ಜಮೀರ್ ವಿವಾದಾತ್ಮಕ ಹೇಳಿಕೆ: ಮತೀಯ ವಿಚಾರಗಳ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ ಆರ್ ಅಶೋಕ್
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮೇರು ವ್ಯಕ್ತಿತ್ವಕ್ಕೆ ಗೌರವ ಕೊಡುತ್ತೇವೆ. ಈ ರೀತಿ ಮತೀಯ ಟಿಪ್ಪು ವಿಚಾರದ ವಿರುದ್ಧ ಹೋರಾಡುತ್ತವೆ. ಹಾಗೆಯೇ ಸಾವರ್ಕರ್ ಅವರ ಫೋಟೋ ತೆಗೆಯುತ್ತೇವೆ ಅಂತಾರೆ, ಈಗ ನೆಹರು ಫೋಟೋ ಹಾಕುತ್ತೇವೆ ಅಂತಾರೆ. ಕಾಂಗ್ರೆಸ್ನವರದ್ದು ವಂಶ ಪಾರಂಪರ್ಯ ರಾಜಕಾರಣ ಎಂದು ವಿಪಕ್ಷ ನಾಯಕ ಆರ್ ಅಶೋಕ ವಾಗ್ದಾಳಿ ಮಾಡಿದರು.
ಬೆಂಗಳೂರು ನ.18: ನಮ್ಮ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ಯು.ಟಿ. ಖಾದರ್ (UT Khadar) ಅವರನ್ನು ಸ್ಪೀಕರ್ ಮಾಡುವ ಮೂಲಕ ಬಿಜೆಪಿಯ (BJP) ದೊಡ್ಡ ದೊಡ್ಡ ಶಾಸಕರೂ ಅವರಿಗೆ ನಮಸ್ಕರಿಸಿ ನಿಲ್ಲುವಂತೆ ಮಾಡಿದ್ದೇವೆ ಎಂಬ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed) ಹೇಳಿಕೆಗೆ ಸಂಬಂಧಿಸಿದಂತೆ ನಾವು ಸ್ಪೀಕರ್ ಸ್ಥಾನಕ್ಕೆ ಗೌರವವನ್ನು ಕೊಡುತ್ತೇವೆ. ಈ ರೀತಿಯ ಮತೀಯ ವಿಚಾರಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashoka) ತಿರುಗೇಟು ನೀಡಿದ್ದಾರೆ.
ನೆಲಮಂಗಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮೇರು ವ್ಯಕ್ತಿತ್ವಕ್ಕೆ ಗೌರವ ಕೊಡುತ್ತೇವೆ. ಈ ರೀತಿ ಮತೀಯ ಟಿಪ್ಪು ವಿಚಾರದ ವಿರುದ್ಧ ಹೋರಾಡುತ್ತವೆ. ಹಾಗೆಯೇ ಸಾವರ್ಕರ್ ಅವರ ಫೋಟೋ ತೆಗೆಯುತ್ತೇವೆ ಅಂತಾರೆ, ಈಗ ನೆಹರು ಫೋಟೋ ಹಾಕುತ್ತೇವೆ ಅಂತಾರೆ. ಕಾಂಗ್ರೆಸ್ನವರದ್ದು ವಂಶ ಪಾರಂಪರ್ಯ ರಾಜಕಾರಣ. ತಾತ, ಮಗ, ಮೊಮ್ಮಗ ಹೀಗೆ ನಾಲ್ಕು ತಲೆಮಾರುಗಳ ರಾಜಕಾರಣ. ವಂಶ ಪಾರಂಪರ್ಯ ಫೋಟೋಗಳು ಕರ್ನಾಟಕದಲ್ಲಿ ಇರಬೇಕು ಎಂಬ ನಿಲುವಿಗೆ ಬಂದಿದ್ದಾರೆ. ಸರ್ಕಾರ ಕೆಲಸ ಮಾಡದಿದ್ದರೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಸರಿದಾರಿಗೆ ಬಾರದೆ ಹೋದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ಸ್ವಪಕ್ಷದವರೇ ಅಸಮಾಧಾನ ಹೊರ ಹಾಕಿರುವ ವಿಚಾರವಾಗಿ ಮಾತನಾಡಿದ ಅವರು ಉತ್ತರ ಕರ್ನಾಟಕ ಮಧ್ಯ ಕರ್ನಾಟಕ, ಹಳೆ ಮೈಸೂರು, ಕರಾಚಳಿ ಕರ್ನಾಟಕ ಅಂತ ನಾಲ್ಕು ಭಾಗಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಇಬ್ಬರು ಮುಖ್ಯಮಂತ್ರಿ ಆಗಿದ್ದರು. ಈಗಾಗಲೇ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಕರಾವಳಿ ಕರ್ನಾಟಕ ಭಾಗದಿಂದ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದರು. ಮಧ್ಯ ಕರ್ನಾಟಕದಿಂದ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದರು ಎಂದು ತಿಳಿಸಿದರು.
