AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುವವರಿಗೆ ಗುಡ್ ನ್ಯೂಸ್; ಕಲ್ಯಾಣ ಮಂಟಪ ಮಾಲೀಕರಿಗಿಲ್ಲ ಖುಷಿ

ಕೇವಲ 40 ಜನರಿಗೆ ಅನುಮತಿ ಕೊಟ್ಟರೆ ಲಕ್ಷಾಂತರ ರೂಪಾಯಿ ಕೊಟ್ಟು ಚೌಟ್ರಿಗೆ ಯಾರು ಬರುತ್ತಾರೆ? ಈ ಮುಂಚೆ ರದ್ದಾಗಿರುವ ಮದುವೆಗಳ ಮುಂಗಡ ಹಣವನ್ನೇ ಇನ್ನೂ ಹಿಂದಿರುಗಿಸಿಲ್ಲ. ಹೀಗಾಗಿ ಕನಿಷ್ಟ ನೂರು ಜನರಿಗೆ ಅವಕಾಶ ಕೊಡಬೇಕು ಅಂತ ಮಾಲೀಕರು ಮನವಿ ಮಾಡುತ್ತಿದ್ದಾರೆ.

ಮದುವೆಯಾಗುವವರಿಗೆ ಗುಡ್ ನ್ಯೂಸ್; ಕಲ್ಯಾಣ ಮಂಟಪ ಮಾಲೀಕರಿಗಿಲ್ಲ ಖುಷಿ
ಕಲ್ಯಾಣ ಮಂಟಪ
TV9 Web
| Updated By: sandhya thejappa|

Updated on:Jun 28, 2021 | 1:07 PM

Share

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ರಾಜ್ಯದ್ಯಂತ ಲಾಕ್​ಡೌನ್ ಜಾರಿಗೊಳಿಸಿತ್ತು. ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದೆ. ಸುಮಾರು ಎರಡು ಮೂರು ತಿಂಗಳಿನಿಂದ ಬಂದ್ ಆಗಿದ್ದ ಕಲ್ಯಾಣ ಮಂಟಪ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಅನುಮತಿ ಸಿಕ್ಕ ಬೆನ್ನಲ್ಲೆ ರಾಜಧಾನಿ ಬೆಂಗಳೂರಿನಲ್ಲಿ ಕಲ್ಯಾಣ ಮಂಟಪಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಆದರೆ ಸೀಮಿತ ಜನರಿಗೆ ಅನುಮತಿ ನೀಡಿದ ಕಾರಣ ಮಾಲೀಕರಿಗೆ ಬೇಸರವಾಗಿದೆ.

ಕೇವಲ 40 ಜನರಿಗೆ ಅನುಮತಿ ಕೊಟ್ಟರೆ ಲಕ್ಷಾಂತರ ರೂಪಾಯಿ ಕೊಟ್ಟು ಚೌಟ್ರಿಗೆ ಯಾರು ಬರುತ್ತಾರೆ? ಈ ಮುಂಚೆ ರದ್ದಾಗಿರುವ ಮದುವೆಗಳ ಮುಂಗಡ ಹಣವನ್ನೇ ಇನ್ನೂ ಹಿಂದಿರುಗಿಸಿಲ್ಲ. ಹೀಗಾಗಿ ಕನಿಷ್ಟ ನೂರು ಜನರಿಗೆ ಅವಕಾಶ ಕೊಡಬೇಕು ಅಂತ ಮಾಲೀಕರು ಮನವಿ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಆಷಾಢ ಹಿನ್ನೆಲೆ ಶುಭ ಸಮಾರಂಭಗಳು ನಡೆಯಲ್ಲ. ಇಂಥಹ ಸಮಯದಲ್ಲಿ ಸರ್ಕಾರ ಅನುಮತಿ ನೀಡಿರುವುದು ಪ್ರಯೋಜನವಿಲ್ಲ ಅಂತ ಕಲ್ಯಾಣ ಮಂಟಪಗಳ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆ ಜನರು ಕಲ್ಯಾಣ ಮಂಟಪಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಎಲ್ಲರೂ ಮನೆ ಮುಂದೆಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಹೀಗಿರುವಾಗ ಕೇವಲ 40 ಜನರಿಗೆ ಸೀಮಿತಗೊಳಿಸಿದರೆ ಯಾರು ಬರುತ್ತಾರೆ ಎಂದು ಮಂಟಪ ಮಾಲೀಕರು ಪ್ರಶ್ನಿಸಿದ್ದಾರೆ.

ಬಟ್ಟೆ ಅಂಗಡಿ ತೆರೆಯಲು ಅನುಮತಿಗೆ ಆಗ್ರಹ ಕೊರೊನಾ ನಿಯಮ ಪಾಲಿಸಿ ವ್ಯಾಪಾರ ಮಾಡುತ್ತೇವೆ‌. ಎಲ್ಲರಂತೆ ನಮಗೂ ಅಂಗಡಿ ತೆರೆಯಲು ಅವಕಾಶ ಕೊಡಿ ಎಂದು ಮೈಸೂರಿನಲ್ಲಿ ಕೆ.ಟಿ.ಸ್ಟ್ರೀಟ್ ಬಳಿ ಬಟ್ಟೆ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಎರಡು ತಿಂಗಳಿನಿಂದ ಅಂಗಡಿಗಳು ಬಂದ್ ಆಗಿವೆ. ಹೀಗಾಗಿ ಬಟ್ಟೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಕೊರೊನಾ ಟೈಟ್ ರೂಲ್ಸ್​ನಿಂದ ವರ ಬೇಸರ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಲು ಪರದಾಡುತ್ತಿದೆ ದಿಬ್ಬಣ

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗಿಂತ ಶಂಕಿತರ ಸಾವೇ ಹೆಚ್ಚು

(Bengaluru Unlock Guidelines to reopen marriage halls with 50 attendees and no relief for owners)

Published On - 12:57 pm, Mon, 28 June 21

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