ದೇವನಹಳ್ಳಿ, ಮೇ.23: ಕರೆಂಟ್ ಹೋಗಿ ಕತ್ತಲಾದ್ರೆ ಸಾಕು ಈ ಆಸ್ವತ್ರೆಯಲ್ಲಿ ರೋಗಿಗಳು ಜನರೇಟರ್ ವಿದ್ಯುತ್ ಇಲ್ಲದೆ ಕಗ್ಗತ್ತಲಲ್ಲಿ ಕಾಲ ಕಳೆಯಲು ಎದುರುತ್ತಿದ್ರು. ಹೀಗಾಗೆ ಟಿವಿನೈನ್ (Tv9 Impact) ನಿನ್ನೆ ರಾತ್ರಿ ಆಸ್ವತ್ರೆಯ ಕಗ್ಗತ್ತಲ ರಾತ್ರಿಯೆ ದೃಶ್ಯ ಸಮೇತ ವರದಿ ಮಾಡಿತ್ತು. ಸದ್ಯ ವರದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಬಡ ರೋಗಿಗಳಿಗೆ ನೀರು ಕರೆಂಟ್ ವ್ಯವಸ್ಥೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ನೂತನ ತಾಲೂಕು ಸಾರ್ವಜನಿಕ ಆಸ್ವತ್ರೆಯಲ್ಲಿ ಮೂರು ಮೂರು ಜನರೇಟರ್ಗಳಿದ್ದರೂ ರಿಪೇರಿಯಾಗಿದ ಕಾರಣ ರೋಗಿಗಳು ರಾತ್ರಿ ವೇಳೆ ಕರೆಂಟ್ ಹೋದ್ರೆ ಕಗ್ಗತ್ತಲಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗೆ ಸರ್ಕಾರಿ ಆಸ್ವತ್ರೆಯಲ್ಲಿ ಬಡ ರೋಗಿಗಳ ಸಂಕಷ್ಟದ ಬಗ್ಗೆ ಟಿವಿನೈನ್ ವಿಸ್ಕ್ರತ ವರದಿ ಪ್ರಸಾರ ಮಾಡಿತ್ತು. ಇನ್ನೂ ಟಿವಿನೈನ್ ವರದಿ ಪ್ರಸಾರ ಮಾಡ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಇದೀಗ ಆಸ್ವತ್ರೆಗೆ ವಿದ್ಯುತ್ ವ್ಯವಸ್ಥೆಯನ್ನ ಮಾಡಿಸಿದೆ. ಮಳೆ ಬರುವ ವೇಳೆ ಕರೆಂಟ್ ಹೋದ್ರೆ ರೋಗಿಗಳ ಚಿಕಿತ್ಸೆ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಂತ ನೂತನ ಮೊಬೈಲ್ ಜನರೇಟರ್ ಅನ್ನ ಆಸ್ವತ್ರೆಯಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೆ ನಿಯೋಜನೆ ಮಾಡಿದೆ.
ಇದನ್ನೂ ಓದಿ: ಏಳು ತಿಂಗಳ ಹಿಂದೆ ಇಬ್ಬರ ಮೇಲೆ ಕಾರು ಹತ್ತಿಸಿದ್ದ 15 ವರ್ಷದ ಬಾಲಕನಿಂದ ಮತ್ತೆ ಅಪಘಾತ
ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮೂರು ಜನರೇಟರ್ಗಳಲ್ಲಿ ಎರಡು ಜನರೇಟರ್ ರಿಪೇರಿ ಹಾಗೂ ಸಿಡಿಲು ಬಡಿದು ಬ್ಯಾಟರಿ ಹೊಡೆದು ಹೋಗಿದ್ದು ಹಾಳಾಗಿರುವ ಜನರೇಟರ್ಗಳನ್ನ ತೆಗೆದು ನೂತನ ಜನರೇಟರ್ ಹಾಕುವಂತೆ ಜಿಲ್ಲಾಡಳಿತ ಸೂಚಿಸಿದೆ. ಜೊತೆಗೆ ನೂತನ ಜನರೇಟರ್ ಅಳವಡಿಕೆಯಾಗುವವರೆಗೂ ಬಾಡಿಗೆಗೆ ಮೊಬೈಲ್ ಜನರೇಟರ್ ತಂದು ಆಸ್ವತ್ರೆ ಮುಂದೆ ನಿಲ್ಲಿಸಿದ್ದು ಜನರೇಟರ್ ಸರಿಹೋಗುವ ವರೆಗೂ ತೆಗೆಯದಂತೆ ಡಿಸಿ ಶಿವಶಂಕರ್ ಆಸ್ವತ್ರೆಯ ಮುಖ್ಯ ವೈದ್ಯಾಧೀಕಾರಿಗೆ ಸೂಚಿಸಿದ್ದಾರೆ. Tv9 ವರದಿ ಬೆನ್ನಲ್ಲೆ ಸರ್ಕಾರಿ ಆಸ್ವತ್ರೆ ವಿದ್ಯುತ್ ಸಮಸ್ಯೆ ಬಗೆಹರಿದಿದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದು Tv9ಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.
ಒಟ್ಟಾರೆ ಸರ್ಕಾರ ಬಡ ಜನರ ಆರೋಗ್ಯಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡಿ ಜನರೇಟರ್ಗಳನ್ನ ಹಾಕಿಸಿದ್ರು ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ನಿಜಕ್ಕೂ ವಿಪರ್ಯಾಸ, ಇನ್ನಾದ್ರು ಇಂತಹ ಸಮಸ್ಯೆಗಳು ಎದುರಾಗುವ ಮುನ್ನ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಜನರ ಕಷ್ಟಕ್ಕೆ ಸ್ವಂದಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