ಗಿನ್ನಿಸ್ ದಾಖಲೆ ಸೃಷ್ಟಿಸಿದ ರವಿಶಂಕರ್ ಗುರೂಜಿಯೊಂದಿಗೆ ವಿಶ್ವ ಧ್ಯಾನ ಕಾರ್ಯಕ್ರಮ
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು "ಗುರುದೇವರೊಂದಿಗೆ ವಿಶ್ವ ಧ್ಯಾನ" ಕಾರ್ಯಕ್ರಮದ ಮೂಲಕ ಗಿನ್ನಿಸ್ ವಿಶ್ವ ದಾಖಲೆ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯೂನಿಯನ್ ದಾಖಲೆಗಳನ್ನು ಸೃಷ್ಟಿಸಿದೆ. ಲಕ್ಷಾಂತರ ಜನರು 180 ದೇಶಗಳಿಂದ ಭಾಗವಹಿಸಿ, ಒಂದು ದಿನದಲ್ಲಿ ವಿಶ್ವದ ಅತಿದೊಡ್ಡ ಸಾಮೂಹಿಕ ಧ್ಯಾನವನ್ನು ನಡೆಸಿದ್ದಾರೆ. ಇದು ವಿಶ್ವ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಒಂದು ಐತಿಹಾಸಿಕ ಕ್ಷಣವಾಗಿದೆ.
ಬೆಂಗಳೂರು, ಡಿಸೆಂಬರ್ 23: ‘ಗುರುದೇವರೊಂದಿಗೆ ವಿಶ್ವ ಧ್ಯಾನ’ (World’s Largest Meditation), ಎಲ್ಲಾ ದಾಖಲೆಗಳನ್ನೂ ಮುರಿದು ಒಂದು ಐತಿಹಾಸಿಕ ಮೈಲಿಗಲ್ಲನ್ನು ಸೃಷ್ಟಿಸಿತು. ಈ ದಾಖಲೆಯು, ವಿಶ್ವದ ಅತೀ ದೊಡ್ಡ ಏಕಸಮಯದ ಸಾಮೂಹಿಕ ಧ್ಯಾನದ ದಾಖಲೆಯನ್ನು ಸೃಷ್ಟಿಸಿದ್ದಕ್ಕಾಗಿ ಗಿನ್ನಿಸ್ ವಿಶ್ವದಾಖಲೆಯ ಪುಸ್ತಕವನ್ನು, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯೂನಿಯನ್ ಅನ್ನು ತಲುಪಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಈ ಐತಿಹಾಸಿಕ ಸಮಾವೇಶದಲ್ಲಿ ಅನೇಕ ಮಿಲಿಯನ್ ಜನರು ಜಾಗತಿಕವಾಗಿ ಒಂದಾಗಿ ಸೇರಿ, ಸಾಮೂಹಿಕ ಧ್ಯಾನದ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ. ಪ್ರಥಮ ವಿಶ್ವ ಧ್ಯಾನ ದಿನವು ಐಕ್ಯತೆಯ ಹಾಗೂ ಆಂತರಿಕ ಶಾಂತಿಯ, ಸರಿಸಾಟಿಯಿಲ್ಲದಂತಹ ಉತ್ಸವವಾಗಿ ಆಚರಿಸಲ್ಪಟ್ಟಿತು. 180 ದೇಶಗಳಿಂದ ಜನರು ಭಾಗವಹಿಸಿ, ಧ್ಯಾನವು ಪರಿವರ್ತಕ ಶಕ್ತಿಯನ್ನು ಹೊಂದಿರುವಂತಹ ಜಾಗತಿಕ ಚಳುವಳಿ ಎಂದು ತೋರಿಸಿದರು. ವಿಶ್ವ ಸಂಸ್ಥೆಯಲ್ಲಿ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಗಿ, ವರ್ಲ್ಡ್ ಟ್ರೇಡ್ ಸೆಂಟರ್ನ ಮೇಲಿನಿಂದ ಗುರುದೇವರ ಧ್ಯಾನದ ನೇರ ಪ್ರಸಾರದೊಂದಿಗೆ ಈ ಸಮಾರಂಭವು ಮುಕ್ತಾಯಗೊಂಡಿತು. ಎಲ್ಲಾ ಖಂಡಗಳಲ್ಲೂ ಧ್ಯಾನದ ಅಲೆಯು ಹರಡಿತ್ತು.
