ದೇವನಹಳ್ಳಿ: ಅವ್ಯವಸ್ಥೆಗಳ ಆಗರವಾದ ಸರ್ಕಾರಿ ಹಾಸ್ಟೇಲ್​ಗಳು; ಹಳೆ ಬೆಡ್, ಚಾಪೆ ಮೇಲೆಯೇ ಮಕ್ಕಳ ನಿದ್ದೆ

ಅದು ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಸರ್ಕಾರವೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ವಸತಿ ನಿಲಯಗಳು. ಪ್ರತಿವರ್ಷ ಇಲಾಖೆಗೆ ಎಂದು ಕೋಟಿ ಕೋಟಿ ಹಣ ಮೀಸಲಿಡುತ್ತಿದ್ದರು. ಆದ್ರೆ, ವರ್ಷಗಳಿಂದ ಸೌಲತ್ತುಗಳೇ ಆ ಹಾಸ್ಟೇಲ್​ಗಳಿಂದ ದೂರವಾಗಿದ್ದು, ಹಾಸ್ಟೇಲ್ ಅವ್ಯವಸ್ಥೆಯ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

 ದೇವನಹಳ್ಳಿ: ಅವ್ಯವಸ್ಥೆಗಳ ಆಗರವಾದ ಸರ್ಕಾರಿ ಹಾಸ್ಟೇಲ್​ಗಳು; ಹಳೆ ಬೆಡ್, ಚಾಪೆ ಮೇಲೆಯೇ ಮಕ್ಕಳ ನಿದ್ದೆ
ಸರ್ಕಾರಿ ಹಾಸ್ಟೇಲ್​ಗಳ ಅವ್ಯವಸ್ಥೆ
Follow us
| Edited By: Kiran Hanumant Madar

Updated on: Nov 18, 2023 | 7:24 PM

ಬೆಂಗಳೂರು ಗ್ರಾಮಾಂತರ, ನ.18: ಹೊರಗಿನಿಂದ ಕಟ್ಟಡ ಸುಸಜ್ಜಿತವಾಗಿದ್ದು, ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಇಷ್ಟೆಲ್ಲ ಚೆನ್ನಾಗಿರಬೇಕಾದರೆ, ಒಳಗಡೆಯೂ ಉತ್ತಮವಾಗೆ ಇರುತ್ತದೆ ಎಂದು ಎಲ್ಲರೂ ಅಂದುಕೊಳ್ಳುವುದು ಸಹಜ. ಆದ್ರೆ, ಮಕ್ಕಳು ಆಟ-ಪಾಠ ಮಾಡಿ ಮಲಗಬೇಕಾದರೆ, ಬೇಕಾದ ಸುಸಜ್ಜಿತ ಬೇಡ್(Bed)​ಗಳ ವ್ಯವಸ್ಥೆಯೇ ಇಲ್ಲವಾಗಿದೆ. ತಿಗಣೆ ಹಾಗೂ ದುರ್ವಾಸನೆ ಬೀರುವ ಇದೇ ಬೆಡ್​ಗಳಲ್ಲಿ ಅವಸ್ಥೆ ಪಡುತ್ತಿದ್ದಾರೆ. ದೇವನಹಳ್ಳಿ(Devanahalli) ತಾಲೂಕಿನ ವಿಜಯಪುರ ಸೇರಿದಂತೆ ಬಹುತೇಕ ಹಾಸ್ಟೇಲ್​ಗಳಲ್ಲಿ ಇದೇ ಪರಿಸ್ಥಿತಿ ಇದೆಯಾಗಿದೆ.

ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಬಿಸಿಎಂ ಹಾಸ್ಟೇಲ್​ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಹೊಸ ಬೆಡ್​ಗಳನ್ನು ನೀಡುತ್ತಿತ್ತು. ಆದ್ರೆ, ಕೊರೊನಾ ಕಾರಣದಿಂದಾಗಿ ಕಳೆದ ಐದು ವರ್ಷದಿಂದ ಬೆಡ್​ಗಳನ್ನು ನೀಡಿದ್ದು, ಬಿಟ್ಟರೆ ಈವರೆಗೂ ಹೊಸ ಹಾಸಿಗೆಗೆಳನ್ನು ನೀಡಿಲ್ಲ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಹಾಸ್ಟೇಲ್​ಗಳಿಗೆ ಬೆಡ್​ಗಳು ಬಾರದ ಹಿನ್ನೆಲೆಯಲ್ಲಿ ಬೆಡ್​ಗಳಿಲ್ಲದೆ ಚಾಪೆಗಳನ್ನು ಹಾಸಿಕೊಂಡು ವಿದ್ಯಾರ್ಥಿಗಳು ಮಲಗುವ ದುಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ಶಿವಮೊಗ್ಗ: ಬಿಸಿಎಂ ಹಾಸ್ಟೇಲ್​ಗಳ ರೇಷನ್​ ದುರ್ಬಳಕೆ, ಟ್ಯೂಷನ್​ನಲ್ಲಿ ಗೋಲ್​ಮಾಲ್; ಹೇಳೋರು ಇಲ್ಲ, ಕೇಳೋರು ಇಲ್ಲ

ಅಲ್ಲದೆ ಇರುವ ಹಳೆ ಹಾಸಿಗೆಗೆಳಿಂದ ದುರ್ವಾಸನೆ ಹಾಗೂ ತಿಗಣೆಗಳು ಬರುತ್ತಿದ್ದು, ಸರಿಯಾಗಿ ನಿದ್ದೆ ಮಾಡುವುದಕ್ಕೂ ಹಾಸ್ಟೇಲ್ ವಿದ್ಯಾರ್ಥಿಗಳಿಂದ ಆಗುತ್ತಿಲ್ಲ ಎಂದು ಪೋಷಕರು ಹಾಗೂ ಸಾರ್ವಜನಿಕರು ಅಸಮಧಾನ ಹೊರ ಹಾಕಿದ್ದಾರೆ. ಕಳೆದ ಕೋವಿಡ್ ಸಂಧರ್ಭದಲ್ಲಿ ಹಾಸ್ಟೆಲ್​ಗಳನ್ನು ಕ್ವಾರಂಟೈನ್ ಸೆಂಟರ್​ಗಳಾಗಿ ಮಾಡಿ ಮಕ್ಕಳ ಬೆಡ್​ಗಳನ್ನೆ ಬಳಸಿದ್ದು, ನಂತರ ಅದೇ ಬೆಡ್ಗ​ಳನ್ನು ಮಕ್ಕಳಿಗೆ ನೀಡಿದ್ದಾರಂತೆ. ಜೊತೆಗೆ ಹಲವು ಭಾರಿ ಬೆಡ್, ಲೈಬ್ರೇರಿ ಪಿರೋಪಕರಣ ಹಾಗೂ ಕ್ರೀಡಾ ಸಾಮಾಗ್ರಿಗಳನ್ನ ನೀಡಿ ಎಂದು ಕಳೆದ ಎರಡು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಸೌಕರ್ಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಈ ಕುರಿತು ಬೆಂಗಳೂರು ಗ್ರಾಮಾಂತರ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪ್ರೇಮ ಅವರನ್ನ ಕೇಳಿದ್ರೆ ‘ನಾವು ಈಗಾಗಲೇ ಇಲಾಖೆ ವತಿಯಿಂದ ಪತ್ರ ಬರೆದಿದ್ದು, ಟೆಂಡರ್ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಬೆಡ್​ಗಳನ್ನು ಬೇರೆಡೆ ಶಿಪ್ಟ್ ಮಾಡಿದ್ದ ಕಾರಣ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಎಲ್ಲೆಡೆ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆ ಹರಿಸುವ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆ ಪ್ರತಿವರ್ಷ ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಾಲೆಗಳಿಗೆ ಎಂದು ಕೋಟಿ ಕೋಟಿ ಹಣ ಬಜೆಟ್​ನಲ್ಲಿ ಮೀಸಲಿಡುತ್ತಿದ್ದರೂ ಸಮರ್ಪಕ ಮೂಲ ಸೌಕರ್ಯ ಬಡ ವಿದ್ಯಾರ್ಥಿಗಳಿಗೆ ಸಿಗದಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಎಚ್ಚೆತ್ತು ಹಾಸ್ಟೇಲ್​ಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