AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಡ್ಜ್​ ನಲ್ಲಿ ಯುವಕನೊಂದಿಗೆ 3 ಮಕ್ಕಳ ತಾಯಿ ಸಾವು: ಅಸಲಿ ಕಾರಣ ಬಿಚ್ಚಿಟ್ಟ 3ನೇ ವ್ಯಕ್ತಿ

ಬೆಂಗಳೂರಿನ ಯಲಹಂಕ ಲಾಡ್ಜ್ ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯಲ್ಲಿ ಯುವಕ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಪರಸಂಗದ ಮೋಹಕ್ಕೆ ಬಿದ್ದವರಲ್ಲಿ ಪ್ರಿಯಕರ ಸುಟ್ಟುಕರಕಲಾಗಿದ್ರೆ, ಉಸಿರುಗಟ್ಟಿ ಪ್ರಿಯತಮೆ ಕೊನೆಯುಸಿರೆಳೆದಿದ್ದಳು. ಇದ್ದಕ್ಕಿದ್ದಂತೆ ಲಾಡ್ಜ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಕೇಸ್ ತನಿಖೆ ವೇಳೆ ಪ್ರತ್ಯಕ್ಷ ದರ್ಶಿ ಅಸಲಿ ವಿಚಾರ ಬಾಯಿಬಿಟ್ಟಿದ್ದ ಏನದು ಎನ್ನುವ ಡಿಟೇಲ್ಸ್ ಇಲ್ಲಿದೆ.

ಲಾಡ್ಜ್​ ನಲ್ಲಿ ಯುವಕನೊಂದಿಗೆ 3 ಮಕ್ಕಳ ತಾಯಿ ಸಾವು: ಅಸಲಿ ಕಾರಣ ಬಿಚ್ಚಿಟ್ಟ 3ನೇ ವ್ಯಕ್ತಿ
Kaveri And Prashanth
Shivaprasad B
| Updated By: ರಮೇಶ್ ಬಿ. ಜವಳಗೇರಾ|

Updated on: Oct 12, 2025 | 8:12 PM

Share

ಬೆಂಗಳೂರು, (ಅಕ್ಟೋಬರ್ 12): ಯಲಹಂಕ ಲಾಡ್ಜ್ ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯಲ್ಲಿ ಪ್ರಿಯಕರ ರಮೇಶ್ ಸುಟ್ಟು ಕರಕಲಾಗಿದ್ರೆ, ಪ್ರಿಯತಮೆ ಲಾಡ್ಜ್ ಬಾತ್ ರೂಂ ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಳು.ಯಲಹಂಕ ನ್ಯೂ ಟೌನ್ ನಲ್ಲಿ ಮಹಿಳೆ ಯುವಕ ಸಾವು ಕೇಸ್ ಕೈಗೆತ್ತಿಕೊಂಡ ಪೊಲೀಸರಿಗೆ ಅವರಿಬ್ಬರ ಹೊರತಾಗಿ ಅದೇ ರೂಂ ನಲ್ಲಿ ಬೆಂಕಿ ಹೊತ್ತಿಕೊಳ್ಳುವ ಮುನ್ನ ಮತ್ತೋರ್ವ ಇದ್ದ ಎನ್ನುವುದು ಪಕ್ಕಾ ಆಗಿತ್ತು. ಈ ನಿಟ್ಟಿನಲ್ಲಿ ತನಿಖೆ ಕೈಗೊಂಡ ಪ್ರತ್ಯಕ್ಷ ದರ್ಶಿ ಪೊಲೀಸರ ಮುಂದೆ ಅಸಲಿ ವಿಚಾರ ಹೊರಹಾಕಿದ್ದಾನೆ. ಮೃತ ಮಹಿಳೆ ಚಿಕ್ಕಪ್ಪನ ಮಗ ಪ್ರಶಾಂತ್ ನನ್ನ ವಿಚಾರಣೆ ಮಾಡಿದ ಪೊಲೀಸರು, ಮೃತ ರಮೇಶ ಪೆಟ್ರೋಲ್ ಸುರಿದುಕೊಂಡು ಬೆಂಕಿ ಇಟ್ಟುಕೊಂಡಾಗ ಪಕ್ಕದಲ್ಲೇ ಇದ್ದಿದ್ದಾಗಿ ಹೇಳಿದ್ದಾನೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಭಯದಿಂದ ಹೊರ ಓಡಿಬಂದು ಪರಾರಿಯಾಗಿದ್ದ, ಇದಕ್ಕೂ ಮುನ್ನ ಇದೇ ವೇಳೆ ಓಡಿ ಬಾ ಎಂದು ಕಾವೇರಿಯನ್ನ ಪ್ರಶಾಂತ್ ಕರೆದಿದ್ದನಂತೆ. ಆದ್ರೆ ಹೊರ ಹೋಗದೆ ಬಾತ್ ರೂಮ್ ಒಳಗೆ ಲಾಕ್ ಮಾಡಿ ಕುಳಿತುಕೊಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಒಂದು ವೇಳೆ ಅಂದು ಚಿಕ್ಕಪ್ಪನ ಮಗನ ಜೊತೆ ತೆರಳಿದ್ರೆ ಬದುಕುಳಿಯುತ್ತಿದ್ದಳು.

