Bangalore: ಬೆಂಗಳೂರಿನ ಹನುಮಂತನಗರ, ಯಶವಂತಪುರ, ಗಿರಿನಗರ ಸೇರಿ ಈ ಏರಿಯಾಗಳಲ್ಲಿ ಇಂದು ನೀರು ಪೂರೈಕೆ ಇಲ್ಲ

| Updated By: preethi shettigar

Updated on: Sep 13, 2021 | 7:58 AM

Bengaluru Water Supply: ಚಾಮರಾಜಪೇಟೆ, ಯಶವಂತಪುರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ನಾಗಾವರ ಸೇರಿ ಹಲವು ಪ್ರದೇಶಗಳಲ್ಲಿ ಇಂದು ಕಾವೇರಿ ನೀರು ಸರಬರಾಜು ಇರುವುದಿಲ್ಲ.

Bangalore: ಬೆಂಗಳೂರಿನ ಹನುಮಂತನಗರ, ಯಶವಂತಪುರ, ಗಿರಿನಗರ ಸೇರಿ ಈ ಏರಿಯಾಗಳಲ್ಲಿ ಇಂದು ನೀರು ಪೂರೈಕೆ ಇಲ್ಲ
ಬೆಂಗಳೂರು ಜಲಮಂಡಳಿ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಚಿಕ್ಕಪೇಟೆ, ಚಾಮರಾಜಪೇಟೆ, ಯಶವಂತಪುರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ನಾಗಾವರ ಸೇರಿ ಹಲವು ಪ್ರದೇಶಗಳಲ್ಲಿ ಇಂದು ಕಾವೇರಿ ನೀರು ಸರಬರಾಜು ಇರುವುದಿಲ್ಲ. ಬೆಂಗಳೂರಿನ ಕಾವೇರಿ 3ನೇ ಹಂತದಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ. ಪಂಪಿಂಗ್ ಸ್ಟೇಷನ್​ಗೆ ಸಂಬಂಧಿಸಿದ ಲೇನ್​ನಲ್ಲಿ ಲೀಕೇಜ್​ಗಳನ್ನು ಸರಿಪಡಿಸಲು ದುರಸ್ತಿ ಮಾಡುತ್ತಿರುವುದರಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಗಾಂಧಿನಗರ, ಕುಮಾರಪಾರ್ಕ್​​, ವಸಂತನಗರ, ಹೈ ಗ್ರೌಂಡ್ಸ್​, ಸಂಪಂಗಿರಾಮನಗರ, ಸಿಕೆಸಿ ಗಾರ್ಡನ್, ಕೆಎಸ್​ ಗಾರ್ಡನ್, ಟೌನ್​ಹಾಲ್, ಲಾಲ್​ಬಾಗ್ ರೋಡ್-1-4ನೇ ಕ್ರಾಸ್, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್, ಕಬ್ಬನ್ ಪೇಟೆ, ನಗರ್ತಪೇಟೆ, ಕುಂಬಾರಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ, ಭಕ್ಷಿ ಗಾರ್ಡನ್, ಭಾರತಿ ನಗರ, ಸೇಂಟ್ ಜಾನ್ಸ್​ ರಸ್ತೆ, ಹೈನ್ಸ್​ ರಸ್ತೆ, ನಾರಾಯಣ ಪಿಳ್ಳೈ ರಸ್ತೆ, ಸಂಗಮ್ ರಸ್ತೆ, ಕಮ್ರಾಜ್ ರೋಡ್, ವೀರಪಿಳ್ಳೈ ರಸ್ತೆ, ಇನ್​ಫೆಂಟ್ರಿ ರಸ್ತೆ, ಶಿವಾಜಿನಗರ, ಲ್ಯಾವೆಲ್ಲೆ ರಸ್ತೆ, ಫ್ರೇಜರ್ ಟೌನ್, ಬ್ಯಾಡರಹಳ್ಳಿ, ವಿಲಿಯಮ್ಸ್​ ಟೌನ್, ಸಿಂಧಿ ಕಾಲೋನಿ, ಎನ್​ಸಿ ಕಾಲೋನಿ, ಕೋಲ್ಸ್​ ರೋಡ್, ಕಾಕ್ಸ್​ ಟೌನ್​​ನ ಮಚಲಿಬೆಟ್ಟ, ದೊಡ್ಡಿಗುಂಟ, ಜೀವನಹಳ್ಳಿ, ವಿವೇಕಾನಂದ ನಗರ, ಹಕ್ಟಿನ್ಸ್ ರೋಡ್, ಡೇವಿಸ್ ರೋಡ್, ಕೂಕ್ ಟೌನ್, ಓಲ್ಡ್ ಬೈಯಪ್ಪನಹಳ್ಳಿ, ನಾಗಯ್ಯನಪಾಳ್ಯ, ಸತ್ಯನಗರ ಮತ್ತು ಮಾರುತಿ ಸೇವಾನಗರ, ಕುಶೈನಗರ, ಪಿ ಆ್ಯಂಡ್ ಟಿ ಕಾಲೋನಿ, ಮುನೇಶ್ವರ ನಗರ ಡಿಜೆ ಹಳ್ಳಿ, ಪಿಲ್ಲನ್ ಗಾರ್ಡನ್, ಕೆಜಿ ಹಳ್ಳಿ, ನಾಗಾವರ, ಪಲ್ಲನ್ ಗಾರ್ಡನ್​ 1,2 ಮತ್ತು 3ನೇ ಸ್ಟೇಜ್, ಹೊಸ ಬಾಗಲೂರ್, ಹಳೇ ಬಾಗಲೂರ್ ಏರಿಯಾಗಳಲ್ಲಿ ಇಂದು ನೀರು ಪೂರೈಕೆ ಇರುವುದಿಲ್ಲ.

