ಅವು ಬರೋಬ್ಬರಿ 2-3 ದಶಕಗಳ ಕಾಲದ ಅಬಕಾರಿ ಇಲಾಖೆಯಿಂದ NDPS ನಡಿ ದಾಖಲಾದ ಮಾದಕ ವಸ್ತು ಪ್ರಕರಣಗಳು. ಆ ಪ್ರಕರಣಗಳಲ್ಲಿ ವಶ ಪಡಿಸಿಕೊಂಡಿದ್ದ ನೂರಾರು ಕೆಜಿ ತೂಕದ, ಕೋಟ್ಯಾಂತರ ರೂಪಾಯಿ ಮೌಲ್ಯ ಬೆಲೆಯ ಮಾದಕ ವಸ್ತುಗಳನ್ನ ಕರ್ನಾಟಕ ತ್ಯಾಜ್ಯ ನಿರ್ವಹಣೆ ಯೋಜನೆ ಘಟಕದಲ್ಲಿ, ಕರ್ನಾಟಕ ಜಂಟಿ ಆಯುಕ್ತ ಬೆಂಗಳೂರು ಇವರ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ.
ಗಾಡಿಗಳಿಂದ ಮೂಟೆಗಳನ್ನ ಇಳಿಸುತ್ತಿರುವ ಪೊಲೀಸರು, ಅದೇ ಮೂಟೆಗಳ ಮುಂದೆ ಶಿಸ್ತಾಗಿ ನಿಂತು ಫೋಸ್ ಕೊಡುತ್ತಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು. ಕಳೆದ 20 ರಿಂದ 30 ವರ್ಷದ ಅಬಕಾರಿ ಇಲಾಖೆಯಿಂದ NDPS ಅಡಿ ದಾಖಲಾದ ಮಾದಕ ವಸ್ತು ಪ್ರಕರಣಗಳಲ್ಲಿ ವಶ ಪಡಿಸಿಕೊಂಡ ಕೋಟ್ಯಾಂತರ ರೂಪಾಯಿ ಮೌಲ್ಯದ ಗಾಂಜಾ, ಅಫೀಮು, ಚರಸ್, ಹಾಶಿಷ್.
ಬೆಂಗಳೂರು ಉತ್ತರ ವಿಭಾಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗೆ ಸಂಬಂಧಿಸಿದ ಕೇಸ್‌ಗಳಲ್ಲಿ ವಶಪಡಿಸಿಕೊಂಡಿದ್ದ ಈ ಮಾದಕ ವಸ್ತುಗಳನ್ನ ಬೆಂಗಳೂರು ಹೊರ ವಲಯದ ದಾಬಸ್‌ಪೇಟೆಯ ಕೈಗಾರಿಕೆ ಪ್ರದೇಶದಲ್ಲಿರುವ ಕರ್ನಾಟಕ ತ್ಯಾಜ್ಯ ನಿರ್ವಹಣೆ ಯೋಜನೆ ಘಟಕದಲ್ಲಿ, ಕರ್ನಾಟಕ ಜಂಟಿ ಆಯುಕ್ತ ಬೆಂಗಳೂರು ವಿಭಾಗದ ಎಫ್.ಹೆಚ್ ಚಲುವಾದಿ ನೇತೃತ್ವದಲ್ಲಿ ನಾಶಪಡಿಸಿದರು.
ಇನ್ನು ಬೆಂಗಳೂರು ಉತ್ತರ ವಿಭಾಗದಲ್ಲಿ 7 ಜಿಲ್ಲೆಗಳಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 35 ಪ್ರಕರಣಗಳಲ್ಲಿ 20 ಲಕ್ಷ ಮೌಲ್ಯದ 102 ಕೆಜಿ ಗಾಂಜಾ, 30 ಸಾವಿರ ಮೌಲ್ಯದ 135 ಕೆಜಿ ಓಪಿಮ್ ಪ್ಲ್ಯಾಂಟ್, 4 ಲಕ್ಷ ಮೌಲ್ಯ 42 ಕೆಜಿ ಗಾಂಜಾ ಗಿಡಗಳು. ತುಮಕೂರು ಜಿಲ್ಲೆಯ 86 ಪ್ರಕರಣಗಳಲ್ಲಿ 144 ಕೆಜಿ ಗಾಂಜಾ, 79 ಕೆಜಿ ಓಪಿಯಮ್, ಒಟ್ಟು 32 ಲಕ್ಷ ಮೌಲ್ಯದ 277 ಕೆಜಿ ಮಾದಕ ವಸ್ತು ನಾಶ ಪಡಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ 14 ಪ್ರಕರಣಗಳಲ್ಲಿ ಒಟ್ಟು 111 ಕೆಜಿಯಷ್ಟು ಗಾಂಜಾ ನಾಶ ಪಡಿಸಿದ್ದು, B.U.D 4ರಲ್ಲಿ 44 ಪ್ರಕರಣಗಳಲ್ಲಿ 278 ಕೆಜಿ ಗಾಂಜಾ, 8ಕೆಜಿ ಭಾಂಗ್, 430 ಕೆಜಿ ಹಾಶಿಷ್ ನಾಶ ಪಡಸಲಾಗಿದೆ. ಇನ್ನೂ B.U.D 2ರಲ್ಲಿ 34 ಪ್ರಕರಣಗಳಲ್ಲಿ 261 ಕೆಜಿ ಗಾಂಜಾ, 51ಕೆಜಿ ಅಫೀಮು ಹಾಗೂ 2 ಕೆಜಿಯಷ್ಟು ಹಾಶಿಷ್ ನಾಶಪಡಿಸಲಾಗಿದೆ.
ಬೆಂಗಳೂರು ಉತ್ತರ ವಿಭಾಗದ ಅಬಕಾರಿ ಇಲಾಖೆಯಿಂದ NDPS ಆ್ಯಕ್ಟ್ ಅಡಿ ಮೂರು ದಶಕಗಳ ಪ್ರಕರಣಗಳಲ್ಲಿ ತುಮಕೂರಿನದ್ದೆ ಮೇಲುಗೈಯಾಗಿದೆ. ಒಟ್ಟಾರೆ ನೂರಕ್ಕೂ ಪ್ರಕರಣಗಳಲ್ಲಿ ಸೀಜ್ ಮಾಡಲಾದ ಮಾದಕ ವಸ್ತುಗಳನ್ನ ಬಹಳ ವರ್ಷಗಳ ನಂತರ ನಿಯಮಾನುಸಾರ ವೈಜ್ಞಾನಿಕವಾಗಿ ಕರ್ನಾಟಕ ತ್ಯಾಜ್ಯ ನಿರ್ವಹಣೆ ಯೋಜನೆ ಘಟಕದಲ್ಲಿ ಅಬಕಾರಿ ಇಲಾಖೆಯವರು ನಾಶ ಪಡಿಸಿದ್ರು.
ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:04 pm, Wed, 15 February 23