ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗಿಂತ ಶಂಕಿತರ ಸಾವೇ ಹೆಚ್ಚು
ಕೊವಿಡ್ ಟೆಸ್ಟ್ನಲ್ಲಿ ನೆಗೆಟಿವ್ ರಿಪೋರ್ಟ್ ಬರುತ್ತಿದೆ. ಆದರೆ ರೋಗಿಗೆ ತೀವ್ರ ಕೆಮ್ಮು, ಜ್ವರ, ನೆಗಡಿ, ಮೈ ಕೈ ನೋವು ಸೇರಿದಂತೆ ಕೊರೊನಾದ ಎಲ್ಲಾ ಲಕ್ಷಣಗಳು ಇರುತ್ತದೆ. ಕೊರೊನಾ ಎರಡನೇ ಅಲೆಯಲ್ಲಿ 11 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಇತ್ತೀಚಿಗೆ ಕೊವಿಡ್ ಸಾವಿನ ಪ್ರಮಾಣ ಇಳಿಕೆಯಾಗಿದೆ.
ಬೆಂಗಳೂರು: ಕೊರೊನಾ ಎರಡನೇ ಅಲೆ ಕಡಿಮೆಯಾಗುತ್ತಿರುವ ಬೆನ್ನಲ್ಲೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆತಂಕವೊಂದು ಶುರುವಾಗಿದೆ. ನಗರದಲ್ಲಿ ಕೊರೊನಾ ಸೋಂಕು ತಗುಲಿ ಮೃತಪಡುವವರಿಗಿಂತ ಶಂಕಿತರು ಸಾವು ಹೆಚ್ಚಾಗಿದೆ. ಇದು ಸಿಲಿಕಾನ್ ಸಿಟಿಯಲ್ಲಿ ಆತಂಕ್ಕೆ ಕಾರಣವಾಗಿದೆ. ಕೊರೊನಾ ಟೆಸ್ಟ್ ರಿಪೋರ್ಟ್ನಲ್ಲಿ ವರದಿ ನೆಗೆಟಿವ್ ಎಂದು ಬರುತ್ತೆ. ಆದರೆ ಕೊರೊನಾ ರೋಗ ಲಕ್ಷಣಗಳು ಎಲ್ಲವೂ ಇರುತ್ತದೆ. ಕೊವಿಡ್ ಮಾದರಿ ಲಕ್ಷಣಗಳಿದ್ದವರೇ ಅತಿ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊವಿಡ್ ಟೆಸ್ಟ್ನಲ್ಲಿ ನೆಗೆಟಿವ್ ರಿಪೋರ್ಟ್ ಬರುತ್ತಿದೆ. ಆದರೆ ರೋಗಿಗೆ ತೀವ್ರ ಕೆಮ್ಮು, ಜ್ವರ, ನೆಗಡಿ, ಮೈ ಕೈ ನೋವು ಸೇರಿದಂತೆ ಕೊರೊನಾದ ಎಲ್ಲಾ ಲಕ್ಷಣಗಳು ಇರುತ್ತದೆ. ಕೊರೊನಾ ಎರಡನೇ ಅಲೆಯಲ್ಲಿ 11 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಇತ್ತೀಚಿಗೆ ಕೊವಿಡ್ ಸಾವಿನ ಪ್ರಮಾಣ ಇಳಿಕೆಯಾಗಿದೆ. ಆದರೆ ಕೊರೊನಾ ಲಕ್ಷಣ ಇರುವ ಶಂಕಿತರ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಏಪ್ರೀಲ್, ಮೇ ನಿಂದ 400 ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕಿನ ಎಲ್ಲ ಲಕ್ಷಗಳಿದ್ದು, ಕೊವಿಡ್ ರಿಪೋರ್ಟ್ ಮಾತ್ರ ನೆಗೆಟಿವ್ ಬಂದರು ಸಾವನ್ನಪ್ಪಿದ್ದಾರೆ. ಹೀಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾದ ಕಾರಣ ಕೊವಿಡ್ ಮಾದರಿಯಲ್ಲೇ ಚಿಕಿತ್ಸೆ ನೀಡಲು ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ
ಕೊಪ್ಪಳದ ಆನೆಗುಂದಿಯಲ್ಲೂ ಆನಂದಯ್ಯನ ಕೊರೊನಾ ಔಷಧ ವಿತರಣೆ
(death toll of corona symptoms patients is on rise in bengaluru)