ಹಾಗೇ, ಲಿಂಗರಾಜಪುರ, ಚಾಮರಾಜಪೇಟೆ, ಬ್ಯಾಂಕ್ ಕಾಲೋನಿ, ಶ್ರೀನಿವಾಸ ನಗರ, ಗವಿಪುರಂ, ಹನುಮಂತನಗರ, ಗಿರಿನಗರ, ಬ್ಯಾಟರಾಯನಪುರ, ರಾಘವೇಂದ್ರ ಬ್ಲಾಕ್, ಅವಲಹಳ್ಳಿ, ಮುನೇಶ್ವರ ಬ್ಲಾಕ್, ಕಾಳಿದಾಸ ಲೇಔಟ್, ಶ್ರೀನಗರ, ಬಿಎಸ್​ಕೆ 1ನೇ ಹಂತ, ಯಶವಂತಪುರ, ಮಲ್ಲೇಶ್ವರಂ, ಕುಮಾರಪಾರ್ಕ್, ಜಯಮಹಲ್, ಶೇಷಾದ್ರಿಪುರಂ, ನಂದಿದುರ್ಗ ರೋಡ್ ಬಡಾವಣೆ, ಜೆಸಿ ನಗರ, ಸದಾಶಿವನಗರ, ಪ್ಯಾಲೇಸ್ ಗುಂಟಹಳ್ಳಿ, ಬಿಇಎಲ್ ರೋಡ್, ಸಂಜಯನಗರ, ಡಾಲರ್ಸ್​ ಕಾಲೋನಿ, ಆರ್​​ಎಂವಿ ಬಡಾವಣೆ, ಗೆದ್ದಲಗಹಳ್ಳಿ, ಬೊಪ್ಪಸಂದ್ರ, ಕಾವಲ್​ ಭೈರಸಂದ್ರ, ಗಂಗಾ ನಗರ, ಆರ್​ಟಿ ನಗರ, ಮನೋರಾಯನಪಾಳ್ಯ, ಆನಂದ ನಗರ, ವಿ ನಾಗೇನಗಳ್ಳಿ, ಶಾಂಪುರ, ಸುಲ್ತಾನಪಾಳ್ಯ, ಶಾಂತಲಾ ನಗರ, ಅಶೋಕ ನಗರ, ಎಂಜಿ ರೋಡ್, ಬ್ರಿಗೇಡ್ ರೋಡ್, ಹೆಚ್​ಎಎಲ್ 2ನೇ ಸ್ಟೇಜ್, ದೊಪ್ಪನಹಳ್ಲೀ, ಇಂದಿರಾನಗರ 2ನೇ ಸ್ಟೇಜ್, ಲಕ್ಷ್ಮಿಪುರಂ, ಕಲಹಳ್ಳಿ, ಆಂಧ್ರ ಕಾಲೋನಿ, ಕದಿರೈಷ್ಣಪಾಳ್ಯ, ಎಲ್​ಬಿಎಸ್​ ನಗರ, ಎಲ್​ಐಸಿ ಕಾಲೋನಿ, ಹೆಚ್​ಎಎಲ್​ 3ನೇ ಹಂತ, ಜೀವನ್​ಭಿಮಾ ನಗರ, ಕೋಡಿಹಳ್ಳಿ, ಹನುಮಂತಪ್ಪ ಲೇಔಟ್, ಬಜಾರ್ ಸ್ಟ್ರೀಡ್, ಹಲಸೂರ್, ಎಂವಿ ಗಾರ್ಡನ್, ಮುರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್, ದೆಕ್ನಾಬಂಧುನಗರ, ಜಾನಕಿರಾಮ ಲೇಔಟ್, ಸಿದ್ದರಾಮಪ್ಪ ಗಾರ್ಡನ್ ಇಂದು ಕಾವೇರಿ ನೀರು ಬರುವುದಿಲ್ಲ ಎಂದು ಜಲಮಂಡಳಿ ತಿಳಿಸಿದೆ.

ಇದನ್ನೂ ಓದಿ: Karnataka Dams Water Level: ಭಾರೀ ಮಳೆಯಿಂದ ಡ್ಯಾಂಗಳಲ್ಲಿ ನೀರು ಏರಿಕೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Bengaluru Wheeling: ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರೂ ಸೇರಿ 6 ಯುವಕರ ಸೆರೆ; 8 ಬೈಕ್ ವಶಕ್ಕೆ

(Bengaluru water supply No Water Supply in This Areas of Bangalore Today due to BWSSB emergency repair)