡತನ ಮೆರೆದಿದ್ದರು. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಆಸ್ಪತ್ರೆ(Nelamangala Taluk Hospital)ಯ ರೋಗಿಗಳು, ಊಟವಿಲ್ಲದೆ ಅಸಹಾಯಕರಾಗಿದ್ದರು. ಯಾವಾಗ ಈ ಕುರಿತು ಟಿವಿ9 ವರದಿ ಬಿತ್ತರಿಸಿತೋ, ತಕ್ಷಣ ಆಸ್ಪತ್ರೆಯ ಚಿತ್ರಣವೇ ಬದಲಾಗಿದೆ. ಈಗ ರೋಗಿಗಳಿಗೆ ಮೊಟ್ಟೆ,ಬಾಳೆಹಣ್ಣು,ಅನ್ನ-ಸಾಂಬಾರ್ ನೀಡಿ ರೋಗಿಗಳ ಹಸಿವನ್ನ ನೀಗಿಸಿದ್ದಾರೆ.
ಟಿವಿ9 ನಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಒಂದೇ ದಿನದಲ್ಲಿ ಆಸ್ಪತ್ರೆ ಚಿತ್ರಣವೇ ಬದಲಾಗಿ ಹೋಗಿದೆ. ಇನ್ನು ಆಸ್ಪತ್ರೆಗೆ ಅಂಟಿದ್ದ ಜಿಡ್ಡನ್ನ ತೊಳೆದು ಹಾಕೋಕೆ ಡಿಎಚ್ಒ ಸುನಿಲ್ ಕುಮಾರ್, ಟಿಎಚ್ಒ ಆಗಿರುವ ಹೇಮಾವತಿ ಅವರು ಬಂದಿದ್ದರು. ಸೋಮಾರಿಯಾಗಿದ್ದ ಎಎಂಓ ಸೋನಿಯಾ ಎಂಬುವವರಿಗೆ ಬಿಸಿ ಮುಟ್ಟಿಸಿ, ಸರಿಯಾಗಿ ಕೆಲಸ ಮಾಡುವಂತೆ ಆದೇಶ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಊಟದಲ್ಲಿ ಏನೇ ಸಮಸ್ಯೆ ಆದರೂ ಕ್ಯಾಂಟೀನ್ ನಿರ್ವಾಹಕ ಹಾಗೂ ಆಸ್ಪತ್ರೆ ಆಡಳಿತದ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಮತ್ತು ರೋಗಿಗಳಿಗೆ ಚಿಕಿತ್ಸೆಗೂ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಿದ್ದಾರೆ.
ಇದನ್ನೂ ಓದಿ:ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಶ್ವಾಸಕೋಶದಲ್ಲಿ ಜಿರಳೆ ಪತ್ತೆ
ಇನ್ನು ಆಸ್ಪತ್ರೆ ವಾತಾವರಣ ದಿಢೀರ್ ಎಂದು ಚೇಂಜ್ ಆಗಿದ್ದಕ್ಕೆ ಮಾತನಾಡಿದ ರೋಗಿಗಳು, ‘ಸಂತಸ ವ್ಯಕ್ತಪಡಿಸಿದ್ದು, ಟಿವಿ9 ಕಾರ್ಯವನ್ನ ಸ್ಲಾಗಿಸಿದ್ದಾರೆ. ಸುದ್ದಿ ಪ್ರಸಾರಗೊಂಡ ಕಾರಣ ಆಸ್ಪತ್ರೆಯ ಊಟದ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಮತ್ತೆ ಏನಾದರೂ ಊಟದ ಸಮಸ್ಯೆ ಜೊತೆ ಇನ್ನೇನಾದರೂ ಸಮಸ್ಯೆ ಬಂದರೆ, ಟಿವಿ9 ಗೆ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಏನೇ ಹೇಳಿ ಒಂದೇ ದಿನದಲ್ಲಿ ಆಸ್ಪತ್ರೆ ವಾತಾವರಣವೇ ಬದಲಾಗಿ ಹೋಗಿದ್ದು, ಆಸ್ಪತ್ರೆ ಸಿಬ್ಬಂದಿ ಇನ್ನು ಮುಂದೆ ಆದರೂ ನಿರ್ಲಕ್ಷ್ಯ ವಹಿಸದೆ ರೋಗಿಗಳ ಹಿತ ಕಾಪಾಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