17 ವರ್ಷದ ಹುಡುಗನ ಬಲಿಪಡೆದ ಪ್ರೀತಿ; ಗುಪ್ತಾಂಗ ಕತ್ತರಿಸಿ, ಥಳಿಸಿ ಹತ್ಯೆ ಮಾಡಿದ ಹುಡುಗಿಯ ಕುಟುಂಬದವರು
ಮೃತ ಬಾಲಕನ ಹೆಸರು ಸೌರಭ್ ಕುಮಾರ್. ಈ ಗ್ರಾಮದ ಪಕ್ಕದಲ್ಲೇ ಇರುವ ಸೊರ್ಬಾರಾ ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಶುಕ್ರವಾರ ರಾತ್ರಿ ಸೌರಭ್ ತನ್ನ ಗರ್ಲ್ಫ್ರೆಂಡ್ ಮನೆಗೆ ಹೋಗಿದ್ದಾಗ ಇಬ್ಬರೂ ಒಟ್ಟಿಗೇ ಸಿಕ್ಕಿಬಿದ್ದಿದ್ದಾರೆ.
ಪ್ರೀತಿ-ಪ್ರೇಮ ಎಂಬುದು ಎಷ್ಟೋ ಜನರ ಬದುಕನ್ನು ಹಸನಾಗಿಟ್ಟಿದ್ದು ಎಷ್ಟು ಸತ್ಯವೋ..ಅನೇಕರ ಬದುಕನ್ನು ಕಿತ್ತುಕೊಂಡಿದ್ದೂ ಅಷ್ಟೇ ಸತ್ಯ. ಪ್ರೀತಿ ಮಾಡಿದ್ದಾನೆ/ಳೆ ಎಂಬ ಒಂದೇ ಕಾರಣಕ್ಕೆ ಕೊಲೆಯಾದವರೂ ಇದ್ದಾರೆ. ಹಾಗೇ, ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ 17ವರ್ಷದ ಬಾಲಕ ಇದೇ ಕಾರಣಕ್ಕೀಗ ಹತ್ಯೆಯಾಗಿದ್ದಾನೆ. ಹುಡುಗಿಯ ಕುಟುಂಬದ ಕಡೆಯವರು ತುಂಬ ಭೀಕರವಾಗಿ ಇವನನ್ನು ಕೊಂದಿದ್ದಾರೆ. ಹಾಗೇ ಇವನ ಗುಪ್ತಾಂಗವನ್ನೂ ಕತ್ತರಿಸಿ ಹಾಕಿದ್ದಾರೆ.
ರೇಪುರಾ ರಾಮಪುರಶಾಹ್ ಹಳ್ಳಿಯಲ್ಲಿ ದುರ್ಘಟನೆ ನಡೆದಿದೆ. ಮೃತ ಬಾಲಕನ ಹೆಸರು ಸೌರಭ್ ಕುಮಾರ್. ಈ ಗ್ರಾಮದ ಪಕ್ಕದಲ್ಲೇ ಇರುವ ಸೊರ್ಬಾರಾ ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಶುಕ್ರವಾರ ರಾತ್ರಿ ಸೌರಭ್ ತನ್ನ ಗರ್ಲ್ಫ್ರೆಂಡ್ ಮನೆಗೆ ಹೋಗಿದ್ದಾಗ ಇಬ್ಬರೂ ಒಟ್ಟಿಗೇ ಸಿಕ್ಕಿಬಿದ್ದಿದ್ದಾರೆ. ಅದನ್ನು ನೋಡಿ ತುಂಬ ಕೋಪಗೊಂಡ ಹುಡುಗಿಯ ಕುಟುಂಬದವರು, ಸಂಬಂಧಿಕರು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಗುಪ್ತಾಂಗವನ್ನೂ ಕತ್ತರಿಸಿದ್ದಾರೆ. ಅಷ್ಟರಲ್ಲಿ ಹುಡುಗನ ಕುಟುಂಬದವರಿಗೆ ವಿಷಯ ಗೊತ್ತಾಗಿ, ಅವರೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಒಂದು ಖಾಸಗಿ ಆಸ್ಪತ್ರೆಗೆ ಬಾಲಕನನ್ನು ದಾಖಲು ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ. ಅಂದೇ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಸೌರಭ್ ಕುಮಾರ್ ಕುಟುಂಬದವರು ಇದರಿಂದ ತೀವ್ರವಾಗಿ ಕೋಪಗೊಂಡಿದ್ದಲ್ಲದೆ, ಹುಡುಗಿಯ ಮನೆಯ ಎದುರೇ ಸೌರಭ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಪ್ರೀತಿ ವಿಚಾರಕ್ಕೇ ಬಾಲಕನನ್ನು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದರೂ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೋಸ್ಟರ್ನಲ್ಲಿ ದರ್ಶನ್ ಜೊತೆ ಸಪ್ಲೈಯರ್ ಹುಡುಗನ ಫೋಟೋ; ಅಚ್ಚರಿ ಮೂಡಿಸಿದ ‘ಝೂ’ ಚಿತ್ರ
Teen killed private part chopped by his girlfriend family in Bihar