ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಡತಗಳ ಕಳ್ಳತನ; ಅಧಿಕಾರಿಗಳು, ಸದಸ್ಯರ ವಿರುದ್ಧವೇ ಕೇಳಿಬಂತು ಆರೋಪ

| Updated By: Rakesh Nayak Manchi

Updated on: Nov 19, 2023 | 7:00 PM

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಬೀಗ ಮುರಿದು ನುಗ್ಗಿದ ಕಳ್ಳರು ಕಡತ, ಸಿಸಿಕ್ಯಾಮರಾ ಡಿವಿಆರ್ ಕಳವು ಮಾಡಿದ ಘಟನೆ ನಡೆದಿದೆ. ಗ್ರಾ.ಪಂ. ಅಧಿಕಾರಿಗಳು ಹಾಗೂ ಸದಸ್ಯರ ಅಕ್ರಮ ಮುಚ್ಚಿಹಾಕಲು ಪಂಚಾಯಿತಿಯ ಅಧಿಕಾರಿಗಳು, ಸದಸ್ಯರೇ ಕಡತ ಕಳವು ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಡತಗಳ ಕಳ್ಳತನ; ಅಧಿಕಾರಿಗಳು, ಸದಸ್ಯರ ವಿರುದ್ಧವೇ ಕೇಳಿಬಂತು ಆರೋಪ
ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಬೀಗ ಮುರಿದು ಕಳ್ಳತನ
Follow us on

ನೆಲಮಂಗಲ, ನ.19: ಗ್ರಾಮ ಪಂಚಾಯಿತಿ ಕಚೇರಿ ಬೀಗ ಮುರಿದು ನುಗ್ಗಿದ ಕಳ್ಳರು ಕಡತ, ಸಿಸಿಕ್ಯಾಮರಾ ಡಿವಿಆರ್ ಕಳವು ಮಾಡಿದ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯಲ್ಲಿ ನಡೆದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಬೆರಳಚ್ಚು ತಜ್ಞರ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಆದರೆ, ಅಕ್ರಮಗಳನ್ನು ಮುಚ್ಚಿಹಾಕಲು ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರೇ ಈ ಕಳ್ಳತನ ಮಾಡಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಪಂಚಾಯಿತಿಯ ಅಧಿಕಾರಿಗಳು, ಸದಸ್ಯರೇ ಅಕ್ರಮಗಳನ್ನ ಮುಚ್ಚಿ ಹಾಕಲು ಕಳ್ಳತನ ಮಾಡಿಸಿರುವ ಶಂಕೆ ಇದ್ದು, ಸೂಕ್ತ ತನಿಖೆ ಮಾಡಿ ಕಳ್ಳರನ್ನು ಬಂಧಿಸುವಂತೆ ಸಾರ್ವಜನಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಅನುಮಾನಾಸ್ಪದವಾಗಿ 7 ವರ್ಷದ ಬಾಲಕಿ ಸಾವು

ಏಳು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ನಡೆದಿದೆ. ಮಗಳು ಹಠ ಮಾಡುತ್ತಾಳೆ ಬುದ್ಧಿಹೇಳಿ ಅಂತಾ ಕಳುಹಿಸಿದ್ದ ಪಕ್ಕದ ಮನೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ವಿನೋದ್, ನಳಿನಾ ದಂಪತಿ ಪುತ್ರಿ ಆಕೃತಿ (7) ಮೃತ ಬಾಲಕಿಯಾಗಿದ್ದಾಳೆ.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ 3.5 ಲಕ್ಷ ಮೌಲ್ಯದ ವಸ್ತುಗಳು ಕಳವು

ಹಠ ಮಾಡುತ್ತಿದ್ದ ಬಾಲಕಿಯನ್ನು ಬುದ್ಧಿ ಕಳಿಸಲು ನಂಜುಂಡಪ್ಪ, ಪಲ್ಲವಿ ದಂಪತಿ ಮನೆಗೆ ಪೋಷಕರು ಕಳುಹಿಸಿದ್ದರು. ಆದರೆ ಇಲ್ಲಿ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಮೃತಳ ಕೈ, ಕಾಲಿನ ಬಳಿ ರಕ್ತ ಹೆಪ್ಪುಗಟ್ಟಿದ ಗಾಯಗಳು ಪತ್ತೆಯಾಗಿವೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತಳ ಪೋಷಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ನಂಜುಂಡಪ್ಪ, ಪಲ್ಲವಿ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಎಫ್​ಎಸ್​​ಎಲ್​ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗಿದೆ. ಮಗುವಿಗೆ ಭಯ ಹುಟ್ಟಿಸಲು ಯಾವುದೋ ವಸ್ತುವಿನಿಂದ ಹೊಡೆಯುವಾಗ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಸದ್ಯ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ತಡರಾತ್ರಿ ಪಕ್ಕದ ಮನೆಯಲ್ಲಿ ನಡೆದಿದ್ದೇನು?

ರಾತ್ರಿ 2 ಗಂಟೆ ಸಮಯದಲ್ಲಿ ಆಕೃತಿ ವಾಂತಿ ಮಾಡಲು ಬಾತ್ ರೂಂಗೆ ತೆರಳಿದ್ದಾಗ ಜಾರಿ ಬಿದ್ದಳೆಂದು ಪೋಷಕರಿಗೆ ಗಮನಕ್ಕೆ ತಾರದೆ ಆಸ್ಪತ್ರೆಗೆ ಸೇರಿಸಿ ಬಾಲಕಿ ಸಾವಿಗೆ ಕಾರಣರಾದ ದಂಪತಿಗಳ ವಿರುದ್ಧ ಮೃತ ಬಾಲಕಿ ತಂದೆ ವಿನೋದ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sun, 19 November 23