ಪರಸ್ತ್ರೀಯರ ಜೊತೆ ಪತಿ ಸರಸ ಸಲ್ಲಾಪ: ಗಂಡನ ರಾಸಲೀಲೆ ವಿಡಿಯೋ ನೋಡಿ ಹೆಂಡ್ತಿ ಶಾಕ್
ಅವರದ್ದು 20 ವರ್ಷಗಳ ದಾಂಪತ್ಯ ಜೀವನ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ ಪತಿ ಪರಸ್ತ್ರೀ ಸಂಗ ಮಾಡಿದ್ದ. ಅದು ಒಂದಲ್ಲ ಎರಡಲ್ಲ ಐದಾರು ಮಹಿಳೆಯರ ಜೊತೆ ಲವ್ವಿ ಡವ್ವಿಯಲ್ಲಿದ್ದ. ಸಾಲದಕ್ಕೆ ಮಹಿಳೆಯರೊಂದಿಗೆ ಸರಸ ಸಲ್ಲಾದ ವಿಡಿಯೋ ಮಾಡಿಟ್ಟುಕೊಂಡಿದ್ದ. ಆದ್ರೆ ಮೊಬೈಲ್ ನಲ್ಲಿದ್ದ ರಾಸಲೀಲೆ ವಿಡಿಯೋಗಳನ್ನ ನೋಡಿ ಹೆಂಡ್ತಿ ಶಾಕ್ ಆಗಿದ್ದಾಳೆ.

ಬೆಂಗಳೂರು, (ಅಕ್ಟೋಬರ್ 16): ಪತ್ನಿಯಿಂದ ಅಂತರ ಕಾಯ್ದುಕೊಂಡು ಪರಸ್ತ್ರೀಯರೊಂದಿಗೆ ಸರಸ ಸಲ್ಲಾಪವಾಡುತ್ತಿದ್ದ ಪತಿರಾಯ ಸಿಕ್ಕಿಬಿದ್ದಿದ್ದಾನೆ. ಪತ್ನಿ ಅನ್ನಪೂರ್ಣ ಹಾಗೂ ಪತಿ ನಾರಾಯಣ್ 20 ವರ್ಷಗಳ ಹಿಂದೆ ಮದುವೆಯಾಗಿದ್ದು, ಬೆಂಗಳೂರಿನ ಇಂದಿರಾನಗರದ ಬಿಎಂ ಕಾವಲ್ ನಲ್ಲಿ ವಾಸವಿದ್ದರು. ಆದ್ರೆ, ಇತ್ತೀಚೆಗೆ ಪತಿ ಹೆಂಡತಿಯಿಂದ ಅಂತರ ಕಾಯ್ದುಕೊಂಡು ಬೇರೆ ಮಹಿಳೆಯರ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದಾನೆ. ಅಲ್ಲದೇ ಮಹಿಳೆಯರೊಂದಿಗಿನ ಪಲ್ಲಂಗದಾಟವನ್ನು ವಿಡಿಯೋ ಮಾಡಿಕೊಂಡಿದ್ದು, ಇದೀಗ ಈ ಹಸಿ ಬಿಸಿ ವಿಡಿಯೋಗಳು ಹೆಂಡ್ತಿ ಕೈಗೆ ಸಿಕ್ಕಿವೆ.
ನಾರಾಯಣ್.ಪತ್ನಿಗೆ ಕೆಪಿಸಿಸಿ ನಲ್ಲಿ ಕೆಲಸ ಮಾಡುತ್ತೇನೆ ಎಂದು 20 ವರ್ಷದ ಹಿಂದೆ ಮದುವೆ ಆಗಿದ್ದ.ಪ್ರಾರಂಭದಲ್ಲಿ ಎಲ್ಲವೂ ಚನ್ನಾಗಿಯೇ ಇತ್ತು.ಆದ್ರೆ ಬರುತ್ತಾ ಬರುತ್ತಾ ಪತ್ನಿ ಬೋರ್ ಆಗಿದ್ದಾಳೆಂದು ಪರಸ್ತ್ರೀ ಸಾಂಗತ್ಯ ಬೆಳೆಸಿದ್ದ. ಕೆಪಿಸಿಸಿ ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ತಿದ್ದ ಆತ ಡಿಸಿಎಂ ಸೇರಿ ಹಲವರು ನನಗೆ ಆತ್ಮೀಯರು ಎಂದು ಮಹಿಳೆಯರ ಮುಂದೆ ಬಿಲ್ಡಪ್ ಕೊಟ್ಟು ಅವರನ್ನ ಪುಸಲಾಯಿಸಿ ಮಂಚಕ್ಕೆ ಕರೆಯುತ್ತಿದ್ದ. ಆದ್ರೆ ನಾರಾಯಣನ ಕಾಮಕಾಂಡ ಹೆಂಡ್ತಿಗೆ ಗೊತ್ತಾಗುತ್ತಿದ್ದಂತೆಯೇ ಸಣ್ಣ ಪುಟ್ಟ ವಿಚಾರಕ್ಕೆ ಆಕೆಯೊಂದಿಗೆ ಗಲಾಟೆ ಮಾಡುತ್ತಿದ್ದ.
ಇದನ್ನೂ ಓದಿ: ಲಾಡ್ಜ್ ನಲ್ಲಿ ಯುವಕನೊಂದಿಗೆ 3 ಮಕ್ಕಳ ತಾಯಿ ಸಾವು: ಅಸಲಿ ಕಾರಣ ಬಿಚ್ಚಿಟ್ಟ 3ನೇ ವ್ಯಕ್ತಿ
ಇನ್ನು ಐದಾರು ಮಹಿಳೆಯರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆಸಾಮಿ ಅವರ ಜೊತೆಗೆ ಕಳೆದ ಖಾಸಗಿ ಕ್ಷಣದ ವೀಡಿಯೋ ಮತ್ತು ಫೋಟೊಗಳನ್ನು ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದ.ಪತ್ನಿ ಮೊಬೈಲ್ ನೋಡ್ತಿದ್ದಂತೆ ಶಾಕ್ ಆಗಿದ್ದಾಳೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮತ್ತೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದು, ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿದ್ದಾಳೆ. ಈ ಸಂಬಂಧ ಪೂರ್ವ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆದಿದೆ.

ಫೋಟೋನಲ್ಲಿರುವ ಈತನೇ ನಾರಾಯಣ. ಈತ ಕೆಪಿಸಿಸಿ ಕಚೇರಿಯಲ್ಲಿ ಮ್ಯಾನೇಜರ್ ಎಂದು ಸುಳ್ಳು ಹೇಳಿಕೊಂಡು ಬಿಲ್ಡಪ್ ಕೊಡುತ್ತಿದ್ದ. ಅಲ್ಲದೇ ಕೆಪಿಸಿಸಿ ಕಚೇರಿ ಹೆಸರು ಹೇಳಿಕೊಂಡು ಮಹಿಳೆಗೆ ಗಾಳ ಹಾಕಿ ಅವರೊಂದಿಗೆ ಲವ್ವಿಡಡವ್ವಿ ಶುರು ಮಾಡುತ್ತಿದ್ದ. ಆದರೆ ಈತ ಯಾವುದೇ ಕೆಪಿಸಿಸಿ ಮ್ಯಾನೇಜರ್ ಅಲ್ಲ.
Published On - 7:47 pm, Thu, 16 October 25