ಬಿಜೆಪಿ ಇತಿಹಾಸದಲ್ಲಿ ಹಳೆ ಮೈಸೂರು ಭಾಗಕ್ಕೆ ಯಾವತ್ತೂ ಪ್ರಾತಿನಿಧ್ಯ ಸಿಕ್ಕಿಲ್ಲ, ಇದೇ ಮೊದಲು ಸಿಕ್ಕಿರುವುದು.ಉಳಿದಂತೆ ಮುಖ್ಯಮಂತ್ರಿಗಳು ಆಗಿರೋದು ಎಲ್ಲಾ ಉತ್ತರ ಕರ್ನಾಟಕ ಭಾಗದ ಅವರೇ ಹೆಚ್ಚು. ನಮ್ಮಲ್ಲಿ ಆ ಬೇಧ ಭಾವ ಇಲ್ಲ. ಎಲ್ಲರನ್ನೂ ಇವತ್ತಿನಿಂದಲೇ ಮಾತನಾಡಿಸಿ ಅಸಮಾಧಾನ ಸರಿಪಡಿಸುತ್ತೇವೆ. ಭಿನ್ನಾಭಿಪ್ರಾಯ ಇರುವವರ ಜೊತೆ ಮಾತನಾಡಿ ಸರಿಪಡಿಸುತ್ತೇವೆ ಎಂದರು.
ಇದನ್ನೂ ಓದಿ: ‘ಬಿಜೆಪಿ ಶಾಸಕರು ಕೂಡ ನಮಸ್ಕಾರ್ ಸಾಬ್ ಹೇಳಿಕೆ ವಿವಾದ; ಯುಟರ್ನ್ ಹೊಡೆದ ಸಚಿವ ಜಮೀರ್
ಯತೀಂದ್ರ ಸಿದ್ದರಾಮಯ್ಯ ಫೋನ್ ಕಾಲ್ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಕ ಡೌಟೇ ಇಲ್ಲ, ಇದು ಮೂರನೇ ಬಾರಿ ಆಗುತ್ತಿರುವುದು. ಅವರ ಪಕ್ಷದ ಸಚಿವರು, ಶಾಸಕರೇ ಆರೋಪ ಮಾಡಿದ್ದಾರೆ. ಅತಿ ಆಯ್ತು ಅಂತ ಹೇಳಿದ್ದಾರೆ. ಇವತ್ತು ವಿಡಿಯೋ ಬಂದಿರುವುದು ಜಗತ್ಪ್ರಸಿದ್ಧಿಯಾಗಿದೆ ಎಂದು ಹೇಳಿದರು.
40% ಕಮಿಷನ್ ಅಂತ ಸುಳ್ಳು ಆರೋಪ ಮಾಡಿದರು ದಾಖಲೆ ಕೊಡಲೇ ಇಲ್ಲ. ಈಗ ದಾಖಲೆ ಸಿಕ್ಕಾಗಿದೆ ಕಾಂಗ್ರೆಸ್ 60% ಅನ್ನೋದು. ಹಣವನ್ನು ಲೂಟಿ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಎಟಿಎಂ ಆಗಿದ್ದಾರೆ. ಇದಕ್ಕಿಂತ ದಾಖಲೆ ಬೇಕಾ? ಪೋಲಿಸ್ ಇಲಾಖೆ ಸೇರಿ ಎಲ್ಲ ಇಲಾಖೆಯಲ್ಲೂ ವರ್ಗಾವಣೆ ದಂಧೆ ನಡೆಯುತ್ತಿದೆ. ಇದರ ವಿಚಾರವಾಗಿ ಮುಂದಿನ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತೀರಿ ಆದರೆ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ನಮ್ಮ ಕಾಟ ತಳಲಾರದೆ 10 ಜನರನ್ನು ಸಸ್ಪೆಂಡ್ ಮಾಡಿದ್ದರು. ಆ ರೀತಿ ಹೋರಾಟ ಮಾಡಿದ್ವಿ. ಈಗ ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷ ಎರಡು ಆಯ್ಕೆಯಾಗಿದೆ ಈಗ ಮತ್ತಷ್ಟು ಸಮರ್ಥವಾಗಿ ಹೋರಾಟ ಮಾಡುತ್ತೇವೆ ಎಂದು ಸೂಚನೆ ನೀಡಿದರು.
ಸಿದ್ದರಾಮಯ್ಯ ಅವರಿಗೆ ನೈತಿಕ ಅಧಿಕಾರ ಇಲ್ಲ. ಎಲ್ಲಾ ಪಕ್ಷಗಳನ್ನು ನೋಡಿಕೊಂಡು ಬಂದವರು. ಅಧಿಕಾರಕ್ಕಾಗಿ ತರದೆಲೆಯಂತೆ ಎಲ್ಲಾ ಪಕ್ಷಗಳನ್ನು ಸುತ್ತಿದ್ದಾರೆ. ಜೆಡಿಎಸ್ ಜೆಡಿಯು ಸೇರಿ ಎಲ್ಲಾ ಪಕ್ಷಗಳನ್ನು ಸುತ್ತಿ ಬಂದಿದ್ದಾರೆ. ಆದರೆ ಬಿಜೆಪಿ ಹೊರತುಪಡಿಸಿ. ಯಾಕಂದ್ರೆ ನಾವು ಬಿಜೆಪಿಗೆ ಬಿಟ್ಟುಕೊಳ್ಳಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Sat, 18 November 23