Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ಶಿಶಿರ ಉತ್ಸವ: 2000 ವಿದ್ಯಾರ್ಥಿಗಳು ಭಾಗಿ

ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ (ಎಸ್‌ಎಸ್‌ಆರ್‌ವಿಎಂ) 15ನೇ ವಾರ್ಷಿಕ ಶಿಶಿರೋತ್ಸವವನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಿತು. ಭಾರತದಾದ್ಯಂತ 50 ಎಸ್‌ಎಸ್‌ಆರ್‌ವಿಎಂ ಶಾಲೆಗಳ 2000 ವಿದ್ಯಾರ್ಥಿಗಳು ಕ್ರೀಡೆ, ಸಂಸ್ಕೃತಿ, ಮತ್ತು ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿತು. ಈ ಉತ್ಸವವು ಸಮಗ್ರ ಬೆಳವಣಿಗೆಯ ಮಹತ್ವವನ್ನು ಎತ್ತಿ ತೋರಿಸಿತು.

ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ಶಿಶಿರ ಉತ್ಸವ: 2000 ವಿದ್ಯಾರ್ಥಿಗಳು ಭಾಗಿ
ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ಶಿಶಿರ ಉತ್ಸವ: 2000 ವಿದ್ಯಾರ್ಥಿಗಳು ಭಾಗಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 23, 2024 | 9:03 PM

ಬೆಂಗಳೂರು, ಡಿಸೆಂಬರ್ 23: ಶ್ರೀ ಶ್ರೀ ರವಿಶಂಕರ್ (Sri Sri Gurudev Ravi Shankar) ವಿದ್ಯಾ ಮಂದಿರ ಟ್ರಸ್ಟ್ 15ನೇ ಶಿಶಿರ ಉತ್ಸವವನ್ನು ಯಶಸ್ವಿಯಾಗಿ ನಡೆಸಿದೆ. ಆರ್ಟ್ ಆಫ್ ಲಿವಿಂಗ್​ನ ಅಂತಾರಾಷ್ಟ್ರೀಯ ಕೇಂದ್ರದ ಬಳಿಯಿರುವ ಎಸ್​ಎಸ್​ಆರ್​ವಿಎಂ ಗ್ರೌಂಡ್​ನಲ್ಲಿ ಭಾರತದ 50 ಎಸ್​​ಎಸ್​ಆರ್​ವಿಎಂ ಶಾಲೆಗಳ 2000 ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟದಲ್ಲಿ ಭಾಗವಹಿಸಿದರು.

ಆರ್ಟ್ ಆಫ್ ಲಿವಿಂಗ್​ನ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಆರೈಕೆಯ ಕಾರ್ಯಕ್ರಮಗಳ ನಿರ್ದೇಶಕಿ ಮತ್ತು ಪೂಜ್ಯ ಗುರುದೇವರ ಸಹೋದರಿ ಭಾನುಮತಿ ನರಸಿಂಹನ್, ಏಷ್ಯನ್ ಅಥ್ಲೆಟಿಕ್ಸ್ ನ ಪದವಿ ಪುರಸ್ಕೃತೆ ಬಿಂದುರಾಣಿ, ಜಿ; ವೃತ್ತಿಪರ ಎಂಎಂಎ ಹೋರಾಟಗಾರ ಕಾಂತರಾಜ್ ಅಗಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮಗ್ರ ಬೆಳವಣಿಗೆಗಾಗಿ ಒಂದು ವೇದಿಕೆ

ಎಸ್​ಎಸ್​ಆರ್​ವಿಎಂನ ಅಧ್ಯಕ್ಷ ಕಮೋಡರ್ ಹೆಚ್.ಜಿ. ಹರ್ಷ ಅವರು ಮಾತನಾಡಿ, ಶಿಶಿರ ಉತ್ಸವವು ತಂಡದ ಕಾರ್ಯಾಚರಣೆಯ, ಸಹಿಷ್ಣುತೆಯ, ಕ್ರೀಡಾಪಟುತ್ವದ ಉತ್ಸವ, ಜಯವು ಕೇವಲ ಗೆಲ್ಲುವುದರಲ್ಲಿ ಇಲ್ಲ. ಜಯವಿರುವುದು ಪಯಣದಲ್ಲಿ, ಸ್ನೇಹಶೀಲತೆಯಲ್ಲಿ, ದಾರಿಯಲ್ಲಿ ಕಲಿತ ಪಾಠದಲ್ಲಿ ಎಂದರು. ಟ್ರಸ್ಟಿ ಜೈನಾ ದೇಸಾಯಿ ಮಾತನಾಡಿ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಿಪುಣರಾಗಿರುವ ವ್ಯಕ್ತಿತ್ವಗಳನ್ನು ಪೋಷಿಸಲು ನಾವು ಹೊಂದಿರುವ ಬದ್ಧತೆಯೇ ಈ ಉತ್ಸವ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಿನ್ನಿಸ್ ದಾಖಲೆ ಸೃಷ್ಟಿಸಿದ ರವಿಶಂಕರ್ ಗುರೂಜಿಯೊಂದಿಗೆ ವಿಶ್ವ ಧ್ಯಾನ ಕಾರ್ಯಕ್ರಮ

ಕಾರ್ಯಕ್ರಮವು ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು ಥ್ರೋಬಾಲ್, ಭಾರತದ ಪರಂಪರೆಯನ್ನು ಆಚರಿಸುವ ಕಲಾತ್ಮಕ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಸೇರಿದಂತೆ ವಿವಿಧ ಸ್ಪರ್ಧೆಗಳ ಅತ್ಯಾಕರ್ಷಕ ಮಿಶ್ರಣವನ್ನು ಒಳಗೊಂಡಿತ್ತು. ಚಿತ್ರಕಲಾ ಸ್ಪರ್ಧೆಯು ಎಸ್​ಎಸ್​ಆರ್​ವಿಎಂನ ಉದಯೋನ್ಮುಖ ಕಲಾವಿದರ ಸೃಜನಶೀಲ ಪ್ರತಿಭೆಯನ್ನು ಹೊರತಂದಿತು.