ದಾಖಲೆಗಳ ಪಟ್ಟಿ ಹೀಗಿದೆ
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್
- ನಿರ್ದೇಶಿತ ಧ್ಯಾನದ ಯೂಟ್ಯೂಬ್ನ ನೇರಪ್ರಸಾರವನ್ನು ವೀಕ್ಷಿಸಿದ ಅತೀ ಹೆಚ್ಚು ವೀಕ್ಷಕರು.
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್
- ಒಂದು ದಿನದಲ್ಲಿ, ಭಾರತದ ಎಲ್ಲಾ ರಾಜ್ಯಗಳಿಂದ ನಿರ್ದೇಶಿತ ಧ್ಯಾನದಲ್ಲಿ ಭಾಗವಹಿಸಿದ ಗರಿಷ್ಠ ಭಾಗಿಗಳು
- ಒಂದೇ ದಿನದಲ್ಲಿ ನಿರ್ದೇಶಿತ ಧ್ಯಾನದಲ್ಲಿ ಭಾಗವಹಿಸಿದ ಗರಿಷ್ಠ ದೇಶಗಳ ಭಾಗಿಗಳು
ವರ್ಲ್ಡ್ ರೆಕಾರ್ಡ್ಸ್ ಯೂನಿಯನ್
- 24 ಗಂಟೆಗಳಲ್ಲಿ ಆನ್ಲೈನ್ ಧ್ಯಾನವನ್ನು ಯೂಟ್ಯೂಬ್ನಲ್ಲಿ ಹೆಚ್ಚಾಗಿ ವೀಕ್ಷಿಸಲ್ಪಟ್ಟ ದಾಖಲೆ
- ಯೂಟ್ಯೂಬ್ ನಲ್ಲಿ ನಿರ್ದೇಶಿತ ಧ್ಯಾನದಲ್ಲಿ ನೇರವಾಗಿ ಭಾಗವಹಿಸಿದ ವೀಕ್ಷಕರ ದಾಖಲೆ
- ಆನ್‌ಲೈನ್ ಧ್ಯಾನದ ಸೆಷನ್‌ನಲ್ಲಿ ಭಾಗವಹಿಸಿದ ಅತಿ ಹೆಚ್ಚು ರಾಷ್ಟ್ರದ ಭಾಗಿಗಳು ಎಂಬ ದಾಖಲೆ
ಗುರುದೇವರು ನಡೆಸಿಕೊಟ್ಟ ಧ್ಯಾನದ ನೇರಪ್ರಸಾರದಲ್ಲಿ ಅನೇಕ ಮಿಲಿಯನ್ ಜನರು ಅಂತರ್ಜಾಲದ ಮೂಲಕ ಭಾಗವಹಿಸಿ, ವಿಶ್ವ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಮಾಡಿದರು. ಧ್ಯಾನವನ್ನು ಆರಂಭಿಸುವ ಮೊದಲು, ಧ್ಯಾನದ ಅರ್ಥವನ್ನು ಗುರುದೇವರು ವಿವರಿಸಿದರು. “ಧ್ಯಾನವೆಂದರೆ, ಆಲೋಚನೆಗಳಲ್ಲಿ ತಿಳಿದಿರುವುದನ್ನು ಅನುಭವಿಸುವ ಪಯಣ, ಧ್ಯಾನ ಮಾಡಬೇಕಾದರೆ, ವಿಪರೀತವಾಗಿ ಆಲೋಚಿಸುವುದರಿಂದ, ಏನಿದೆಯೋ ಅದನ್ನು ಅನುಭವಿಸುವುದರತ್ತ ಹೋಗಬೇಕು. ನಂತರ ಆ ಆಲೋಚನೆಗಳನ್ನೂ ದಾಟಿ ಆಂತರ್ಯದ ಆಕಾಶದೊಳಗೆ ತೆರಳುವುದು. ವಿವೇಚನೆಯುಳ್ಳವರಾಗಿ, ಸೂಕ್ಷ್ಮತೆಯುಳ್ಳವರಾಗಿ ಇರಬೇಕೆಂದರೆ ಧ್ಯಾನವನ್ನು ಮಾಡಬೇಕು. ಧ್ಯಾನವೆಂದರೆ ನಿಷ್ಕ್ರಿಯವಾದ ಸ್ಥಿತಿಯಲ್ಲ. ಧ್ಯಾನದಿಂದ ನೀವು ಹೆಚ್ಚು ಕ್ರಿಯಾಶೀಲರಾಗುತ್ತೀರಿ ಮತ್ತು ಶಾಂತಿಯುತರಾಗುತ್ತೀರಿ. ಕ್ರಾಂತಿಕಾರಿಯಾಗಲೂ ಸಹ ಧ್ಯಾನ ಮಾಡಬೇಕು” ಎಂದಿದ್ದಾರೆ.
