ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ, ನೌಕರರಿಗೆ ಒಂದು ಕೋಟಿ ಪರಿಹಾರ

| Updated By: ಆಯೇಷಾ ಬಾನು

Updated on: Jul 24, 2024 | 7:27 AM

ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಚಾಲಕರ ಎಡವಟ್ಟಿನಿಂದ ಕೆಲವೊಮ್ಮೆ ಆಕ್ಸಿಡೆಂಟ್ ಗಳಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ. ಮೊದಲೆಲ್ಲಾ ಮೃತಪಟ್ಟವರ ಕುಟುಂಬಸ್ಥರು ಪರಿಹಾರ ಪಡೆಯಲು ಕೋರ್ಟ್ ಕಚೇರಿ ಅಂತ ಅಲೆಯಬೇಕಿತ್ತು ಆದರೆ, ಸಾರಿಗೆ ಸಚಿವರ ಆದೇಶ, ಇದೀಗ ಕೋರ್ಟ್ ಕಚೇರಿ ಅಲೆದಾಟ ಇಲ್ಲದೆ ಪರಿಹಾರ ಪಡೆಯಬಹುದಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿಯ ನೌಕರರು ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೇ ಬರೋಬ್ಬರಿ ಒಂದು ಕೋಟಿ ರುಪಾಯಿ ನೀಡಲು ತೀರ್ಮಾನ ಮಾಡಲಾಗಿದೆ. ಹಾಗೂ ಬಸ್ ಆಕ್ಸಿಡೆಂಟ್ ನಿಂದ ಮೃತಪಟ್ಟ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಲಾಗುತ್ತೆ.

ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ, ನೌಕರರಿಗೆ ಒಂದು ಕೋಟಿ ಪರಿಹಾರ
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ
Follow us on

ಬೆಂಗಳೂರು, ಜುಲೈ.24: ಇತ್ತೀಚೆಗೆ ಬಿಎಂಟಿಸಿ (BMTC), ಕೆಎಸ್ಆರ್ಟಿಸಿ (KSRTC) ಬಸ್​ಗಳಿಂದ ಸಾಕಷ್ಟು ಅಪಘಾತಗಳು ಆಗ್ತಿವೆ. ಅಮಾಯಕ ಬೈಕ್ ಸವಾರರು, ಪಾದಚಾರಿಗಳು ಆಕ್ಸಿಡೆಂಟ್​ನಲ್ಲಿ (Accident) ಮೃತಪಟ್ಟವರ ಕುಟುಂಬಸ್ಥರು ಪರಿಹಾರ ಪಡೆಯಲು ಕೋರ್ಟ್ ಕಚೇರಿ ಅಂತ ವರ್ಷಗಟ್ಟಲೆ ಅಲೆದಾಡಬೇಕಿತ್ತು. ಐದು ವರ್ಷಕ್ಕೋ, ಹತ್ತು ವರ್ಷಕ್ಕೋ ಪರಿಹಾರ ಸಿಗ್ತಿತ್ತು. ಅದನ್ನು ತಪ್ಪಿಸಲು ಸಾರಿಗೆ ಸಚಿವರು ಮುಂದಾಗಿದ್ದಾರೆ. ಕೆಎಸ್ಆರ್​ಟಿಸಿ, ಬಿಎಂಟಿಸಿ ಬಸ್ ಆಕ್ಸಿಡೆಂಟ್​ನಿಂದ ಮೃತಪಟ್ಟವರಿಗೆ ಇನ್ಮುಂದೆ ಹತ್ತು ಲಕ್ಷ ರುಪಾಯಿ ಪರಿಹಾರ ನೀಡಲಾಗ್ತುತ್ತೆ. ಇತ್ತ ಕೆಎಸ್ಆರ್​ಟಿಸಿ, ಬಿಎಂಟಿಸಿ ಡ್ರೈವರ್ ಕಂಡಕ್ಟರ್​ಗಳು ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೂ ಒಂದು ಕೋಟಿ ರುಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ.

ಈ ಹಿಂದೆ ಕೆಎಸ್ಆರ್ಟಿಸಿ- ಬಿಎಂಟಿಸಿ ಬಸ್ ನಿಂದ ಆಕ್ಸಿಡೆಂಟ್ ಆಗಿ ಮೃತಪಟ್ಟ ವಾಹನ ಸವಾರರು, ಪಾದಚಾರಿಗಳಿಗೆ ಕೇವಲ 25 ಸಾವಿರ ರುಪಾಯಿ ಪರಿಹಾರ ನೀಡಲಾಗ್ತಿತ್ತು, ಇಂದಿನಿಂದ ಹತ್ತು ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಅಗ್ನಿ ಅವಘಡ, ಬಸ್ ಆಕ್ಸಿಡೆಂಟ್ ನಿಂದ ಮೃತಪಡುವ ಪ್ರಯಾಣಿಕರಿಗೂ ಹತ್ತು ಲಕ್ಷ ರುಪಾಯಿ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಹಿಂದೆ ಬಿಎಂಟಿಸಿ, ಕೆಎಸ್ಆರ್ಟಿಸಿ ಕಂಡಕ್ಟರ್ ಡ್ರೈವರ್ ಗಳು ಆಕ್ಸಿಡೆಂಟ್ ಆಗಿ ತೀರಿಕೊಂಡರೆ ಕೇವಲ ಮೂರು ಲಕ್ಷ ರುಪಾಯಿ ನೀಡಲಾಗ್ತಿತ್ತು. ಈಗ ಒಂದು ಕೋಟಿ ರುಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಛಿದ್ರ ಮಾಡಿದರೆ ಕೆಂಪೇಗೌಡರ ಶಾಪ ತಟ್ಟಲಿದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

ಒಟ್ನಲ್ಲಿ ಕೆಲ ಕೆಎಸ್ಆರ್ಟಿಸಿ, ಬಿಎಂಟಿಸಿ ಚಾಲಕರ ನಿರ್ಲಕ್ಷ್ಯ ದಿಂದ ಅಮಾಯಕರು ಪ್ರಾಣ ಕಳೆದುಕೊಂಡು ಅವರ ಕುಟುಂಬ ಬೀದಿಗೆ ಬೀಳ್ತಿತ್ತು, ಇತ್ತ ಕೆಎಸ್ಆರ್ಟಿಸಿ, ಬಿಎಂಟಿಸಿ ಡ್ರೈವರ್ ಕಂಡಕ್ಟರ್ ಗಳು ಆಕ್ಸಿಡೆಂಟ್ ನಲ್ಲಿ ಮರಣ ಹೊಂದಿದ್ದ ಕುಟುಂಬಗಳು ಪರಿಹಾರಕ್ಕೆ ಪರದಾಡುವಂತಾಗಿತ್ತು. ಆದರೆ ಇದೀಗ ಇಬ್ಬರಿಗೂ ಸಾರಿಗೆ ಸಚಿವರು ಯಾವುದೇ ಸಮಸ್ಯೆ ಆಗದಂತೆ ಪರಿಹಾರ ನೀಡಲು ಮುಂದಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:25 am, Wed, 24 July 24