Kannada News » Karnataka » Bengaluru yelachenahalli and anjanapura route will be inaugurated on january 14
ಲೋಕಾರ್ಪಣೆಗೆ ಸಿದ್ಧವಾಯ್ತು ಯಲಚೇನಹಳ್ಳಿ-ಅಂಜನಾಪುರ ನಡುವಿನ ನಮ್ಮ ಮೆಟ್ರೋ ವಿಸ್ತೃತ ಮಾರ್ಗ
ಯಲಚೇನಹಳ್ಳಿ-ಅಂಜನಾಪುರ ನಡುವಿನ ವಿಸ್ತೃತ ಮಾರ್ಗದಲ್ಲಿ ನಮ್ಮ ಮೆಟ್ರೋ ಜ.14ಸಂಕ್ರಾಂತಿ ವಿಶೇಷವಾಗಿ ಲೋಕಾರ್ಪಣೆಗೊಳ್ಳಲಿದೆ. ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಉದ್ಘಾಟನೆ ಮಾಡಲಿದ್ದಾರೆ
ಬೆಂಗಳೂರು: ಯಲಚೇನಹಳ್ಳಿ-ಅಂಜನಾಪುರ ನಡುವಿನ ವಿಸ್ತೃತ ಮಾರ್ಗದಲ್ಲಿ ನಮ್ಮ ಮೆಟ್ರೋ ಜ.14ಸಂಕ್ರಾಂತಿ ವಿಶೇಷವಾಗಿ ಲೋಕಾರ್ಪಣೆಗೊಳ್ಳಲಿದೆ. ಎರಡನೇ ಹಂತದ ಮೊದಲ ರೀಚ್ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಉದ್ಘಾಟನೆ ಮಾಡಲಿದ್ದಾರೆ. 6.29 ಕಿಲೋ ಮೀಟರ್ ಉದ್ದದ ಮಾರ್ಗ ಮೆಟ್ರೋ ಇದಾಗಿದೆ. 5 ಎಲಿವೇಟೆಡ್ ಮೆಟ್ರೋ ನಿಲ್ದಾಣ ಹೊಂದಿದೆ.