ಇದನ್ನೂ ಓದಿ: 3 ಮಕ್ಕಳಿದ್ದರೂ ಪ್ರಿಯಕರನ ಜೊತೆ ಲಾಡ್ಜ್​​​ಗೆ ಬಂದು ಹೆಣವಾದಳು: ಬೆಂಕಿ ದುರಂತಕ್ಕೆ ಅಸಲಿ ಕಾರಣ ಬಯಲು

ಲಾಡ್ಜ್ ಪಕ್ಕದಲ್ಲೇ ಹೋಗಿ ಒಂದು ಲೀಟರ್ ಪೆಟ್ರೋಲ್ ತಂದಿದ್ದ ಮೃತ ರಮೇಶ್, ಒಂದು ಲೀಟರ್ ಪೆಟ್ರೋಲ್ ನನ್ನ ಸಂಪೂರ್ಣವಾಗಿ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದನಂತೆ. ಪೆಟ್ರೋಲ್ ಸುರಿದುಕೊಳ್ಳುವಾಗ ಕೋಪದಲ್ಲಿ ಬೈದಿದ್ದ ಕಾವೇರಿಗೆ ಬೆದರಿಕೆ ಹಾಕಲು ಹೋಗಿ ಬೆಂಕಿ ಇಟ್ಟುಕೊಂಡು ಸುಟ್ಟು ಕರಕಲಾಗಿದ್ದ.ಮತ್ತೊಂದ್ಕಡೆ ಉಸಿರುಗಟ್ಟಿ ಮಹಿಳೆ ಕಾವೇರಿ ಸಾವನ್ನಪ್ಪಿದ್ದಳು.

