ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ತಾಯಿ ಇಲ್ಲದ ತಬ್ಬಲಿಯಾದ ಇಬ್ಬರು ಮಕ್ಕಳು
ಎಂ.ಎ ಪದವೀಧರೆಯಾದ ಮೃತ ಮೀನಾ ನೆಲಮಂಗಲ ಸಿದ್ದಗಂಗಾ ಕಾಲೇಜ್ನಲ್ಲಿ ಎಂಎ ಕನ್ನಡ ಲಚ್ಚರ್ ಕೂಡ ಆಗಿದ್ರು. ಜೊತೆಗೆ ಕೆಎಎಸ್ ಸೇರಿದಂತೆ ಸರ್ಕಾರಿ ಉನ್ನತ ಹುದ್ದೆ ಆಕಾಂಕ್ಷಿಯಾಗಿದ್ದರು. ಆದರೆ ದುರದೃಷ್ಟವಶಾತ್ ಸತತ ಕೆಎಎಸ್ ಪರೀಕ್ಷೆ ಬರೆದು ಅನುತ್ತೀರ್ಣಗೊಂಡಿದ್ದರು. ಹೀಗಾಗಿ ಯಾವುದೇ ಕೆಲಸಕ್ಕೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆಲಮಂಗಲ: ಮಾನಸಿಕ ಖಿನ್ನತೆಯಿಂದ ಮಹಿಳೆ ನೇಣಿಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ. ಮೀನಾ(42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಎಂ.ಎ ಪದವೀಧರೆಯಾದ ಮೃತ ಮೀನಾ ನೆಲಮಂಗಲ ಸಿದ್ದಗಂಗಾ ಕಾಲೇಜ್ನಲ್ಲಿ ಎಂಎ ಕನ್ನಡ ಲಚ್ಚರ್ ಕೂಡ ಆಗಿದ್ರು. ಜೊತೆಗೆ ಕೆಎಎಸ್ ಸೇರಿದಂತೆ ಸರ್ಕಾರಿ ಉನ್ನತ ಹುದ್ದೆ ಆಕಾಂಕ್ಷಿಯಾಗಿದ್ದರು. ಆದರೆ ದುರದೃಷ್ಟವಶಾತ್ ಸತತ ಕೆಎಎಸ್ ಪರೀಕ್ಷೆ ಬರೆದು ಅನುತ್ತೀರ್ಣಗೊಂಡಿದ್ದರು. ಹೀಗಾಗಿ ಯಾವುದೇ ಕೆಲಸಕ್ಕೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಮೀನಾಳಿಗೆ ಎರಡು ಮಕ್ಕಳಿದ್ದು ದಾಂಪತ್ಯ ಜೀವನ ಚನ್ನಾಗಿತ್ತು. ಕೆಲ ಸ್ಥಳೀಯರ ಮಾಹಿತಿ ಪ್ರಕಾರ ಸಾಕಷ್ಟು ಜನರಿಗೆ ಹಣ ಸಹಾಯ ಮಾಡಿದ್ದು ಆ ಹಣವು ವಾಪಸ್ ಬಂದಿರಲಿಲ್ಲ. ಕೇಳಿದ್ರೆ ಲಾಕ್ಡೌನ್, ಕೊವಿಡ್ ಎಂಬ ನೆಪ ಹೇಳುತ್ತಿದ್ದರು. ಇತ್ತೀಚೆಗೆ ಲಚ್ಚರ್ ಹುದ್ದೆ ತೊರೆದು ಮಕ್ಕಳನ್ನ ನೋಡಿಕೊಳ್ಳುತ್ತಿದ್ರು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿ: 17 ವರ್ಷದ ಹುಡುಗನ ಬಲಿಪಡೆದ ಪ್ರೀತಿ; ಗುಪ್ತಾಂಗ ಕತ್ತರಿಸಿ, ಥಳಿಸಿ ಹತ್ಯೆ ಮಾಡಿದ ಹುಡುಗಿಯ ಕುಟುಂಬದವರು