ಅಕ್ರಮ ಅದಿರು ಸಾಗಣೆ ಕೇಸ್: ಆನಂದ್ ಸಿಂಗ್ ಸೇರಿದಂತೆ ಗೋವಾ ಮಾಜಿ ಸಚಿವ ಖುಲಾಸೆ

ಬಳ್ಳಾರಿಯ ವ್ಯಾಸನಕೆರೆ ಗಣಿಯಿಂದ ಅಕ್ರಮವಾಗಿ ಕಬ್ಬಿಣದ ಅದಿರಿನ ಸಾಗಾಣೆ ಪ್ರಕರಣದಲ್ಲಿ ಮಾಜಿ ಸಚಿವ ಆನಂದ್ ಸಿಂಗ್​ಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿ ಇಂದಿಗೆ ತೀರ್ಪು ಕಾಯ್ದಿರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಈ ಕೋರ್ಟ್​ ತೀರ್ಪಿನಿಂದ ಆನಂದ್​ ಸಿಂಗ್ ಹಾಗೂ ಗೋವಾ ಸಚಿವ ರೋಹನ್ ಕೌಂಟೆ ನಿರಾಳರಾಗಿದ್ದಾರೆ.

ಅಕ್ರಮ ಅದಿರು ಸಾಗಣೆ ಕೇಸ್: ಆನಂದ್ ಸಿಂಗ್ ಸೇರಿದಂತೆ ಗೋವಾ ಮಾಜಿ ಸಚಿವ ಖುಲಾಸೆ
Anand Singh
Edited By:

Updated on: Mar 07, 2025 | 6:03 PM

ಬೆಂಗಳೂರು, (ಮಾರ್ಚ್​ 07): ಬಳ್ಳಾರಿಯ ವ್ಯಾಸನಕೆರೆ ಗಣಿಯಿಂದ ಅಕ್ರಮವಾಗಿ ಕಬ್ಬಿಣದ ಅದಿರಿನ ಸಾಗಾಣೆ ಪ್ರಕರಣದ  ಆರೋಪಿಗಳಾದ ಮಾಜಿ ಸಚಿವ ಆನಂದ್ ಸಿಂಗ್​ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಇಂದು (ಮಾರ್ಚ್​ 07) ಆರೋಪಿಗಳಾದ ಆನಂದ್ ಸಿಂಗ್ ಹಾಗೂ ಗೋವಾ ಮಾಜಿ ಸಚಿವ ರೋಹನ್ ಕೌಂಟೆ ಸೇರಿದಂತೆ 16 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬಳ್ಳಾರಿಯ ವ್ಯಾಸನಕೆರೆ ಗಣಿಯಿಂದ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಆನಂದ್ ಸಿಂಗ್, ಗೋವಾ ಸಚಿವ ರೋಹನ್ ಕೌಂಟೆ ಆರೋಪಿಯಾಗಿದ್ದರು. ಈ ಪ್ರಕರಣ ವಾದ ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಇಂದು ಜನಪ್ರತಿನಿಧಿಗಳ ಕೋರ್ಟ್​​, ತೀರ್ಪು ಪ್ರಕಟಿಸಿದ್ದು, ಆನಂದ್​ ಸಿಂಗ್​ ಕೇಸ್​ನಿಂದ ಖುಲಾಸೆಗೊಂಡಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್: ಸಿದ್ದರಾಮಯ್ಯ ಪತ್ನಿ, ಸಚಿವ ಭೈರತಿ ಸುರೇಶ್​ಗೆ ಬಿಗ್​ ರಿಲೀಫ್, ಇಡಿಗೆ ಹಿನ್ನಡೆ​

ಆನಂದ್ ಸಿಂಗ್ ಪರ ವಕೀಲ ಹೇಳಿದ್ದಿಷ್ಟು

ಕೋರ್ಟ್​ ತೀರ್ಪು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್ ಪರ ವಕೀಲ ಗಂಗಾಧರ್, ಇಂದು ನ್ಯಾಯಾಲಯದಲ್ಲಿ SIT ತನಿಖೆಯ ತೀರ್ಪು ಇತ್ತು.16 ಜನ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಪೂರಕವಾದ ಸಾಕ್ಷ್ಯಗಳನ್ನ ಸಲ್ಲಿಸುವಲ್ಲಿ ವಿಫಲವಾಗಿದೆ. ಆನಂದ್ ಸಿಂಗ್, ಗೋವಾ ಮಾಜಿ ಸಚಿವರು ಸಮೇತ ಖುಲಾಸೆಯಾಗಿದ್ದಾರೆ. ಸುಪ್ರೀಂ ಬಳ್ಳಾರಿ ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆಗೆ ಮಾಡಲು ಹೇಳಿತ್ತು. ಸಿಬಿಐನವರು ಮಾಡಿದ ತನಿಖೆಯನ್ನ ಎಸ್ ಐಟಿ ಕೂಡ ಮಾಡಿತ್ತು. 50 ಸಾವಿರ ಮೆ.ಟನ್ ಅಕ್ರಮ ರಪ್ತು ಎಂದು ಆರೋಪಿಸಿದ್ದರು. ಆದರೆ ಸಾಕ್ಷಿಗಳು ಇಲ್ಲದ ಕಾರಣ. ಕೇಸ್ ಖುಲಾಸೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಆನಂದ್‌ ಸಿಂಗ್‌ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಸಿ ವರದಿ ಆಧರಿಸಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ತನಿಖೆ ನಡೆಸಿತ್ತು. 16,976 ಮೆಟ್ರಿಕ್ ಟನ್ ಅದಿರು ಅಕ್ರಮ ಗಣಿಗಾರಿಕೆ ಆರೋಪ, ಜೈಸಿಂಗ್‌ಪುರದ ಬಳಿ ಎಸ್‌ವಿಕೆ ಫ್ಲಾಟ್‌ನಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ 2015ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಡಿವೈಎಸ್ಪಿ ವೇಣುಗೋಪಾಲ್ ನೇತೃತ್ವದ ತಂಡ ತನಿಖೆ ನಡೆಸಿ ಚಾರ್ಜ್‌ ಶೀಟ್‌ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ಇಂದಿಗೆ ಚಿಚಾರಣೆ ಕಾಯ್ದಿರಿಸಿತ್ತು.

Published On - 5:51 pm, Fri, 7 March 25