ಮದುವೆಗೆ ನಿರಾಕರಿಸಿದ್ದೇ ಘಟನೆಗೆ ಕಾರಣ

ಮೂವರು ಮಕ್ಕಳಿದ್ದಾರೆಂದು ಇತ್ತೀಚೆಗೆ ಕಾವೇರಿ ರಮೇಶನನ್ನ ಅವೈಡ್ ಮಾಡ್ತಿದ್ದಳು,ಇದ್ರಿಂದ ಇಬ್ಬರ ನಡುವೆ ಒಂದು ವಾರದ ಹಿಂದೆ ಜಗಳವಾಗಿತ್ತು.ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿರೋ ಕೂಲ್ ಕಂಫರ್ಟ್ ಎಂಬ ಚಿಕ್ಕ ಲಾಡ್ಜ್. ಇದೇ ಲಾಡ್ಜ್ ನ ರೂಂನಲ್ಲಿ ಸಂಜೆ ಐದು ಗಂಟೆ ವೇಳೆಗೆ ಮತ್ತೆ ಮಾತಯಕತೆಗೆಂದು ಕಾವೇರಿ ಬಡಿಗೇರ್ ಮತ್ತು ರಮೇಶ್ ಸೇರಿದ್ದಾರೆ. ಈ ವೇಳೆ ಅದೇ ರೂಂ ಗೆ ಕಾವೇರಿ ಚಿಕ್ಕಪ್ಪನ ಮಗ ಪ್ರಶಾಂತ್ ಕೂಡ ತೆರಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಅವಘಡ ನಡೆದು ಹೋಗಿದೆ. ಈ ಬೆಂಕಿ ಅನಾಹುತದಲ್ಲಿ 30 ವರ್ಷದ ರಮೇಶ್ ಮತ್ತು ಕಾವೇರಿ ಬಡಿಗೇರ್ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ.

ಮೂಲತಃ ಗದಗ ಮತ್ತು ಹುನಗುಂದ ಮೂಲದ ಈ ಇಬ್ಬರು ಒಂದು ವಾರದಿಂದ ಇದೇ ಲಾಡ್ಜ್ ನಲ್ಲಿ ವಾಸ ಇದ್ರಂತೆ. ಆದರೆ ಇಂದು ಬೆಳಗ್ಗೆ ಇಬ್ಬರಿಗೂ ಜಗಳ ಆಗಿದೆ. ಮಧ್ಯಾಹ್ನ ಹೊರಗಡೆ ಹೋಗಿದ್ದ ರಮೇಶ್ ವಾಪಸ್ ಹೋಗಬೇಕಾದ್ರೆ ಪೆಟ್ರೋಲ್ ತುಂಬಿದ ಬಾಟೆಲ್ ಹಿಡಿದು ಹೋಗಿದ್ದಾನೆ. ಬಳಿಕ ರೂಮಿನಲ್ಲಿ ಜಗಳ ನಡೆದು ಕಾವೇರಿ ಹೆದರಿಸಲು ಹೋಗಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಆದರೆ ಕಾವೇರಿ ರೂಮಿನ ಬಾತ್ ರೂಂಗೆ ಹೋಗಿ ಲಾಕ್ ಮಾಡಿಕೊಂಡ ತಾನು ಕೆಲಸ ಮಾಡ್ತಿದ್ದ ಸಮೀಪದ ಸ್ಪಾ ಓನರ್ ಗೆ ಫೋನ್ ಮಾಡಿದ್ಲು. ಅಷ್ಟೊತ್ತಿಗಾಗಲೇ ಬೆಂಕಿಯಿಂದಾಗಿ ಹೊಗೆಯೆಲ್ಲ ಇಡೀ ಲಾಡ್ಜ್ ಗೆ ವ್ಯಾಪಿಸಿದೆ. ಇದ್ರಿಂದ ಗಾಬರಿಯಾದ ಲಾಡ್ಜ್ ಮಾಲೀಕ‌ ತಕ್ಷಣ ಅಗ್ನಿಶಾಮಕ ಸಿಬ್ಬಂಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬಿಲ್ಡಿಂಗ್ ಗ್ಲಾಸ್ ಹೊಡೆದು ರೂಂ ಒಳಗಡೆ ಹೋಗಿದ್ರು. ಆದರೆ ರಮೇಶ್ ಸುಟ್ಟು ಕರಕಲಾಗಿದ್ರೆ, ಕಾವೇರಿ ಉಸಿರುಗಟ್ಟಿ ಸಾವನ್ನಪ್ಪಿದ್ಲು. ಪ್ರತ್ಯಕ್ಷ ದರ್ಶಿ ಪ್ರಶಾಂತ್ ಹೇಳಿಕೆ ಬೆನ್ನಲ್ಲೇ ಅಸಲಿ ಕಹಾನಿ ತನಿಖೆ ವೇಳೆ ರಿವೀಲ್ ಆಗಿದೆ.

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