ಇದನ್ನೂ ಓದಿ: Video: ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಆರ್ಟ್ ಆಫ್ ಲಿವಿಂಗ್ನ ಈ ಕಾರ್ಯಕ್ಕೆ ಜಾಗತಿಕ ನಾಯಕರು, ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ವೃತ್ತಿಪರರು, ಜೀವನದ ಎಲ್ಲಾ ವರ್ಗದವರು, ಎಲ್ಲಾ ವಯೋಮಾನದವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರೈತರು, ಶಿಕ್ಷಣ ಸಂಸ್ಥೆಗಳು, ಅಂಧ ಶಾಲೆಯ ಮಕ್ಕಳು, ಕಾರ್ಪೊರೇಟ್ ಗಳು, ಮಿಲಿಟರಿಯ ಸದಸ್ಯರು, ಆರೋಗ್ಯ ಕಾರ್ಯಕರ್ತರು, ಸಂಶೋಧಕರು, ವಿಜ್ಞಾನಿಗಳು, ಗೃಹಿಣಿಯರು, ಬುಡಕಟ್ಟು ಜನಾಂಗದವರು, ಕಾರಾಗೃಹದ ಕೈದಿಗಳು ಭಾಗವಹಿಸಿ, ಧ್ಯಾನದ ವೈಶ್ವಿಕತೆಯನ್ನು, ಅದರ ಸಕಾರಾತ್ಮಕವಾದ ಸೆಳೆತವನ್ನು ತೋರಿಸಿದರು. ಶಾಂತಿ ಹಾಗೂ ಸಾಮರಸ್ಯದ ಕ್ಷಣಗಳಲ್ಲಿ ಜಗತ್ತು ಒಂದಾಯಿತು.
‘ಗುರುದೇವರೊಂದಿಗೆ ವಿಶ್ವ ಧ್ಯಾನ’ಕ್ಕೆ ದೊರೆತ ಅಗಾಧವಾದ ಪ್ರತಿಕ್ರಿಯೆ ಹಾಗೂ ಜಾಗತಿಕ ಭಾಗವಹಿಸುವಿಕೆಯು ಸಾಮೂಹಿಕ ಧ್ಯಾನದ ಪರಿವರ್ತಕ ಶಕ್ತಿಯನ್ನು ತೋರಿಸುತ್ತದೆ. ಈ ಅಪಾರ ಯತ್ನದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಧ್ಯಾನದಲ್ಲಿ ಅನೇಕ ಮಿಲಿಯನ್ ಜನರನ್ನು ಒಗ್ಗೂಡಿಸಿದ್ದಲ್ಲದೆ, ಆಂತರಿಕ ಶಾಂತಿ ಮತ್ತು ವೈಶ್ವಿಕ ಸಾಮರಸ್ಯದ ಜಾಗತಿಕ ಚಳುವಳಿಗೂ ಸ್ಫೂರ್ತಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:42 pm, Mon, 23 December 24