ಯೋಗ ನೃತ್ಯ ಪ್ರದರ್ಶನವು ವಿದ್ಯಾರ್ಥಿಗಳ ಸಮನ್ವಯ, ಸಮತೋಲನ ಮತ್ತು ಮಾನಸಿಕ ಸಾಮರಸ್ಯವನ್ನು ಎತ್ತಿ ತೋರಿಸಿತು. ನೃತ್ಯ ಸ್ಪರ್ಧೆಯು ತನ್ನ ಶಕ್ತಿಭರಿತವಾದ ಮತ್ತು ಆಕರ್ಷಕವಾದ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಜಂಕ್ ಬ್ಯಾಂಡ್ ಸ್ಪರ್ಧೆಯು ಸೃಜನಾತ್ಮಕವಾಗಿ ಸಂಗೀತವನ್ನು ಸುಸ್ಥಿರತೆಯೊಂದಿಗೆ ಸಂಯೋಜಿಸಿತು.

ಡಿಸೆಂಬರ್ 21 ರಂದು, 2,000 ವಿದ್ಯಾರ್ಥಿಗಳು ‘ಗುರುದೇವರೊಂದಿಗೆ ವಿಶ್ವ ಧ್ಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶಾಂತಿ ಮತ್ತು ಸಾಮರಸ್ಯದ ಅಲೆಗಳನ್ನು ಹರಡುವ ಮೂಲಕ ಈ ಉತ್ಸವವು ಮೊದಲ ‘ವಿಶ್ವ ಧ್ಯಾನ ದಿನ’ವನ್ನು ಗುರುತಿಸಿತು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಸಂಘದ ಸನ್ಮಾನ್ಯ ಕಾರ್ಯದರ್ಶಿ ಪದ್ಮಶ್ರೀ ಕೆ.ವೈ ವೆಂಕಟೇಶ್​ ಮುಖ್ಯ ಅತಿಥಿಗಳಾಗಿದ್ದರು. ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ (2021) ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿರುವ ಪ್ರಸಿದ್ಧ ಪ್ಯಾರಾ-ಅಥ್ಲೀಟ್ ವೆಂಕಟೇಶ್ ಅವರು ತಮ್ಮ ಪಯಣದ ಬಗ್ಗೆ ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.

ಎಸ್​ಎಸ್​ಆರ್​ವಿಎಂ ಟ್ರಸ್ಟ್ ಬಗ್ಗೆ

ಗುರುದೇವ ಶ್ರೀ ಶ್ರೀ ರವಿಶಂಕರ್ ರವರಿಂದ 1999 ರಲ್ಲಿ ಸ್ಥಾಪನೆಯಾದ ಎಸ್​ಎಸ್​ಆರ್​ವಿಎಂ ಟ್ರಸ್ಟ್, ಒತ್ತಡ-ಮುಕ್ತ ವಾತಾವರಣದಲ್ಲಿ ಮೌಲ್ಯಾಧಾರಿತ, ಸಮಗ್ರ ಶಿಕ್ಷಣವನ್ನು ಉತ್ತೇಜಿಸುತ್ತದೆ. ವಿಶ್ವವಿದ್ಯಾನಿಲಯ, ಆಯುರ್ವೇದ ಕಾಲೇಜುಗಳು ಮೊದಲಾದವುಗಳನ್ನು ಒಳಗೊಂಡಂತೆ 120 ಕ್ಕೂ ಹೆಚ್ಚು ಸಂಸ್ಥೆಗಳನ್ನು ನಿರ್ವಹಿಸುತ್ತಿರುವ ಟ್ರಸ್ಟ್ ಪ್ರಸ್ತುತ 60,000 ವಿದ್ಯಾರ್ಥಿಗಳ ಜೀವನದಲ್ಲಿ ಪ್ರಭಾವ ಬೀರಿದ್ದು, ಜಾಗತಿಕವಾಗಿ 5 ಲಕ್ಷಕ್ಕಿಂತಲೂ ಹೆಚ್ಚು ಹಳೆಯ ವಿದ್ಯಾರ್ಥಿಗಳ ಜಾಲವನ್ನು ಹೊಂದಿದೆ.

‘ಶಿಶಿರ ಉತ್ಸವ 2024’

ಉತ್ಸವವು, ಪ್ರತಿಭೆಯನ್ನು ಪೋಷಿಸುವಲ್ಲಿ, ಸೌಹಾರ್ದತೆಯನ್ನು ಬೆಳೆಸುವಲ್ಲಿ ಮತ್ತು ವೈವಿಧ್ಯಮಯ ವಿಭಾಗಗಳಲ್ಲಿ ಉತ್ಕೃಷ್ಟತೆಯನ್ನು ಮೆರೆಯುವಲ್ಲಿ ಎಸ್​ಎಸ್​ಆರ್​ವಿಎಂನ ಬದ್ಧತೆಯನ್ನು ಒತ್ತಿಹೇಳಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​